Asianet Suvarna News Asianet Suvarna News

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಸಂಸದ ಜಗದೀಶ್ ಶೆಟ್ಟರ್ ಸವಾಲ್ ಏನದು? ಅಕೆಪ್ಟ್ ಮಾಡ್ತಾರಾ ಸಿಎಂ?

ತಾನು ನಿರಪರಾಧಿ ಎಂದು ಪದೇ ಪದೇ ಹೇಳುವ ಸಿದ್ದರಾಮಯ್ಯ  ಕೆಂಪಣ್ಣ ಆಯೋಗದ ವರದಿಯನ್ನ ವಿಧಾನಸಭಾ ಕಲಾಪದ ವೇಳೆ ಮಂಡನೆ ಮಾಡಿ, ನೀವು ನಿರಪರಾಧಿ  ಆಗಿದ್ರೆ, ಅದು ಸಾರ್ವಜನಿಕರಿಗೆ ಗೊತ್ತಾಗಲಿ ಎಂದು ಸವಾಲ್ ಸಿಎಂ ಸಿದ್ದರಾಮಯ್ಯಗೆ ಸಂಸದ ಜಗದೀಶ್ ಶೆಟ್ಟರ್ ಸವಾಲು ಹಾಕಿದರು.

Belagavi MP Jagadish shettar reacts about mysuru muda scam and arkavati denotification case at bagalkote rav
Author
First Published Jul 13, 2024, 1:36 PM IST | Last Updated Jul 13, 2024, 1:36 PM IST

ಬಾಗಲಕೋಟೆ (ಜು.13): ರಾಜ್ಯದಲ್ಲಿ ಮುಡಾ ಅಕ್ರಮ ವಿಚಾರವಾಗಿ ಬಹುದೊಡ್ಡ ಪ್ರಮಾಣದಲ್ಲಿ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು.

ಇಂದು ಬಾಗಲಕೋಟೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಸುಮಾರು 200 ಕೋಟಿಯಷ್ಟು ಅಪರಾತಪರಾ ಆಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಈಗಾಗಲೇ ಇಡಿ(ED) ಹಾಗೂ ಸಿಬಿಐ(CBI) ತನಿಖೆ ನಡೆಸುತ್ತಿದೆ. ಎಸ್‌ಐಟಿಯಿಂದ ನಾಗೇಂದ್ರರನ್ನ ಅರೆಸ್ಟ್ ಮಾಡಲು ಆಗ್ತಾನೆ ಇರಲಿಲ್ಲ. ಆದರೆ ಇದೀಗ ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇಷ್ಟೆಲ್ಲ ಅಪರಾತಪರಾ ನಡೆದರೂ ಸಿಎಂ ಹಾಗೂ ಇಡೀ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕುವಂತ ಕೆಲಸ ಮಾಡಿತ್ತು. ಆದ್ರೆ ಇಡಿ ತನಿಖೆ ಆರಂಭವಾಗ್ತಿದ್ದಂತೆ ಹೊಸ ವಿಚಾರಗಳು ಹೊರಬರ್ತಿವೆ ಎಂದರು.

 

ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ: ನಾಗೇಂದ್ರ ಬಂಧನ ಬಳಿಕ ಬಸನಗೌಡ ದದ್ದಲ್ ನಾಪತ್ತೆ!

ವಾಲ್ಮೀಕಿ ಹಗರಣದ ಜೊತೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA SCam)ದಲ್ಲೂ ಸಾವಿರಾರು ಕೋಟಿ ಹಗರಣ ನಡೆದಿದೆ. ಇದರಲ್ಲಿ ನೇರವಾಗಿ ಸಿಎಂ ಸಿದ್ದರಾಮಯ್ಯ ಶಾಮೀಲಾಗಿದ್ದು ಕಂಡುಬಂದಿದೆ. ಅವರು ಪತ್ನಿ ಹೆಸರಲ್ಲಿ ಮೂರು ಎಕರೆಯಷ್ಟು ಜಮೀನು ಇದೆ. ಅದನ್ನ 2009ರ ನಗರಾಭಿವೃದ್ಧಿ ರೂಲ್ಸ್ ಪ್ರಕಾರ ಲೇಔಟ್ ಮಾಡಲು ಭೂಸ್ವಾಧೀನ ಮಾಡಿದ್ರೆ ಅದಕ್ಕೆ ಯಾವುದೇ ಹಣ ಕೊಡುವಂತದ್ದೇನಿಲ್ಲ. ಅದರ ಬದಲು ಬೇರೆ ಕಡೆ ಅವರಿಗೆ ಶೇ.40-50 ಫ್ಲಾಟ್‌ಗಳನ್ನ ಕೊಡಬೇಕು ಎಂಬುವ ಪ್ಯಾಕೇಜ್ ಅದು. ಅದೇ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯ, ನಮಗೆ 50% ಪ್ಲಾಟ್ ಅಲೋಟ್ ಮಾಡಿದ್ದು ಸರಿಯಿದೆ ಅಂತಾ ವಾದ ಮಾಡ್ತಿದ್ದಾರೆ. ಅವ್ರ ಲ್ಯಾಂಡ್ ಅಕ್ವಿಜಷೇನ್ ಆಗಿಲ್ಲ, ಹಿಂದೆ ನೊಟಿಫೈ ಆಗಿತ್ತು, ಮುಂದೆ ಡಿ ನೋಟಿಫೈ ಆಯಿತು. ಇಷ್ಟೆಲ್ಲ ಆದ ಮೇಲೆ ಆ ಜಮೀನು ಅವ್ರ (ಸಿಎಂ) ಕಬ್ಜಾದಲ್ಲಿರಬೇಕಲ್ಲ. ಡೆವೆಲಪ್‌ಮೆಂಟ್ ಅಥಾರಿಟಿಯಿಂದ ಭೂಮಿ ಕಬ್ಜಾ ಯಾಕೆ ತಗೊಂಡಿಲ್ಲ ಅನ್ನೋ ಪ್ರಶ್ನೆ ಬರುತ್ತೆ. ನಿಮ್ಮ ಜಾಗದಲ್ಲಿ ಡೆವೆಲ್ಪಮೆಂಟ್ ಆಥಾರಿಟಿ ಅವ್ರು ಎನ್ಕ್ರೋಚ್ ಮಾಡಿ, ಲೇಔಟ್ ಮಾಡುವ ಪ್ರಶ್ನೆಯೇ ಬರತಿರಲಿಲ್ಲ. ನೀವು ಉದ್ದೇಶ ಪೂರ್ವಕವಾಗಿ, ಪ್ಲಾಟ್ ಡೆವಲಪ್ಮೆಂಟ್ ಮಾಡಿ, ಮುಂದೆ ಪ್ಲಾಟ್ ಕ್ಲೇಮ್‌ ಮಾಡಿದ್ರಾಯಿತು ಎಂದು ಅಂದುಕೊಂಡಿದ್ದು. ಇದು ಉದ್ದೇಶಪೂರ್ವಕ ಇನ್ನೋಸೆನ್ಸ್. ನಿಮ್ಮ ಲೇಔಟ್‌ನಲ್ಲಿ ಯಾರೋ ಬಂದು ಪ್ಲಾಟ್ ಹಂಚುತ್ತಾರೆ ಅಂದ್ರೆ ಮಾಲೀಕರಾಗಿ ನೀವು ಸುಮ್ಮನೆ ಕೂತಿದ್ದು ದೊಡ್ಡ ಅಪರಾಧ. ಸಿಎಂ ಉದ್ದೇಶಪೂರ್ವಕವಾಗಿ ಸೈಲೆಂಟ್ ಇದ್ದಾರೆ. ಹತ್ತು ವರ್ಷಗಳ ಹಿಂದೆ ಆದ ಲೇಔಟ್ ನಲ್ಲಿ, ಬೆಲೆಬಾಳುವ ಸೈಟ್ ಗಳನ್ನ ತಮ್ಮ ಕುಟುಂಬದ ಹೆಸ್ರಲ್ಲಿ ಮಾಡಿಕೊಳ್ತಾರೆ ಅಂದ್ರೆ, ಇದ್ರಲ್ಲಿ ದೊಡ್ಡದಾದಂತ ಭ್ರಷ್ಟಾಚಾರ ನಡೆದಿದೆ. ಅದಕ್ಕಾಗಿ ಈ ಪ್ರಕರಣದಲ್ಲಿ ಸಿಬಿಐ ತನಿಖೆ ಆಗಬೇಕು ಎಂದು ಬಿಜೆಪಿ ಆಗ್ರಹಿಸುತ್ತೆ. ಅದಕ್ಕಾಗಿ ಹೋರಾಟಗಳು ಪ್ರಾರಂಭವಾಗಿದೆ ಎಂದರು. 

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ

ಹಿಂದೆ ಅರ್ಕಾವತಿ ಪ್ರಕರಣದಲ್ಲಿ ರಿಡೂ ಮಾಡಿದ್ದ ಸಿದ್ದರಾಮಯ್ಯ ವಿರುದ್ಧ ನಾವು ದೊಡ್ಡ ಪ್ರಮಾಣದ ಹೋರಾಟ ಮಾಡಿದ್ದೆವು. ಆಗಲೂ ನಾವು ಸಿಬಿಐಗೆ ಒತ್ತಾಯ ಮಾಡಿದ್ದೆವು. ನ್ಯಾಯಾಂಗ ತನಿಖೆ ಮಾಡ್ತಿವಿ ಅಂತಾ ನ್ಯಾಯಮೂರ್ತಿ ಕೆಂಪಣ್ಣ ಆಯೋಗವನ್ನು ನೇಮಕವಾಗಿ ತನಿಖೆ ಆಯ್ತು ಆದ್ರೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ವರದಿ ಏನಾಗಿದೆ ಅದರಲ್ಲಿ ಏನಿದೆ ಎಂದು ಬಹಿರಂಗಪಡಿಸಲಿ. ಅರ್ಕಾವತಿ ಡಿನೋಟಿಫಿಕೆಷನ್ ಪ್ರಕರಣ(Arkavati Denotification Case)ದಲ್ಲಿ ನಾನು ನಿರಪರಾಧಿ ಎಂದು ಪದೇ ಪದೇ ಹೇಳುವ ಸಿದ್ದರಾಮಯ್ಯ(cm siddaramaiah),  ಕೆಂಪಣ್ಣ ಆಯೋಗದ ವರದಿ(Kempanna commission report)ಯನ್ನ ವಿಧಾನಸಭಾ ಕಲಾಪದ ವೇಳೆ ಮಂಡನೆ ಮಾಡಿ, ನೀವು ನಿರಪರಾಧಿ ಅಂತಾ ಪ್ರೂವ್ ಆಗಿದ್ರೆ, ಅದು ಸಾರ್ವಜನಿಕರಿಗೆ ಗೊತ್ತಾಗಲಿ ಎಂದು ಸವಾಲ್,  ಆ ವರದಿಯನ್ನ ಮಂಡನೆ ಮಾಡಲ್ಲ ಅಂದ್ರೆ ಕೆಂಪಣ್ಣ ಆಯೋಗದ ವರದಿ ಸಿದ್ದರಾಮಯ್ಯ ವಿರುದ್ಧ ಇದೆ ಅಂತಾ ನಾನು ಸ್ಪಷ್ಟವಾಗಿ ಹೇಳ್ತೇನೆ. ಮುಡಾ ಹಗರಣ ಸಿಬಿಐ ತನಿಖೆ ಆಗಲೇಬೇಕು, ಅದಕ್ಕಾಗಿ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಸಂಸದರು.

Latest Videos
Follow Us:
Download App:
  • android
  • ios