ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣಗೆ ಧನ್ಯವಾದ ಹೇಳಿದ ಸಿಎಂ ಬೊಮ್ಮಾಯಿ
* ಹಿರಿಯ ಮುತ್ಸುದ್ಧಿ ಎಸ್.ಎಂ.ಕೃಷ್ಣಗೆ ಧನ್ಯವಾದ ಹೇಳಿದ ಸಿಎಂ
* ಮೈಸೂರು ದಸರಾ ಉದ್ಘಾಟನೆಯನ್ನು ನೆರವೇರಿಸಲು ಒಪ್ಪಿಕೊಂಡಿರುವುದಕ್ಕೆ ಧನ್ಯವಾದ ಎಂದ ಬೊಮ್ಮಾಯಿ
* ಸಚಿವ ಎಸ್‌ಟಿ ಸೋಮೇಶಖರ್ ಅವರನ್ನ ಹಾಡಿಹೊಗಳಿದ ಎಸ್‌ಎಂ ಕೃಷ್ಣ
ಬೆಂಗಳೂರು, (ಸೆ.29): ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಯನ್ನು ನೆರವೇರಿಸಲು ಒಪ್ಪಿಕೊಂಡಿರುವುದಕ್ಕೆ ಎಸ್.ಎಂ. ಕೃಷ್ಣ (SM Krishna) ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಧನ್ಯವಾದ ತಿಳಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಉದ್ಘಾಟನೆಯನ್ನು ನೆರವೇರಿಸಲು ಆಮಂತ್ರಣವನ್ನು ತಾವು ಒಪ್ಪಿಕೊಂಡಿರುವುದಕ್ಕೆ ಸರ್ಕಾರದ ಪರವಾಗಿ ತಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪತ್ರ ಬರೆದಿದ್ದಾರೆ.
ಈ ಬಾರಿಯ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ರಾಜಕೀಯ ಮುತ್ಸದ್ದಿ ಎಸ್. ಎಂ. ಕೃಷ್ಣ
ಸೋಮಶೇಖರ್‌ಗೆ SM ಕೃಷ್ಣ ಧನ್ಯವಾದ
ಮೈಸೂರು ದಸರಾ ಉದ್ಘಾಟಕರನ್ನಾಗಿ ರಾಜ್ಯ ಸರ್ಕಾರ ಅವಕಾಶ ನೀಡಿದ್ದಕ್ಕೆ ಸಹಕಾರ ಸಚಿವರು ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸುದ್ಧಿ ಎಸ್.ಎಂ.ಕೃಷ್ಣ ಅವರು ಧನ್ಯವಾದ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ನಾಡ ದಸರಾಗೆ ನನ್ನನ್ನು ಆಹ್ವಾನಿಸಿರುವ ತಮ್ಮ ಹೃದಯ ವೈಶಾಲ್ಯತೆಗೆ ನಾನು ಆಭಾರಿಯಾಗಿದ್ದೇನೆ. ನಾಡಿದ ದಸರಾ ಯಶಸ್ವಿಯಾಗಿ ಜರುಗಿ ಜನರ ಸಂಕಷ್ಟಗಳು ದೂರವಾಗಿ ಸಾಂಸ್ಕೃತಿಕ ಜಾತ್ರೆ ಯಶಸ್ಸು ಕಾಣಲು ತಾಯಿ ಚಾಮುಂಡೇಶ್ವರಿ ತಮಗೆ ಶಕ್ತಿ ನೀಡಲಿ ಎಂದು ಎಸ್.ಎಂ.ಕೃಷ್ಣ ಆಶಿಸಿದ್ದಾರೆ.
ಅಲ್ಲದೇ ಮೈಸೂರು ಉಸ್ತುವಾರಿಯಾಗಿ ಜಿಲ್ಲೆಯಲ್ಲಿ ಮಾಡಿರುವ ಜನಪರ ಕೆಲಸಗಳ ಬಗ್ಗೆ ಎಸ್.ಎಂ.ಕೃಷ್ಣ ಅವರು ಎಸ್‌ಟಿ ಸೋಮಶೇಖರ್ ಅವರನ್ನು ಹಾಡಿಹೊಗಳಿದ್ದಾರೆ.