ಬಿಬಿಎಂಪಿ ವಾರ್ಡ್‌ಗಳ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸದಾಗಿ 50 ಕ್ಯಾಂಟಿನ್‌ಗಳ ನಿರ್ಮಾಣಕ್ಕೆ ಅನುಮತಿ ಕೋರಿ ಬಿಬಿಎಂಪಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಬೆಂಗಳೂರು (ಜೂ.20): ಬಿಬಿಎಂಪಿ ವಾರ್ಡ್‌ಗಳ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸದಾಗಿ 50 ಕ್ಯಾಂಟಿನ್‌ಗಳ ನಿರ್ಮಾಣಕ್ಕೆ ಅನುಮತಿ ಕೋರಿ ಬಿಬಿಎಂಪಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈವರೆಗೆ ಮಂಕಾಗಿದ್ದ ಇಂದಿರಾ ಕ್ಯಾಂಟಿನ್‌(Indira canteen)ಗಳಿಗೆ ಸುಣ್ಣ-ಬಣ್ಣ ಬಳಿದು ಹೊಸ ಕಳೆಯೊಂದಿಗೆ ಪುನಾರಾರಂಭ ಮಾಡಲು ರಾಜ್ಯಸರ್ಕಾರ ಮುಂದಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿ 250 ಇಂದಿರಾ ಕ್ಯಾಂಟಿನ್‌ಗಳನ್ನು ನಿರ್ಮಿ ಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 175 ಇಂದಿರಾ ಕ್ಯಾಂಟೀನ್‌ ಕಟ್ಟಡಗಳಿದ್ದು, 23 ಸಂಚಾರಿ ಕ್ಯಾಂಟೀನ್‌ಗಳಿವೆ. ಒಟ್ಟು 198 ಕ್ಯಾಂಟೀನ್‌ಗಳಿಗೆ ಹೆಚ್ಚುವರಿಯಾಗಿ 52 ಕ್ಯಾಂಟಿನ್‌ಗಳನ್ನು ಸೇರ್ಪಡೆ ಮಾಡಬೇಕಿದೆ. ಅದಕ್ಕಾಗಿ 50 ಕ್ಯಾಂಟಿನ್‌ಗಳನ್ನು ಹೊಸದಾಗಿ ನಿರ್ಮಿಸಲು ಅನುಮತಿ ಮತ್ತು ಅನುದಾನ ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.

ಹೊಸ ಇಂದಿರಾ ಕ್ಯಾಂಟೀನ್‌ಗೆ ಜಾಗವೇ ಸಿಗ್ತಿಲ್ಲ..!

ಪ್ರತಿ ಕ್ಯಾಂಟಿನ್‌ ನಿರ್ಮಾಣಕ್ಕೆ 30 ಲಕ್ಷ ರು.ನಂತೆ 50 ಕ್ಯಾಂಟೀನ್‌ಗಳಿಗಾಗಿ 15 ಕೋಟಿ ರು. ಅನುದಾನ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಅದರ ಜತೆಗೆ ಬಿಬಿಎಂಪಿ, ವಿಧಾನಸೌಧ ಸೇರಿ ಇನ್ನಿತರ ಜನನಿಬಿಡ ಪ್ರದೇಶಗಳಾದ ಆಸ್ಪತ್ರೆ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಕ್ಯಾಂಟೀನ್‌ಗಳ ನಿರ್ಮಿಸುವ ಯೋಜನೆಯ ಬಗ್ಗೆಯೂ ತಿಳಿಸಲಾಗಿದೆ.

ಈ ಎಲ್ಲದರ ನಡುವೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡುವ ಆಹಾರದ ಮೆನುವನ್ನು ಸಿದ್ಧಪಡಿಸಿರುವ ಬಿಬಿಎಂಪಿ(BBMP) ಅಧಿಕಾರಿಗಳು, ಅದರ ಅನುಮೋದನೆ ಕೋರಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ. ಅದರಂತೆ ಕ್ಯಾಂಟೀನ್‌ ಗಳಲ್ಲಿ ಅನ್ನ, ಸಾಂಬಾರ್‌, ರಸಂ ಜತೆಗೆ ಮುದ್ದೆ, ಚಪಾತಿ, ಪಲ್ಯ ನೀಡುವುದಕಕೆ ಅನುಮತಿ ಕೋರಿದ್ದಾರೆ. ಅದರ ಜತೆಗೆ ಬೆಳಗಿನ ತಿಂಡಿಯಲ್ಲಿ ಬ್ರೆಡ್‌, ಜ್ಯಾಮ್‌ ಕೊಡುವ ಕುರಿತು ಮುಖ್ಯಮಂತ್ರಿಗಳ ಬಳಿ ಸಲಹೆಯನ್ನು ಕೋರಿ ದ್ದಾರೆ. ಉಳಿದಂತೆ ಮೊಟ್ಟೆಅಥವಾ ಇನ್ಯಾವುದೇ ಮಾಂಸಾಹಾರ ನೀಡುವುದರ ಬಗ್ಗೆ ಚಿಂತನೆ ಇಲ್ಲ ಹಾಗೂ ಆ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ: ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ