ಕುರಿ ಮಾಂಸದ ಬದಲು ದನದ ಮಾಂಸದ ಬಿರಿಯಾನಿ; ಮಲೆನಾಡಿಗೆ ಬರುವ ಪ್ರವಾಸಿಗರೇ ಎಚ್ಚರ!

ಚಿಕ್ಕಮಗಳೂರಿನ ಕೆಲವು ಹೋಟೆಲ್‌ಗಳಲ್ಲಿ ಪ್ರವಾಸಿಗರಿಗೆ ಕುರಿ ಮಾಂಸದ ಬದಲಿಗೆ ದನದ ಮಾಂಸದ ಬಿರಿಯಾನಿ ನೀಡುತ್ತಿರುವ ಪ್ರಕರಣ ಚಿಕ್ಕಮಗಳೂರು ಪೊಲೀಸರು ದಾಳಿ ಮಾಡಿ ಬಯಲಿಗೆಳೆದಿದ್ದಾರೆ.

Beef biryani instead of mutton tourists who come to the malenadu beware chikkamagaluru rav

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಆ.30) : ಚಿಕ್ಕಮಗಳೂರು ಪ್ರವಾಸಿಗರ ಪಾಲಿಗೆ  ಭೂಲೋಕದ ಸ್ವರ್ಗವೇ ಸರಿ. ದೃಷ್ಟಿ ಹಾಯಿಸಿದಷ್ಟು ಮುಗಿಯದ ಬೆಟ್ಟಗುಡ್ಡಗಳ ಸಾಲು. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಕೂಡ ಫುಲ್ ಫಿದಾ. ಮುಳ್ಳಯ್ಯನಗಿರಿ ಟು ದತ್ತಪೀಠ, ದೇವರಮನೆಗುಡ್ಡ,  ರಾಣಿಝರಿ ಮತ್ತಷ್ಟು ಚೆಂದ. ಇಲ್ಲಿನ ಪ್ರಕೃತಿಯಷ್ಟೆ ನಾನ್‍ವೆಜ್ ಕೂಡ ಅಷ್ಟೆ ಚೆಂದ. ಕಾಫಿನಾಡು ನಾನ್ ವೆಜ್‍ಗೂ ಕೂಡ ಫೇಮಸ್. ಒಂದು ಹೋಟೇಲ್ ಗಿಂತ ಮತ್ತೊಂದು ಹೋಟೇಲ್ ರುಚಿ, ಶುಚಿಗೆ ಹೆಸರುವಾಸಿ, ಆದ್ರೆ  ಇದೀಗ ಪೊಲೀಸರ ದಾಳಿಯಿಂದ ಕೆಲ ಹೋಟೇಲ್ ನಿಜ ಬಣ್ಣ ಬಯಲಾಗಿದೆ. ಕುರಿ ಮಾಂಸದ ಬಿರಿಯಾನಿ ಬದಲು ಗೋ ಮಾಂಸದ ಬಿರಿಯಾನಿ ನೀಡಿ ಪೊಲೀಸರ ಅತಿಥಿ ಆಗಿದ್ದಾರೆ. 

ರೆಡ್ ಹ್ಯಾಂಡ್ ಆಗಿ ಸೀಜ್ ಮಾಡಿದ ಚಿಕ್ಕಮಗಳೂರು ಪೊಲೀಸರು

ಕಾಫಿನಾಡು ಚಿಕ್ಕಮಗಳೂರು ಹೇಳಿಕೇಳಿ ಪ್ರವಾಸಿ ಜಿಲ್ಲೆ.ಪ್ರವಾಸೋದ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ದಿನದಿಂದ ದಿನಕ್ಕೆ ಕಾಫಿನಾಡ ಪ್ರವಾಸೋದ್ಯಮವೂ ಬೆಳೆಯುತ್ತಲೇ ಇದೆ. ಪ್ರವಾಸಿಗರನ್ನ ಆಕರ್ಷಿಸಲು ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಮಾಲೀಕರು ಕೂಡ ಇನ್ನಿಲ್ಲದ ಕರಸತ್ತು ನಡೆಸುತ್ತಿದ್ದಾರೆ. ಆದ್ರೆ ಪ್ರವಾಸಿಗರನ್ನ ಆಕರ್ಷಿಸೋದ್ರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಜ್ ಅಡುಗೆ ಮಾಡುತ್ತಿದ್ದಾರೆ. 

ಚಿಕ್ಕಮಗಳೂರು: ಮಲೆನಾಡಿನ ಈ ಗ್ರಾಮಗಳಿಗೆ ವಿದ್ಯುತ್ ಇಲ್ಲ, ನೆಟ್ವರ್ಕ್ ಕೇಳಲೇಬೇಡಿ

ಕುರಿ ಮಟನ್ ಕೆಜಿಗೆ 700-800 ರೂಪಾಯಿ. ಅದೆ ದನದ ಮಟನ್ ಆದರೆ 200-300 ರೂಪಾಯಿಗೆ ಸಿಗುತ್ತೆ. ಹೀಗಾಗಿ ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಕ್ಸ್ ಮಾಡಿ ಅಡುಗೆ ಮಾಡಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿ ಐದು ಕೆಜಿ ದನದ ಮಾಂಸ ಹಾಗೂ ಅದೇ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ. 

ಹೋಟೆಲ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ : 

ಯಾವಾಗ ಹೋಟೆಲ್‍ನಲ್ಲಿ ದನದ ಮಾಂಸ ಬಳಸುತ್ತಾರೆ ಎಂದು ಗೊತ್ತಾಯ್ತೋ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಹೋಟೆಲ್‌ಗಳಲ್ಲಿ ನಾನ್‌ವೆಜ್ ತಿನ್ನಲು ಯೋಚಿಸುವಂತಾಗಿದೆ. ಜಿಲ್ಲೆಗೆ ಬರುವ ಲಕ್ಷಾಂತರ ಪ್ರವಾಸಿಗರು ಕೂಡ ಜಿಲ್ಲೆಯ ಸೌಂದರ್ಯದಷ್ಟೆ ಇಲ್ಲಿನ ಊಟವನ್ನೂ ಲೈಕ್ ಮಾಡುತ್ತಾರೆ. ಆ ರೀತಿ ನಾನ್ ವೆಜ್ ಪ್ರಿಯರನ್ನೆ ಬಂಡವಾಳ ಮಾಡಿಕೊಂಡು ಹೋಟೆಲ್ ಮಾಲೀಕರು ಇಂಥ ದಂಧೆ ಮಾಡುತ್ತಿದ್ದಾರೆ. ಹೋಟೆಲ್ ಮಾಲೀಕರ ದುರಾಸಗೆ ಸ್ಥಳಿಯರು ಜೊತೆ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ. 

ಹಿಂದೂಗಳಲ್ಲಿ ಯಾರೂ ದನದ ಮಾಂಸ ತಿನ್ನೋದಿಲ್ಲ. ಹೀಗಿರುವಾಗ ಹೋಟೆಲ್‍ಗಳಲ್ಲಿ ಕುರಿ ಮಾಂಸ ಎಂದು ದನದ ಮಾಂಸ ಕೊಟ್ಟರೆ ಮನುಷ್ಯರ ಭಾವನೆ, ಸಿದ್ದಾಂತದ ಜೊತೆ ಆಟವಾಡಿದಂತಾಗುತ್ತದೆ. ಬಜರಂಗದಳ ಕೂಡ ಹೋಟೆಲ್ ಮಾಲೀಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಗೋವು ತಾಯಿ ಎಂದು ಪೂಜಿಸುವ ಮಲೆನಾಡಲ್ಲಿ ಈ ರೀತಿ ಗೊತ್ತಿಲ್ಲದಂತೆ ಕುರಿ ಜೊತೆ ದನದ ಮಾಂಸ ಮಿಕ್ಸ್ ಮಾಡಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಜಗಳವಾಡಿ ಹೋಗಿದ್ದಕ್ಕೆ ಪತ್ನಿಯ ತವರು ಮನೆಗೇ ಮಾಟ ಮಾಡಿಸಿದ ಪತಿರಾಯ!

ಸದ್ಯ ಪೊಲೀಸರ ಕಾರ್ಯಾಚರಣೆಗೆ ಸ್ಥಳಿಯರು ಭೇಷ್ ಅಂದಿದ್ದಾರೆ. ಅದೇ ರೀತಿ, ಇಂತಹಾ ಮೋಸದ ಜಾಲಕ್ಕೆ ಪೊಲೀಸರು ಸಂಪೂರ್ಣ ಬ್ರೇಕ್ ಹಾಕಬೇಕೆಂದು ಸ್ಥಳಿಯರು ಒತ್ತಾಯವಾಗಿದೆ.

Latest Videos
Follow Us:
Download App:
  • android
  • ios