Asianet Suvarna News Asianet Suvarna News

ಚಿಕ್ಕಮಗಳೂರು: ಮಲೆನಾಡಿನ ಈ ಗ್ರಾಮಗಳಿಗೆ ವಿದ್ಯುತ್ ಇಲ್ಲ, ನೆಟ್ವರ್ಕ್ ಕೇಳಲೇಬೇಡಿ!

ನಾವು ಇಲ್ಲಿ ಡಿಜಿಟಲ್ ಇಂಡಿಯಾ 4G, 5G ಎಂದು ಹೆಮ್ಮೆಪಡುತ್ತಿರುವ ಹೊತ್ತಲ್ಲೇ  2ಜಿ ನೆಟ್ವರ್ಕ್ ಕೂಡ ಸಿಗದ ಪರಿತಪಿಸುತ್ತಿರುವ ಗ್ರಾಮಗಳು ಇವೆ. ದೂರದ ಸಂಬಂಧಿಕರಿಗೆ ಕರೆ ಮಾಡಲು ಕೂಡ ನೆಟ್ವರ್ಕ್ ಸಿಗುವುದಿಲ್ಲ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಲವು ಗ್ರಾಮಗಳು ಈ ಸಮಸ್ಯೆ ತೀವ್ರವಾಗಿ ಎದುರಿಸುತ್ತಿವೆ.

villages deprived of basic facilities in kalasa taluku at chikkamgaluru rav
Author
First Published Aug 30, 2023, 5:56 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಆ.30) : ನಾವು ಇಲ್ಲಿ ಡಿಜಿಟಲ್ ಇಂಡಿಯಾ 4G, 5G ಎಂದು ಹೆಮ್ಮೆಪಡುತ್ತಿರುವ ಹೊತ್ತಲ್ಲೇ  2ಜಿ ನೆಟ್ವರ್ಕ್ ಕೂಡ ಸಿಗದ ಪರಿತಪಿಸುತ್ತಿರುವ ಗ್ರಾಮಗಳು ಇವೆ. ದೂರದ ಸಂಬಂಧಿಕರಿಗೆ ಕರೆ ಮಾಡಲು ಕೂಡ ನೆಟ್ವರ್ಕ್ ಸಿಗುವುದಿಲ್ಲ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಲವು ಗ್ರಾಮಗಳು ಈ ಸಮಸ್ಯೆ ತೀವ್ರವಾಗಿ ಎದುರಿಸುತ್ತಿವೆ.

ನೆಟ್ವರ್ಕ್ ಬಿಡಿ, ಈ ಗ್ರಾಮಗಳಿಗೆ ವಿದ್ಯುತ್ ಸಹ ಇರುವುದಿಲ್ಲ. ಈ ಗ್ರಾಮಗಳಲ್ಲಿ ಕರೆಂಟು ಹೊರಟರೆ ಮತ್ತೆ ಬರುವುದು ಹದಿನೈದು ದಿನಗಳಾಗಬಹುದು. ಹೀಗೆ ಇಲ್ಲಿನ ಜನರು ವಿದ್ಯುತ್ ಇಲ್ಲ, ಮೊಬೈಲ್ ನೆಟ್ವರ್ಕ್ ಇಲ್ಲದೆ ಕಂಗಲಾಗಿರುವ ಕಂಗಾಲಾಗಿರುವ ಗ್ರಾಮಸ್ಥರು. ಕರೆ ಮಾಡಬೇಕೆಂದರೆ ಮೂರು ಕಿಲೋಮೀಟರ್ ನಡೆದು ಗುಡ್ಡವೇರಿ ಫೋನ್ ಮಾಡುವ ಪರಿಸ್ಥಿತಿ ಎದುರಾಗಿದೆ. 

ಹಾವೇರಿ: ನಿತ್ಯ 5 ಕಿಮೀ ನಡೆದು ಶಾಲೆ ತಲುಪುವ 300 ವಿದ್ಯಾರ್ಥಿಗಳು!

ಮೂಲಭೂತ ಸೌಲಭ್ಯದಿಂದ ವಂಚಿತವಾಗಿರುವ ಗ್ರಾಮ : 

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಿಳಿಗಲ್ ಗ್ರಾಮ(Biligal village chikkamagaluru). ಈ ಗ್ರಾಮದಲ್ಲಿ 35-40 ಮನೆಗಳಿವೆ. ಎಲ್ಲರೂ ಗಿರಿಜನ ಕುಟುಂಬದವರೆ. ಈ ಕುಗ್ರಾಮ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ನೈಸರ್ಗಿಕವಾಗಿ ಯಥೇಚ್ಛವಾಗಿ ಮಳೆ ಸುರಿಯೋದ್ರಿಂದ ನೀರು ಒಂದ್ ಸಮೃದ್ಧವಾಗಿದೆ. ಅದನ್ನ ಬಿಟ್ಟು ಈ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಲಭ್ಯವಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿ ಮಾಡಿ ಸುಸ್ತಾಗಿರುವ ಈ ಜನ ಸರ್ಕಾರದ ವಿರುದ್ಧ ಹೋರಾಡಲು ಶಕ್ತಿಯಿಲ್ಲದೆ ಅಸಹಾಯಕರಾಗಿ ಬದುಕುತ್ತಿದ್ದಾರೆ. 


ನೆಟ್ವರ್ಕ್ ಗಾಗಿ 3 ಕಿಲೋಮೀಟರ್ ಗುಡ್ಡ ಏರುವ ಗ್ರಾಮಸ್ಥರು! 

ಕಳಸ ತಾಲೂಕಿನ ರಾಷ್ಟ್ರೀಯ ಉದ್ಯಾನವದ ಕುದುರೆಮುಖದ ತಪ್ಪಲಿನಲ್ಲಿನ ಬರುವ ಈ ಬಿಳಗಲ್ ಗ್ರಾಮದಲ್ಲಿ ಜನರಿಗೆ ಯಾವ ಸೌಲಭ್ಯವೂ ಇಲ್ಲ. ಗ್ರಾಮದಲ್ಲಿ ಯಾರಿಗಾದರೂ ಹುಷಾರಿಲ್ಲ ಅಂದಾಗ ಫೋನ್ ಮಾಡೋದಕ್ಕೂ ಮೂರು ಕಿ.ಮೀ. ಬರಬೇಕು. ಇಲ್ಲಿನ ನಿವಾಸಿಗಳಿಗೆ ಸರ್ಕಾರ ಒಂದು, ಒಂದೂವರೆ, ಎರಡು ಎಕರೆ ಜಮೀನು ನೀಡಿದೆ. ಆದರೆ, ಹಲವು ಜನರಿಗೆ ಹಕ್ಕುಪತ್ರ ನೀಡಿಲ್ಲ. ಹಕ್ಕುಪತ್ರಕ್ಕಾಗಿ ಕೇಳಿ ಕೇಳಿ ಈಗ ಸುಮ್ಮನಾಗಿದ್ದಾರೆ. 

ಇನ್ನು ಈ ಬಾರಿ ಮಳೆ ತೀವ್ರ ಅಭಾವವಿದೆ. ಬೆಳೆಗೆ ಬಿಡಿ ಕುಡಿಯೋಕೆ ನೀರು ಸಿಗೋದು ಕಷ್ಟ ಅಂತಿದ್ದಾರೆ ಇಲ್ಲಿನ ಜನ. ಮಳೆ ಇಲ್ಲದೆ ಬೆಳೆಗಳು ಕ್ರಮೇಣ ಒಣಗುತ್ತಿವೆ. ಈ ವರ್ಷ ಊಟಕ್ಕೆ ಏನ್ ಮಾಡೋದು ಅಂತ ಈಗಲೇ ಚಿಂತೆಗೀಡಾಗಿದ್ದಾರೆ. ಕಳೆದ ವರ್ಷ ಈ ಗ್ರಾಮದ ರಸ್ತೆಗೆ ಸರ್ಕಾರ ಸೇತುವೆ ನಿರ್ಮಾಣ ಮಾಡಿದೆ. ಆದರೆ, ಸೇತುವೆಯ ಅರ್ಧಕ್ಕೆ ತಡೆಗೋಡೆ ಕಟ್ಟಿದೆ. ಇನ್ನರ್ಧಕ್ಕೆ ಕಟ್ಟಿಲ್ಲ. ಮಳೆಗಾಲದಲ್ಲಿ ಸ್ವಲ್ಪ ಸ್ಕಿಡ್ ಆದರೂ ಕೊಚ್ಚಿ ಹೋಗೋದು ಗ್ಯಾರಂಟಿ. ಹಾಗಾಗಿ ಸ್ಥಳಿಯರು ಕೂಡಲೇ ಸೇತುವೆಗೆ ತಡೆಗೋಡೆ ನಿರ್ಮಿಸಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಧಾರವಾಡ: ಬಸ್‌ ನಿಲ್ದಾಣಗಳಲ್ಲಿನ ಸೌಲಭ್ಯಗಳಿಗಿಲ್ಲ‘ಶಕ್ತಿ’!

ಒಟ್ಟಾರೆ ಕಾಫಿನಾಡಿನ ಕಳಸ ಸುತ್ತಲೂ ಮುಗಿಲೆತ್ತರದ ಕಾಡು. ಮಧ್ಯದಲ್ಲಿ ಊರು. ಇಲ್ಲಿ ಸಮಸ್ಯೆಗಳು ಒಂದೆರಡಲ್ಲ, ಹತ್ತಾರು ಗ್ರಾಮಗಳಿಗೆ ಸೌಲಭ್ಯಗಳಿಗಾಗಿ ಬದುಕಿನ ಜೊತೆ ಇವರಿಗೆ ಸರ್ಕಾರದ ವಿರುದ್ಧ ಹೋರಾಡೋ ಶಕ್ತಿ ಇಲ್ಲ. ಹಾಗಾಗಿ, ಹೇಗೋ ಬದುಕು ದೂಡ್ತಿದ್ದಾರೆ. ಇನ್ನಾದ್ರು ಸರ್ಕಾರ ಇತ್ತ ಗಮನ ಹರಿಸಿ ಮೂಲಭೂತ ಸೌಲಭ್ಯಗಳಿಲ್ಲದೆ ಬಳಲಿ, ಬೆಂಡಾಗರೋ ಈ ಗ್ರಾಮದ ಜನರಿಗೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಬೇಕಿದೆ.ಈ ಸರ್ಕಾರದ ಮೇಲೆ ಭರವಸೆ ಇಟ್ಟು ಗೆಲ್ಲಿಸಿದ್ದಾರೆ, ಮೂಲಭೂತ ಸೌಲಭ್ಯ ಒದಗಿಸಿ ಭರವಸೆ ಉಳಿಸಿಕೊಳ್ಳುತ್ತಾ ಕಾದು ನೋಡಬೇಕು.

Follow Us:
Download App:
  • android
  • ios