ಮನೆ-ಮನೆ ಆರೋಗ್ಯ ಸಮೀಕ್ಷೆ ಆರಂಭ| ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಸಮೀಕ್ಷೆ| ಕೊರೋನಾ ಸೋಂಕು ಮುಕ್ತಕ್ಕೆ ಸಹಕರಿಸುವಂತೆ ಬಿಬಿಎಂಪಿ ಮನವಿ|

ಬೆಂಗಳೂರು(ಮೇ.08): ಕೊರೋನಾ ಸೋಂಕು ಶೀಘ್ರವಾಗಿ ಪತ್ತೆಗೆ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಗುರುವಾರದಿಂದ ಮನೆ-ಮನೆ ಆರೋಗ್ಯ ಸಮೀಕ್ಷೆ ಆರಂಭಿಸಲಾಗಿದೆ.

ಸಮೀಕ್ಷೆ ಬೂತ್‌ ಮಟ್ಟದ ಮತಗಟ್ಟೆಅಧಿಕಾರಿ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಪ್ರಯಾಣದ ಇತಿಹಾಸ, ಜ್ವರ, ಕೆಮ್ಮು, ಶೀತ, ಶ್ವಾಸಕೋಶ ಸಂಬಂಧಿಸಿದ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. 

ಗ್ರೀನ್‌ ಝೋನ್‌ಗಾಗಿ ಪತ್ರ ಬರೆದ ಬಿಬಿಎಂಪಿ: ಮೋದಿ ಸರ್ಕಾರದಿಂದ ನೋ ರಿಪ್ಲೈ..!

ಮನೆಗಳಿಗೆ ಸಮೀಕ್ಷಾ ತಂಡದ ಪ್ರತಿನಿಧಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿ ನೀಡಿ ಕೊರೋನಾ ಸೋಂಕು ಮುಕ್ತಕ್ಕೆ ಸಹಕರಿಸುವಂತೆ ಬಿಬಿಎಂಪಿ ಮನವಿ ಮಾಡಿದೆ.