ಬೆಂಗಳೂರು[ಡಿ.22]: ರಾಜ್ಯ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಲಾಭಿ ನಡೆಸುತ್ತಿದ್ದು, ಕಾಂಗ್ರೆಸ್ ಈಗಾಗಲೇ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೆ ಜೆಡಿಎಸ್ ಮಾತ್ರ ಇನ್ನೂ ಈ ಗುಟ್ಟು ಬಿಟ್ಟುಕೊಡದೆ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಆಕಾಂಕ್ಷಿಗಳಲ್ಲಿ ಜೆಡಿಎಸ್ ಪಕ್ಷದ ಬಸವರಾಜ್ ಹೊರಟ್ಟಿ ಕೂಡಾ ಒಬ್ಬರಾಗಿದ್ದು, ಪಕ್ಷದ ವರಿಷ್ಠರು ತಮಗೆ ಸಚಿವ ಸ್ಥಾನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವ ಸ್ಥಾನ ನೀಡಬಹುದೆಂಬ ವಿಶ್ವಾಸ ವ್ಯಕ್ತಪಡಿಸಿರುವ ಹೊರಟ್ಟಿ "'ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಏನು ಸಮಸ್ಯೆಯಿದೆ ನನಗೆ ಗೊತ್ತಿಲ್ಲ. ಸರ್ಕಾರ ನಡೆಸುವವರಿಗೆ ಹಲವು ಒತ್ತಡಗಳಿರುತ್ತೆ. ಇದುವರೆಗೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ. ಸರಿಯಾಗಿ ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಂಬಿಕೆಯಿದೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿ ಇರುತ್ತೇನೆ. ನಾನು ಮೊದಲಿನಿಂದಲೂ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಎಷ್ಟೇ ಒತ್ತಾಯ ಮಾಡಿದ್ರೂ ನಾನು ಪಕ್ಷ ತೊರೆದಿಲ್ಲ" ಎಂದಿದ್ದಾರೆ

JDSನಲ್ಲಿಯೂ ಗರಿಗೆದರಿದ ರಾಜಕೀಯ: 2 ಮಂತ್ರಿ ಸ್ಥಾನಕ್ಕೆ ಪೈಪೋಟಿ

ಪಕ್ಷ ಬೆಳೆಸಿಲ್ಲ ಎಂಬ ಆರೋಪದ ಕುರಿತಾಗಿಯೂ ಪ್ರತಿಕ್ರಿಯಿಸಿರುವ ಹೊರಟ್ಟಿ "ಉತ್ತರ ಕರ್ನಾಟಕದಲ್ಲಿ ನಾನು ಪಕ್ಷ ಬೆಳೆಸಿಲ್ಲ ಎಂದು ನಮ್ಮವರೇ ಕೆಲವರು ಆರೋಪ ಮಾಡಿದ್ದಾರೆ. ಈ ಭಾಗದಲ್ಲಿ ಪಕ್ಷ ಸಂಘಟನೆ ಆಗಲು ಮೇಲಿನವರು ಸಹಕಾರ ಕೊಡಬೇಕು. ಸಂಕೀರ್ಣ ಪರಿಸ್ಥಿತಿಯಲ್ಲಿ ಎಲ್ಲರಿಗೂ ಮಂತ್ರಿಯಾಗಲು ಸಾಧ್ಯವಿಲ್ಲ. ಸರ್ಕಾರ ಬೀಳಿಸಿ ಚುನಾವಣೆ ಮಾಡುವುದು ಸರಿಯಲ್ಲ.ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ಯಾರೂ ಪಕ್ಷ ತೊರೆಯಬಾರದು. ಬಿಜೆಪಿಯವರು ಸರ್ಕಾರ ಬೀಳಿಸುವ ಪ್ರಯತ್ನ ಮಾಡಬಾರದು. ಬಿಜೆಪಿಯವರು ನಮಗೆ ಆಡಳಿತ ನಡೆಸಲು ಬಿಡಬೇಕು. ಮುಂದಿನ ಚುನಾವಣೆಯಲ್ಲಿ ಜನರು ಏನು ತೀರ್ಪು ನೀಡುತ್ತಾರೆ ಕಾಯಬೇಕು" ಎಂದಿದ್ದಾರೆ.

ಪರಮಾಪ್ತಗೆ ಹುದ್ದೆ ದೊರಕಿಸಿಕೊಡುವಲ್ಲಿ ಸಿದ್ದರಾಮಯ್ಯ ಯಶಸ್ವಿ

ಈಗಾಗಲೇ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಅಲಂಕರಿಸಲಿರುವ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆಯಾದರೂ ಜೆಡಿಎಸ್ ಮಾತ್ರ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಈಗಾಗಲೇ ಹಲವರು ಮಂದಿ ತಮಗೆ ಸಚಿವ ಸ್ಥಾನ ನೀಡುವಂತೆ ಹೆಚ್ ಡಿಕೆಗೆ ಒತ್ತಾಯಿಸಿದ್ದಾರೆಯಾದರೂ, ಸಿಎಂ ಮಾತ್ರ ಅಭ್ಯರ್ಥಿಗಳ ಹೆಸರನ್ನು ಶನಿವಾರ ಸಂಜೆ 5.20ಕ್ಕೆ ಹೇಳುವುದಾಗಿ ಘೋಷಿಸಿದ್ದಾರೆ.