ಬಿಬಿಎಂಪಿ: ಆಸ್ತಿ ತೆರಿಗೆ ಕಟ್ಟದ ಮಾಲಿಕರಿಗೆ ಮೆಸೇಜ್, ವಾಟ್ಸಪ್ಪಲ್ಲಿ ನೋಟಿಸ್ ಜೊತೆಗೆ ಸ್ಕ್ಯಾನರ್!
ಆಸ್ತಿಗಳ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ನೋಟಿಸ್ ನೀಡುವ ವ್ಯವಸ್ಥೆಯನ್ನು ಬಿಬಿಎಂಪಿ ಸರಳಗೊಳಿಸಿದೆ. ಎಸ್‌ಎಂಎಸ್ ಹಾಗೂ ವಾಟ್ಸ್‌ಆ್ಯಪ್ ಮೂಲಕ ತೆರಿಗೆ ಬಾಕಿಯ ನೋಟಿಸ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈವರೆಗೆ 3.50 ಲಕ್ಷ ಆಸ್ತಿ ಮಾಲೀಕರಿಗೆ ಎಸ್‌ಎಂಎಸ್, ವಾಟ್ಸ್‌ಆ್ಯಪ್ ಮೂಲಕ ನೋಟಿಸ್ ನೀಡಲಾಗಿದೆ.

ಬೆಂಗಳೂರು (ನ.14) : ಆಸ್ತಿಗಳ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ನೋಟಿಸ್ ನೀಡುವ ವ್ಯವಸ್ಥೆಯನ್ನು ಬಿಬಿಎಂಪಿ ಸರಳಗೊಳಿಸಿದೆ. ಎಸ್‌ಎಂಎಸ್ ಹಾಗೂ ವಾಟ್ಸ್‌ಆ್ಯಪ್ ಮೂಲಕ ತೆರಿಗೆ ಬಾಕಿಯ ನೋಟಿಸ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈವರೆಗೆ 3.50 ಲಕ್ಷ ಆಸ್ತಿ ಮಾಲೀಕರಿಗೆ ಎಸ್‌ಎಂಎಸ್, ವಾಟ್ಸ್‌ಆ್ಯಪ್ ಮೂಲಕ ನೋಟಿಸ್ ನೀಡಲಾಗಿದೆ.
ನಗರದಲ್ಲಿನ 19 ಲಕ್ಷ ಆಸ್ತಿಗಳ ಪೈಕಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ 3.50 ಲಕ್ಷ ಆಸ್ತಿ ಮಾಲೀಕರಿಗೆ ಈವರೆಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಪಡೆದ ಆಸ್ತಿ ಮಾಲೀಕರು ನ.30ರೊಳಗೆ ಆಸ್ತಿ ತೆರಿಗೆ ಬಾಕಿಯನ್ನು ಪಾವತಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಹೀಗೆ ಎಸ್‌ಎಂಎಸ್, ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾದ ನೋಟಿಸ್‌ನಲ್ಲಿಯೇ ತೆರಿಗೆ ಪಾವತಿಸಿಗೆ ಸಂಬಂಧಿಸಿದ ಸ್ಕ್ಯಾನರ್ ಅನ್ನು ಕೂಡ ಕಳುಹಿಸಲಾಗಿದೆ. ಅದರ ಮೂಲಕ ಆಸ್ತಿ ಮಾಲೀಕರು ತೆರಿಗೆ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಬಹುದಾಗಿದೆ.
ಸುಬ್ರಹ್ಮಣ್ಯ ದೇಗುಲದ ಗೋಪುರ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳು!
ನೋಟಿಸ್ ಪಡೆದವರು ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸದಿದ್ದರೆ, ಅವರ ಆಸ್ತಿಗಳಿಗೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಿದ್ದಾರೆ. ಒಂದು ವೇಳೆ ಅದಕ್ಕೂ ಪ್ರತಿಕ್ರಿಯಿಸದಿದ್ದರೆ ನಂತರ ಪೇಪರ್ ನೋಟಿಸ್ ನೀಡಿ, ನಿಯಮದಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಬೆಂಗಳೂರು: ಪೌರಕಾರ್ಮಿಕರು, ದಲಿತ ಹೆಣ್ಣುಮಕ್ಕಳ ವಿವಾಹಕ್ಕೆ ಬಿಬಿಎಂಪಿಯಿಂದ 1 ಲಕ್ಷ ನೆರವು