Asianet Suvarna News Asianet Suvarna News

ಸುಬ್ರಹ್ಮಣ್ಯ ದೇಗುಲದ ಗೋಪುರ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳು!

ಕಿಡಿಗೇಡಿಗಳು ದೇವಾಲಯದ ಗೋಪುರದ ವಿಗ್ರಹ ಹಾಗೂ ಆಯುಧಗಳನ್ನು ಮುರಿದು ವಿರೂಪಗೊಳಿಸಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿ ಸರ್ಕಲ್‌ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಗೋಪುರದ ಮೇಲ್ಭಾಗದಲ್ಲಿ ಸುಬ್ರಹ್ಮಣ್ಯಸ್ವಾಮಿ ವಿಗ್ರಹ, ಆಯುಧಗಳನ್ನು ದುಷ್ಕರ್ಮಿಗಳು ಮುರಿದು ಭಗ್ನಗೊಳಿಸಿದ್ದಾರೆ. ನ.8ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

The miscreants who broke the tower idol of Subrahmanya temple at bengaluru rav
Author
First Published Nov 14, 2023, 4:56 AM IST

ಬೆಂಗಳೂರು (ನ.14): ಕಿಡಿಗೇಡಿಗಳು ದೇವಾಲಯದ ಗೋಪುರದ ವಿಗ್ರಹ ಹಾಗೂ ಆಯುಧಗಳನ್ನು ಮುರಿದು ವಿರೂಪಗೊಳಿಸಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿ ಸರ್ಕಲ್‌ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಗೋಪುರದ ಮೇಲ್ಭಾಗದಲ್ಲಿ ಸುಬ್ರಹ್ಮಣ್ಯಸ್ವಾಮಿ ವಿಗ್ರಹ, ಆಯುಧಗಳನ್ನು ದುಷ್ಕರ್ಮಿಗಳು ಮುರಿದು ಭಗ್ನಗೊಳಿಸಿದ್ದಾರೆ. ನ.8ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಈ ದೇವಸ್ಥಾನ ನಿರ್ವಹಣೆ ಮಾಡುತ್ತಿರುವ ಬೊಮ್ಮನಹಳ್ಳಿ ಬೇಗೂರು ರಸ್ತೆಯ ಮಾರುತಿ ಯುವಕರ ಸಂಘದ ಕಾರ್ಯದರ್ಶಿ ಬಿ.ಜಿ.ಮುನಿರೆಡ್ಡಿ ನೀಡಿದ ದೂರಿನ ಮೇರೆಗೆ ಬೊಮ್ಮನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಎದುರೇ ಮೂತ್ರ ವಿಸರ್ಜನೆ : ಮುಸ್ಲಿಂ ಯುವಕನ ಬಂಧನ

ಪದೇ ಪದೆ ಹಿಂದು ದೇವರು, ದೇವಸ್ಥಾನಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸುತ್ತಿದ್ದ ಇದು ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ಪ್ರಕರಣಗಳು ನಡೆಯುತ್ತಿವೆ. ಇತ್ತೀಚಿಗಷ್ಟೇ ದೇವಾಲಯದೊಳಗೆ ದೇವಿಯ ಮೂರ್ತಿ ನಗ್ನ ಗೊಳಿಸಿ ವಿಕೃತಿ ಮೆರೆಯಲಾಗಿತ್ತು. ಅದಾದ ಬಳಿಕ ದೇವಾಲಯದ ಗರ್ಭಗುಡಿಯಲ್ಲಿನ ಶಿವಲಿಂಗದ ಮೇಲೆ ಮೂತವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ ದುಷ್ಕರ್ಮಿಗಳು. ಅಂತದೇ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಗಳ ಪತ್ತೆ ಹಚ್ಚಿ ಸೂಕ್ತ ಕ್ರಮಕ್ಕೆ ಭಕ್ತರು ಒತ್ತಾಯಿಸಿದ್ದಾರೆ.  ದೀಪಾವಳಿಯಂಥ ಹಬ್ಬದಲ್ಲಿ ನಡೆದಿರುವುದು ಸಹಿಸಲಾಸಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ಭಕ್ತರು.

ವಿಜಯೇಂದ್ರ ಪದಗ್ರಹಣಕ್ಕೆ ಹೋಗಲ್ಲ, ಬಿಜೆಪಿ ಬಿಟ್ಟರೂ ಬೇರೆ ಪಕ್ಷ ಸೇರಲ್ಲ: ಸಿಟಿ ರವಿ

Follow Us:
Download App:
  • android
  • ios