ತೇಜಸ್ವಿ ಸೂರ್ಯ ಅಂತಹ ವ್ಯಕ್ತಿಯಲ್ಲ. ಅವರನ್ನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಅವರಿಗೆ ಯಾರೀ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬೆಡ್ ಬುಕಿಂಗ್ ಮಾಫಿಯಾಗೆ ಸಂಬಂಧಿಸಿದ ವಿವಾದಕ್ಕೆ  ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಸಮರ್ಥನೆ ನೀಡಿದರು. 

ಬೆಂಗಳೂರು (ಮೇ.07): ಚಿಕ್ಕಪೇಟೆ ಕ್ಷೇತ್ರದಲ್ಲಿ 60 ಸಾವಿರ ಮುಸ್ಲಿಂಮರು ಇದ್ದಾರೆ , 32 ಮಸೀದಿ ಇದೆ. ನಮ್ಮ ಕ್ಷೇತ್ರದಲ್ಲಿ ಹಿಂದು ಮುಸ್ಲಿಂ ಭೇದ ಭಾವ ಇಲ್ಲ. ಚಿಕ್ಕ ವಯಸ್ಸಿನಿಂದ ನಾನು ತೇಜಸ್ವಿಯನ್ನ ನೋಡಿದ್ದೇನೆ. ಅವರಲ್ಲಿ ಕೋಮು ಬೇಧ ಇಲ್ಲ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದರು. 

ಬೆಂಗಳೂರಿನಲ್ಲಿಂದು ಮಾತನಾಡಿದ ಶಾಸಕ ಉದಯ್ ಗರುಡಾಚಾರ್ ಸಂಸದರಿಗೆ ತಪ್ಪು ಮಾಹಿತಿ ಬಂದಿರಬಹುದು. ಒಂದು ಸಮುದಾಯವನ್ನ ಪರಿಗಣಿಸಿ ಅವರು ಮಾತನಾಡಿಲ್ಲ ಎಂದು ತೇಜಸ್ವಿ ಸೂರ್ಯರನ್ನ ಸಮರ್ಥಿಸಿಕೊಂಡಿದ್ದಾರೆ. 

ಇನ್ನು ಶಾಸಕ ಸತೀಶ್ ರೆಡ್ಡಿ ಬಗ್ಗೆ ಮಾತನಾಡಿದ ಉದಯ್ ಗರುಡಾಚಾರ್ ಸತೀಶ್ ರೆಡ್ಡಿ ನನಗೆ ಸ್ನೇಹಿತರು ಅವರಿಗೆ ತುಂಬಾ ಜನ ಮುಸ್ಲಿಂ ಸ್ನೇಹಿತರಿದ್ದಾರೆ. ಅವರು ಬೆಡ್ ಬುಕಿಂಗ್ ದಂಧೆಯ ಪಾಲುದಾರ ಎಂಬ ಆರೋಪವಿದ್ದು, ಸತೀಶ್ ರೆಡ್ಡಿ ಅಂತಹವರಲ್ಲ ಎಂದರು. 

'ವಾರ್ ರೂಂಗೆ ತೆರಳಿ ತೇಜಸ್ವಿ ಕ್ಷಮೆ' ಸುದ್ದಿ ಇಲ್ಲದವರು ಮಾಡಿದ ಕೆಲಸ! ..

ಬಿಬಿಎಂಪಿಯಲ್ಲಿ ಕೊರೋನಾ ಸೋಂಕಿತರ ಬೆಡ್ ಬುಕಿಂಗ್ ದಂಧೆ ನಡೆದಿದ್ದು ಈ ಸಂಬಂಧ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ದಂಧೆಯನ್ನು ಬಯಲಿಗೆ ಎಳೆದಿದ್ದರು. ಬಳಿಕ ಇದರಲ್ಲಿ ಕೋಮು ಭಾವನೆಯನ್ನು ಬಿತ್ತಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಸದ್ಯ ಈ ಪ್ರಕರಣವನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ಶಾಸಕ ಸತೀಶ್ ರೆಡ್ಡಿ ಆಪ್ತನ ವಿಚಾರಣೆ : ಬೆಡ್ ಬುಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬುರನ್ನು ಸಿಸಿಬಿ ವಿಚಾರಣೆ ನಡೆಸಲಾಗಿದೆ. ಬಾಬು ಅರೋಗ್ಯ ಪರಿಸ್ಥಿತಿ ಯಲ್ಲಿ ಏರು ಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂದಿನ ಹಂತದಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona