ಧಾರವಾಡ: ತಮಗೆ ಸಚಿವ ಸ್ಥಾನ ನೀಡಿದರೂ ಖುಷಿ, ನೀಡದಿದ್ದರೂ ಸಂತೋ​ಷ. ಈ ವಿಚಾರದಲ್ಲಿ ಮಾಜಿ ಪ್ರದಾನಿ ಎಚ್‌.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ನಾನು ಬದ್ಧ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿತಿಳಿಸಿದ್ದಾರೆ. 

ಭಾನು​ವಾರ ಧಾರ​ವಾ​ಡ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ನನ​ಗೆ ಸಚಿವ ಸ್ಥಾನ ನೀಡ​ಲಾ​ಗುತ್ತದೆ ಎಂಬ ಸುದ್ದಿ ಮಾಧ್ಯ​ಮ​ಗಳ ಮೂಲಕ ಕೇಳಿ ಬಂದಿದೆ. ಈ ವಿಷಯವಾಗಿ ಪಕ್ಷ​ದಿಂದ ಯಾವ ಮಾಹಿತಿ ತಮ​ಗಿಲ್ಲ. ನಾನಂತೂ ಸಚಿವ ಸ್ಥಾನ ಬೇಕೆಂದು ಎಂದಿಗೂ ಹಠ ಹಿಡಿದಿಲ್ಲ. ಸಭಾಪತಿ ಸ್ಥಾನಕ್ಕೆ ಸಾಕಷ್ಟುಗೌರವ ಇದ್ದು, ಪಕ್ಷ​ದಿಂದ ದೊರೆ​ತಿ​ರುವ ಈ ಗೌರವವು ಸಮಾಧಾನ ತಂದಿದೆ ಎಂದು ಹೇಳಿ​ದರು.

ತಾವು ಹಾಗೂ ವಿಧಾನಸಭೆ ಸಭಾಧ್ಯಕ್ಷರು ಬೆಳಗಾವಿ ಅಧಿವೇಶ ಕುರಿತು ನ.19ಕ್ಕೆ ಚರ್ಚೆ ಮಾಡಲಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದು, ಡಿಸೆಂಬರ್‌ ತಿಂಗಳಲ್ಲಿ ಅಧಿವೇಶನ ನಡೆಯಲಿದೆ.