ಬೆಂಗಳೂರು, (ಫೆ.13): ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ.

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವರ್ಗಾವಣೆಗೆ ತಡೆ ಬಿದ್ದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅನಿಲ್ ಕುಮಾರ್ ರವರ ಜಾಗಕ್ಕೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ನೇಮಿಸಿ ದಿಢೀರ್ ಆದೇಶ ಮಾಡಿದ್ದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅನಿಲ್ ಕುಮಾರ್ ವರ್ಗಾವಣೆ ಸಿಎಂ ಮಾಡಿದ್ದರು.  ಇದೀಗ ಸರ್ಕಾರದ ಮತ್ತೊಂದು ಆದೇಶ ಪ್ರಕಟವಾಗಿದ್ದು,ಅನಿಲ್ ಕುಮಾರ್ ವರ್ಗಾವಣೆಗೆ ತಡೆ ನೀಡಿ ನೀಡಲಾಗಿದೆ.

ವಾಹನ ಭತ್ಯೆ ರದ್ದು: ದುಂದು ವೆಚ್ಚಕ್ಕೆ ಮುಂದಾದ BBMP

 2019ರ ಅಗಷ್ಟ್ ತಿಂಗಳಲ್ಲಿ ಬಿಬಿಎಂಪಿ ಆಯುಕ್ತರಾಗಿ ಬಿ.ಹೆಚ್ ಅನಿಲ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದರು.ಇವ್ರ ಆರು ತಿಂಗಳ ಅಡಳಿತ ಅವಧಿಯಲ್ಲಿ ನ್ಯಾಯಾಲಯದಲ್ಲಿ ಸರ್ಕಾರಕ್ಕೆ ಮುಜುಗರ ಕ್ಕೀಡಾಗುವಂತಹ ಹಲವು ಪ್ರಕರಣಗಳು ನಡೆದಿದ್ದವು. 

ಇತ್ತೀಚಿಗೆ ಕಸ ವಿಲೇವಾರಿ ಹಾಗೂ ರಸ್ತೆ ಗುಂಡಿಯಲ್ಲಿ ಅಪಘಾತಕ್ಕೀಡಾದವರಿಗೆ ಪರಿಹಾರ ನೀಡುವ ವಿಚಾರದಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಛೀಮಾರಿ ಹಾಕಿತ್ತು.ಇನ್ನೂ ಅನಿಲ್ ಕುಮಾರ್ ಜನ ಸಾಮಾನ್ಯರ ಕೈಗೆ ಸಿಗೋದಿಲ್ಲ ಎಂಬ ದೂರುಗಳು ಕೇಳಿಬಂದಿತ್ತು.

'ದೇವಸ್ಥಾನದಲ್ಲಿ ಡೊಳ್ಳು, ತಮಟೆ ಬಾರಿಸ್ಬೇಡಿ'..!

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರ ವರ್ಗಾವಣೆಗೆ ಸಿಎಂ ಮುಂದಾಗಿದ್ದರು ಎನ್ನಲಾಗಿದೆ.ಇದೀಗ ಪಾಲಿಕೆ ಕಮಿಷನರ್ ವರ್ಗಾ ವಣೆಗೆ ತಡೆ ಬಿದ್ದಿದ್ದು ಮುಂದೂವರಿಯಲಿದ್ದಾರೆ. ಅಷ್ಟೇ ಅಲ್ಲದೇ  ಬಿಬಿಎಂಪಿಯ ಕೇಂದ್ರ ಕಚೇರಿಯ ಆವರಣದಲ್ಲಿರುವ ಸಪ್ತಮಾತೃಕೆ ಆದಿಶಕ್ತಿ ದೇವಸ್ಥಾನದ ಧಾರ್ಮಿಕ ಆಚರಣೆ ವೇಳೆ ವಾದ್ಯಗಳನ್ನು ಬಾರಿಸದಂತೆ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ದೇವಸ್ಥಾನದ ಅರ್ಚಕರಿಗೆ ಸೂಚಿಸಿದ್ದರು.

ಈ ಸೂಚನೆಯೇ ಆಯುಕ್ತರಿಗೆ ಮುಳುವಾಗಿತ್ತಾ ಎನ್ನುವಷ್ಟರಲ್ಲಿಯೇ ರಾಜ್ಯ ಸರ್ಕಾರ ಟ್ರಾನ್ಸ್‌ಫರ್ ಆದೇಶವನ್ನು ತಡೆಹಿಡಿದಿದೆ.