Asianet Suvarna News Asianet Suvarna News

ಸೋಂಕು ತಪಾಸಣೆಗೆ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಯ ನಿರಾಸಕ್ತಿ!

ಆದರೆ, ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ನಿರಾಸಕ್ತಿ ತೋರಿದ್ದಾರೆ|  ಸೋಂಕು ತಪಾಸಣೆಗೆ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಯ ನಿರಾಸಕ್ತಿ!| 4 ದಿನದ ತಪಾಸಣೆಯಲ್ಲಿ ಭಾಗವಹಿಸಿದ್ದು ಕೇವಲ 36 ಮಂದಿ| 

BBMP Officers And Staffs Negligence Over Coronavirus Testing
Author
Bangalore, First Published May 9, 2020, 7:53 AM IST
  • Facebook
  • Twitter
  • Whatsapp

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮೇ.09): ನಗರದಲ್ಲಿ ಕೊರೋನಾ ಸೋಂಕು ತಡೆಯಲು ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿರುವ ಪಾಲಿಕೆ ಅಧಿಕಾರಿಗಳು, ನೌಕರರು ಕೋರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಲೂ ನಿರಾಸಕ್ತಿ ತೋರಿದ್ದಾರೆ.

ನಗರದಲ್ಲಿ ಕೊರೋನಾ ತುರ್ತು ಪರಿಸ್ಥಿತಿ ಆರಂಭಗೊಂಡ ಮೇಲೆ ಸೋಂಕು ತಡೆಗಟ್ಟಲು ಬಿಬಿಎಂಪಿಯ ಅಧಿಕಾರಿ-ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕಂಟೈನ್ಮೆಂಟ್‌ ಪ್ರದೇಶಗಳಿಗೆ ತೆರಳಿ ಆರೋಗ್ಯ ತಪಾಸಣೆ, ಕೊರೋನಾ ಸೋಂಕಿತರು ಮತ್ತು ಶಂಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್‌ ಮಾಡುವುದು, ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್‌, ಆಹಾರ, ಹಾಲು ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಸುರಕ್ಷತೆ ದೃಷ್ಟಿಯಿಂದ ಸ್ವಯಂ ಪ್ರೇರಿತವಾಗಿ ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗುವಂತೆ ಅವರಿಗೆ ಸೂಚಿಸಲಾಗಿತ್ತು.

ಕನ್ನಡಿಗರ ಏರ್‌ಲಿಫ್ಟ್‌: ಏರ್‌ಪೋರ್ಟ್‌ ಸಿದ್ಧತೆ ಪರಿಶೀಲಿಸಿದ ಸಚಿವರು

ಆದರೆ, ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ನಿರಾಸಕ್ತಿ ತೋರಿದ್ದಾರೆ. ಮೇ 4ರಿಂದ 7ರವರೆಗೆ ನಡೆಸಲಾದ ಆರೋಗ್ಯ ತಪಾಸಣೆಯಲ್ಲಿ ಬಿಬಿಎಂಪಿಯ ಕೇವಲ 36 ಮಂದಿ ಮಾತ್ರ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿ, ಎಂಟು ವಲಯ ಕಚೇರಿ, 63 ಕಂದಾಯ ಉಪವಿಭಾಗ, 198 ವಾರ್ಡ್‌ ಸೇರಿದಂತೆ ಒಟ್ಟು 7,474 ಕಾಯಂ ಅಧಿಕಾರಿ,ಸಿಬ್ಬಂದಿ, 620 ಆಶಾ ಕಾರ್ಯಕರ್ತೆಯರು, ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಸುಮಾರು 15 ಸಾವಿರಕ್ಕೂ ಅಧಿಕ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊರೋನಾ ಸೋಂಕು ಪತ್ತೆಗಾಗಿ ಮನೆ ಮನೆ ಆರೋಗ್ಯ ಸಮೀಕ್ಷೆ ಆರಂಭ

ಕೊರೋನಾ ಸೋಂಕು ಲಕ್ಷಣ ಇರುವವರು ಹಾಗೂ ಆಸಕ್ತಿ ಇರುವವ ಅಧಿಕಾರಿ ಸಿಬ್ಬಂದಿಗೆ ಕೊರೋನಾ ಸೋಂಕು ಪರೀಕ್ಷೆಗೆ ಸೂಚಿಸಲಾಗಿತ್ತು. ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿರಲಿಲ್ಲ.

- ಅನ್ಬುಕುಮಾರ್‌, ಆಡಳಿತ ವಿಭಾಗದ, ವಿಶೇಷ ಆಯುಕ್ತರು.

 

Follow Us:
Download App:
  • android
  • ios