Asianet Suvarna News Asianet Suvarna News

ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಎಷ್ಟು ಕೋಟಿ ಒಡತಿ..?

ಬೆಳಗಾವಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು ಈ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್ ಅಂಗಡಿ ಅವರ ಪತ್ನಿ ಮಂಗಲ ಅಂಗಡಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ಮೊತ್ತವನ್ನು ಘೋಷಣೆ ಮಾಡಿದ್ದಾರೆ. 

Belagavi BJP Candidate Mangala Angadi Has 14 Crore Assets snr
Author
Bengaluru, First Published Mar 31, 2021, 8:23 AM IST

ಬೆಳಗಾವಿ (ಮಾ.31):  ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ ಅಂಗಡಿ  3.74 ಕೋಟಿ ರು. ಮೌಲ್ಯದ ಚರಾಸ್ತಿ ಹಾಗೂ 11.03 ಕೋಟಿ  ರು. ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು  14.77 ಕೋಟಿ  ರು. ಮೌಲ್ಯದ ಆಸ್ತಿಯ ಒಡತಿ ಆಗಿದ್ದಾರೆ. 2019ರಲ್ಲಿ ಮಂಗಲ ಅಂಗಡಿ ಹೆಸರಲ್ಲಿ 13.03 ಕೋಟಿ  ರು. ಆಸ್ತಿ (3.57 ಕೋಟಿ ಸ್ಥಿರಾಸ್ತಿ,  9.45 ಕೋಟಿ ಚರಾಸ್ತಿ) ಹೊಂದಿದ್ದರು. 

ಎರಡು ವರ್ಷಗಳಲ್ಲಿ ಅವರ ಆಸ್ತಿ ಒಟ್ಟು  .1.74 ಕೋಟಿ  ರು. ಹೆಚ್ಚಳವಾಗಿದೆ. ಬಿಎಸ್ಸಿ ಪದವೀಧರೆಯಾಗಿರುವ ಮಂಗಲ ಅಂಗಡಿ ಅವರ ಬಳಿ   81.35 ಲಕ್ಷ ನಗದು ಇದೆ. ಮಂಗಲ ಅವರ ಪತಿ ದಿವಂಗತ ಸುರೇಶ ಅಂಗಡಿ ಹೆಸರಿನಲ್ಲಿ ಒಟ್ಟು  15.94 ಕೋಟಿ ಆಸ್ತಿ ಇದೆ. ತಮ್ಮ ಪತಿ ಸುರೇಶ ಅಂಗಡಿ ಹೆಸರಿನಲ್ಲಿರುವ ಸ್ಥಿರಾಸ್ತಿ, ಚರಾಸ್ತಿ ನನ್ನ ಹೆಸರಿಗೆ ವರ್ಗಾವಣೆಯಾಗುವ ಪ್ರಕ್ರಿಯೆ ಮುಂದುವರೆದಿದೆ ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. 

2 ವರ್ಷದಲ್ಲಿ ಸತೀಶ್‌ ಆಸ್ತಿ ಭಾರಿ ಏರಿಕೆ : ಹೆಚ್ಚಳವಾಗಿದ್ದೆಷ್ಟು..? ...

2019ರಲ್ಲಿ ಸುರೇಶ ಅಂಗಡಿ ಅವರ ಒಟ್ಟು ಆಸ್ತಿ  14.37 ಕೋಟಿ ( 12.24 ಕೋಟಿ ಸ್ಥಿರಾಸ್ತಿ,  2.12 ಕೋಟಿ ಚರಾಸ್ತಿ) ಇತ್ತು. ಈಗ ಅವರ ಆಸ್ತಿಯಲ್ಲಿ  1.57 ಕೋಟಿ ಆಸ್ತಿ ಹೆಚ್ಚಳವಾಗಿದೆ.

ವಿವಿಧ ಟ್ರಸ್ಟ್‌, ಕಂಪನಿಗಳ ಹೆಸರಿನಲ್ಲಿ  11.05 ಕೋಟಿ  ರು. ಚರಾಸ್ತಿ ಹೊಂದಿದ್ದಾರೆ. ಅಲ್ಲದೆ,  95.52 ಕೋಟಿ  ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಹೀಗೆ ಒಟ್ಟು 106.57 ಕೋಟಿ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಟ್ರಸ್ಟ್‌ ಮತ್ತು ಕಂಪನಿಗಳ ಹೆಸರಿನಲ್ಲಿದೆ. ಜತೆಗೆ ಇದೆ ಟ್ರಸ್ಟ್‌ನಲ್ಲಿ  95.95  ಲಕ್ಷ ಸಾಲ ಇದೆ ಎಂದು ತಿಳಿಸಿದ್ದಾರೆ.  64 ಲಕ್ಷ ಮೌಲ್ಯದ 1600 ಗ್ರಾಂ ಚಿನ್ನಾಭರಣ ಇದೆ. ವಿವಿಧ ಬ್ಯಾಂಕುಗಳಲ್ಲಿ ಒಟ್ಟು  60.23 ಲಕ್ಷ ಸಾಲ ಮಾಡಿದ್ದಾರೆ.

ಮಂಗಲ ಸುರೇಶ ಅಂಗಡಿ ಅವರ ಕುಟುಂಬದ ಒಟ್ಟು ಆಸ್ತಿ  30.72 ಕೋಟಿ ಇದೆ. ಜತೆಗೆ ಟ್ರಸ್ಟ್‌ ಮತ್ತು ಕಂಪನಿ ಹೆಸರಿನಲ್ಲಿ 106 ಕೋಟಿ ಆಸ್ತಿ ಇದೆ.

Follow Us:
Download App:
  • android
  • ios