Asianet Suvarna News Asianet Suvarna News

BBMP School Scam: ಶಾಲೆಗೆ ಸರ್ಕಾರ ಕೊಟ್ಟ ದುಡ್ಡು, ಶಿಕ್ಷಕರ ಜೇಬಿಗೆ?


ವಾಲ್ಮೀಕಿ ಹಗರಣದ ಬಳಿಕ ಈಗ ಬಿಬಿಎಂಪಿ ಶಾಲೆಗಳಲ್ಲಿ ಗೋಲ್‌ಮಾಲ್‌ ವಿಚಾರ ಬೆಳಕಿಗೆ ಬಂದಿದೆ. ಸರ್ಕಾರ ಶಾಲೆಗಳಿಗೆ ನೀಡಿದ ಹಣವನ್ನು ಶಿಕ್ಷಕರು ತಮ್ಮ ಜೇಬಿಗೆ ಇಳಿಸಿಕೊಂಡಿರುವ ಹಗರಣ ನಡೆದಿದೆ.

BBMP School Scam Money given to the school by the government teachers pocket san
Author
First Published Jun 5, 2024, 6:20 PM IST | Last Updated Jun 5, 2024, 6:20 PM IST

ಬೆಂಗಳೂರು (ಜೂ.5):  ಬಿಬಿಎಂಪಿ ಶಾಲ, ಕಾಲೇಜುಗಳಲ್ಲಿ ಬಾರಿ ಗೋಲ್‌ಮಾಲ್‌ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಮಕ್ಕಳ ಹೆಸರಲ್ಲಿ ಬಿಬಿಎಂಪಿ ಶಾಲೆಯ ಶಿಕ್ಷಕರೇ ಮಕ್ಕಳ ಹೆಸರಲ್ಲಿ ಹಣ ಲೂಟಿ ಮಾಡಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಮಕ್ಕಳ ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವ, ಪರೀಕ್ಷೆ ವೆಚ್ಚಕ್ಕೆ ಸರ್ಕಾರ ಬಿಬಿಎಂಪಿ ಶಾಲೆಗಳಿಗೆ ಧನಸಹಾಯ ನೀಡುತ್ತದೆ. ಈ ಹಣವನ್ನು ಮಕ್ಕಳ ಹೆಸರಲ್ಲಿ ಶಾಲೆಯೆ ಶಿಕ್ಷಕರೇ ಲೂಟಿ ಮಾಡಿದ ಘಟನೆ ನಡೆದಿದೆ. ಮಕ್ಕಳ ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವ, ಪರೀಕ್ಷೆ ವೆಚ್ಚಕ್ಕೆ ಅಂತ ಬಿಬಿಎಂಪಿಯಿಂದ ಒಂದು ಶಾಲಾ, ಕಾಲೇಜಿಗೆ ಒಂದು ಲಕ್ಷ ಹಣ ನೀಡಲಾಗಿತ್ತು. ಆದರೆ, ಈ ಶಾಲಾ ಕಾಲೇಜುಗಳ ಶಿಕ್ಷಕರು ಈ ಹಣವನ್ನು ಸೆಲ್ಫ್‌ ವಿತ್‌ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಶಾಲಾ, ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ,  ಆರ್‌ಟಿಜಿಎಸ್‌ ಮುಖೇನ ಹಣ ನೀಡಬೇಕು. ಆದರೆ, ಪಾಲಿಕೆ ವ್ಯಾಪ್ತಿಯ 35 ಶಾಲೆಗಳಲ್ಲಿ ಶಾಲಾ, ಕಾಲೇಜು ಗಳ ಶಿಕ್ಷಕರೇ ಸೆಲ್ಫ್‌ ವಿತ್‌ಡ್ರಾ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶಾಲಾ ಕಾಲೇಜುಗಳ ಶಿಕ್ಷಕರು ಸಲ್ಲಿಸಿದ ಬ್ಯಾಂಕ್ ಪಾಸ್ ಶೀಟ್ ಪರಿಶೀಲನೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾರಣ ಕೇಳಿ ಬಿಬಿಎಂಪಿಯ ವಿಶೇಷ ಆಯುಕ್ತರು ನೋಟಿಸ್‌ ಜಾರಿ ಮಾಡಿದ್ದಾರೆ. ಹಣದ ಬಳಕೆ ಬಗ್ಗೆ ಖುದ್ದು ಹಾಜರಾಗಿ ಲಿಖಿತ ರೂಪದಲ್ಲಿ  ವಿಶೇಷ ಅಯುಕ್ತರ ಮುಂದೆ ಹೇಳಿಕೆ ನೀಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.

BBMP School Scam Money given to the school by the government teachers pocket san

Latest Videos
Follow Us:
Download App:
  • android
  • ios