ಕೊಪ್ಪಳ :  ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿದೆ. ಕೆಲವರಿಗೆ ಕೋಕ್ ನೀಡಿದ್ದರೆ. ಇನ್ನೂ ಕೆಲ ಹೊಸಬರಿಗೆ ಸಂಪುಟದಲ್ಲಿ ಮಣೆ ಹಾಕಲಾಗಿದೆ. ಇದೇ ವೇಳೆ ಆಕಾಂಕ್ಷಿಗಳ ಸಂಖ್ಯೆಯೂ ಕೂಡ ಹೆಚ್ಚಿದ್ದು ಹಲವರಲ್ಲಿ ಅಸಮಾಧಾನ ಭುಗಿಲೆದ್ದಿದೆ. 

ತಮ್ಮ ಪರಮಾಪ್ತ ಶಾಸಕಗೆ ಅಧಿಕಾರ ಕೊಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.  ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡುವ ಮೂಲಕ  ಕೊಪ್ಪಳ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. 

ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಕುಲಬಾಂಧವರಾಗಿದ್ದು, ಈ ನಿಟ್ಟಿನಲ್ಲಿ ವರಿಗೆ  ಸಿದ್ದರಾಮಯ್ಯ  ಸಂಸದೀಯ ಕಾರ್ಯದರ್ಶಿ ಹುದ್ದೆ ದೊರಕಿಸಿಕೊಟ್ಟಿದ್ದಾರೆ. 

ಆದರೆ ರಾಘವೇಂದ್ರ ಹಿಟ್ನಾಳ್ ಗಿಂತಲೂ ಹಿರಿಯರಾಗಿರುವ ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪೂರಗೆ ಮಾತ್ರ ಅಧಿಕಾರದ ಭಾಗ್ಯ ಇಲ್ಲದಂತಾಗಿದೆ.  

ಅಮರೇಗೌಡ ಭಯ್ಯಾಪೂರ  5 ಬಾರಿ ಶಾಸಕರಾಗಿದ್ದು,  3 ಬಾರಿ ಲಿಂಗಸೂರು ಹಾಗೂ 2 ಬಾರಿ ಕುಷ್ಟಗಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅತ್ಯಂತ ಹಿರಿಯರೂ ಆಗಿದ್ದು, ಆದರೆ ಅಧಿಕಾರ ಮಾತ್ರ ದೊರಕಿಲ್ಲ. ಈ ನಿಟ್ಟಿನಲ್ಲಿ ಮತ್ತೆ ಕಾಂಗ್ರೆಸ್ ನಲ್ಲಿ ಅಧಿಕಾರಕ್ಕಾಗಿ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ.