ಬೆಳಗಾವಿ, (ಏ.29): ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ವಿರುದ್ಧ ಪ್ರಕರಣ ದಾಖಲಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಕ್ಕೆ ಸಬ್ ಇನ್ಸ್‌ಪೆಕ್ಟರ್‌ನನ್ನು ಸಸ್ಪೆಂಡ್ ಮಾಡಲಾಗಿದೆ.

ಯೋಧನ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದಡಿ ಸದಲಗಾ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್‌ ಅವರನ್ನು ತಲೆದಂಡ ಮಾಡಲಾಗಿದೆ.

ಯೋಧನಿಗೆ ಬಾಸುಂಡೆ ಬರುವಂತೆ ಥಳಿತ: ಬಸವರಾಜ್‌ ಬೊಮ್ಮಾಯಿ ರಾಜೀನಾಮೆಗೆ ಅಭಿಯಾನ..!

ಇನ್ಸ್‌ಪೆಕ್ಟರ್ ಅನಿಲ್ ಕುಮಾರ್‌ ಅವರನ್ನು ಅಮಾನತು ಮಾಡಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಇಂದು (ಬುಧವಾರ) ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಘಟನೆ ಹಿನ್ನೆಲೆ
ಮನೆ ಮುಂದೆ ಬೈಕ್ ತೊಳೆಯುತ್ತಿದ್ದ ಯೋಧ ಸಚಿನ್ ಸಾವಂತ್ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಪ್ರಶ್ನಿಸಿದ್ದರು. ಈ ವೇಳೆ ಮಾತಿನ ಚಕಮಿಕಿ ನಡೆದು ನಂತರ ಪೊಲೀಸರು ಹಲ್ಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಯೋಧ ಸಹ ಹೊಡೆದಿದ್ದರು. ಈ ಸಂಬಂಧ ಬೆಳಗಾವಿ ಪೊಲೀಸರು ಸಚಿನ್ ರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. 

ಇದಾದ ಐದು ದಿನಗಳ ನಂತರ ಸಚಿನ್ ಅವರಿಗೆ ಜಾಮೀನು ಸಿಕ್ಕಿತ್ತು. ಅದಕ್ಕೆ ಕಾರಣ ಯೋಧನ ಕೈಗೆ ಕೋಳ ತೊಡಿಸಿ ಜೈಲಿನಲ್ಲಿ ಕೂರಿಸಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೇ ವೇಳೆ ಪೊಲೀಸರು ಕ್ರಮವನ್ನು ತೀವ್ರವಾಗಿ ಖಂಡಿಸಲಾಗಿತ್ತು.

ಕಮಾಂಡೋ-ಪೊಲೀಸ್‌ ಜಟಾಪಟಿ ಕೇಸ್‌: CRPF ಯೋಧನಿಗೆ ಷರತ್ತುಬದ್ಧ ಜಾಮೀನು 

ಇದೀಗ ಜಾಮೀನು ಪಡೆದು ಹೊರಬಂದಿರುವ ಸಚಿನ್ ಅವರನ್ನು ಠಾಣೆಯಲ್ಲಿ ಬಾಸುಂಡೆ ಬರುವಂತೆ ಅಮಾನುಷವಾಗಿ ಥಳಿಸಲಾಗಿದೆ ಎಂಬ ಪೋಸ್ಟ್ ವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಪೊಲೀಸರ ನಡೆಗೆ ಆಕ್ರೊಶ ವ್ಯಕ್ತವಾಗುತ್ತಿದ್ದು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಟ್ವಿಟ್ಟರ್‌ನಲ್ಲಿ ಅಭಿಯಾನ ಶುರುವಾಗಿದೆ.

ಇದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸದಲಾ ಠಾಣೆಯ ಇನ್ಸ್‌ಪೆಕ್ಟರ್‌ನ್ನು ಸಸ್ಪೆಂಡ್ ಮಾಡಿ ಕೈತೊಳೆದುಕೊಳ್ಳಲಾಗಿದೆ.