Asianet Suvarna News Asianet Suvarna News

ನಮ್ದು ಪುಕ್ಕಟ್ಟೆ ಪ್ರಚಾರ, ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಹಾಸ್ಯ ಚಟಾಕಿ

* ಇನ್ಫೋಸಿಸ್ ಫೌಂಡೇಷನ್​ನಿಂದ ನಿರ್ಮಾಣಗೊಂದ ಆಸ್ಪತ್ರೆ ಲೋಕಾರ್ಪಣೆ
* ಜಯದೇವ ಆಸ್ಪತ್ರೆ ಆವರಣದಲ್ಲಿ 103 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ
* ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಿಎಂ ಬೊಮ್ಮಾಯಿ

Basavaraj Bommai speech In  Infosys foundation hospital inauguration Function at jayadeva rbj
Author
Bengaluru, First Published Nov 17, 2021, 8:18 PM IST
  • Facebook
  • Twitter
  • Whatsapp

ಬೆಂಗಳೂರು, (ನ.17): ಇನ್ಫೋಸಿಸ್ ಫೌಂಡೇಷನ್​ನಿಂದ(Infosys Foundation) 103 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಆಸ್ಪತ್ರೆ (Hospital) ನಿರ್ಮಾಣವಾಗಿದೆ. 

ಬೆಂಗಳೂರಿನ ಜಯದೇವ ಆಸ್ಪತ್ರೆ (Jayadeva Hospital) ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದ್ದು, ನೂತನ ಆಸ್ಪತ್ರೆ 350 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಅದನ್ನು ಇಂದು (ನ.17) ಉದ್ಘಾಟನ ಮಾಡಲಾಯ್ತು..

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಆಸ್ಪತ್ರೆ ಕಟ್ಟಿಸಿಕೊಟ್ಟವರು ಅಲ್ಲಿದ್ದಾರೆ. ಪ್ಲಾನ್ ಮಾಡಿ ಕಟ್ಟಿಸಿಕೊಂಡವರು ಇಲ್ಲಿ ಕೂತಿದ್ದಾರೆ. ಕೆಲಸ ಮಾಡುವ ಸಿಬ್ಬಂದಿಗಳು ಇಲ್ಲೇ ಕೂತಿದ್ದಾರೆ
 ನಮ್ಮದು ಪುಕ್ಕಟ್ಟೆ ಪ್ರಚಾರ ಎಂದು ಹಾಸ್ಯ ಚಟಾಕಿ ಹಾರಿಸಿದರು.

Infosys Foundation; ನನಗೆ ಹೆರಿಗೆಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲೇ, ಇಂಥ ಕೆಲಸದಿಂದ ತೃಪ್ತಿ ಇದೆ

ಇನ್ನು ನಮ್ಮದು ಒಂದು ಒಳ್ಳೆಯ ಕೆಲಸ ಅಂದ್ರೆ ಈ ಕಾರ್ಯದಲ್ಲಿ ನಾವು ಕೈ ಆಡಿಸದೇ ಇರುವುದು ಎಂದಿರುವ ಬೊಮ್ಮಾಯಿ ಅವರ ಮಾತಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ನಗೆಗಡಲಲ್ಲಿ ತೇಲಿದರು.

ಸುಧಾಮೂರ್ತಿ ಅವ್ರು ನನಗೆ ಹಿರಿಯ ಅಕ್ಕ. ನನ್ನ ಆದರ್ಶ ಪುರುಷರು ಅಂದರೆ ನಾರಾಯಣ ಮೂರ್ತಿ. ಅವರ ಬದುಕು ನಮಗೆಲ್ಲಾ ಪ್ರೇರಣೆಯಾಗಿದೆ. ನಾನು ಭೇಟಿಯಾದಾಗಲೆಲ್ಲಾ ಪ್ರೇರಣೆ ಪಡೆದುಕೊಂಡಿದ್ದೇನೆ. ಸುಧಾಮೂರ್ತಿ ಅವರ ಹೃದಯ ವೈಶಾಲ್ಯತೆ ಹಾಗೂ ದೂರದೃಷ್ಟಿಯನ್ನ ಯಾರೂ ಫಾಲೋಮಾಡಲು ಸಾಧ್ಯವಿಲ್ಲ ಎಂದರು.

ಮೊದಲು ವಿದೇಶದಿಂದ ಬರುವವರು ದೆಹಲಿಗೆ ಬರ್ತಿದ್ರು. ಕಳೆದ ಹತ್ತು ವರ್ಷದಲ್ಲಿ ವಿದೇಶದಿಂದ ಬರುವವರು ಬೆಂಗಳೂರಿಗೆ ಬರ್ತಾರೆ ಎಂದು ತಿಳಿಸಿದರು.

Knowledge is power ಅಂತ ತೋರಿಸಿಕೊಟ್ಟವರು ನಾರಾಯಣ ಮೂರ್ತಿಯವರು. ಕರ್ತವ್ಯವನ್ನು ಬದಲಾವಣೆಗೆ ಬಳಸಿದರೆ ಅದು ಕಾಯಕ ಆಗುತ್ತದೆ. ಈ ಕಾಯಕವನ್ನ ನಾರಾಯಣ ಮೂರ್ತಿ, ಸುಧಾಮೂರ್ತಿ ‌ಮಾಡ್ತಿದ್ದಾರೆ. ಕೆರೆಯ ನೀರನ್ನ ಕೆರೆಗೆ ಚೆಲ್ಲಿ ಎಂಬಂತೆ ಸಮಾಜದಿಂದ ಗಳಿಸಿದ್ದನ್ನ ಸಮಾಜಕ್ಕೆ ನೀಡ್ತಿದ್ದಾರೆ ಎಂದು ಹೇಳಿದರು.

ಜಯದೇವ ಆಸ್ಪತ್ರೆಗೆ ಬರುವವರ ಸಂಖ್ಯೆ ನೋಡಿದ್ರೆ ಆಶ್ಚರ್ಯ ಆಗುತ್ತದೆ. ಈ ಸಂಖ್ಯೆಯನ್ನ ಡಾ. ಮಂಜುನಾಥ್ ಹಾಗೂ ಅವರ ಸಿಬ್ಬಂದಿ ಹೇಗೆ ನಿಭಾಯಿಸ್ತಾರೆ ಎಂದು ಆಶ್ಚರ್ಯ ಆಗುತ್ತದೆ. ನಿಜಕ್ಕೂ ಇದು ಎಂಟನೇ ಅದ್ಭುತ. ಈಗ ಮತ್ತಷ್ಟು ಬೆಡ್ ಗಳ ಸಂಖ್ಯೆ ‌ಹಚ್ಚಳವಾಗಿದ್ದು, ಈಗ ಇನ್ನಷ್ಟು ಲೋಡ್ ಹೆಚ್ಚಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 250 Phc ಸೆಂಟರ್ ಗಳನ್ನ ಮೇಲ್ದರ್ಜೆಗೆ ಏರಿಸ್ತಿದ್ದೇವೆ. ಮುಂದಿನ ವರ್ಷ ಮತ್ತೆ 250 PHC ಗಳನ್ನ ಮೇಲ್ದರ್ಜೆಗೆ ಏರಿಸಲಾಗತ್ತೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕವಾರು ಸ್ಪೆಷಲಿಸ್ಟ್ ಆಸ್ಪತ್ರೆಗಳನ್ನ ನಿರ್ಮಿಸುವ ಗುರಿ ಹೊಂದಿದ್ದೇವೆ. ದೇವರನ್ನ ಬಿಟ್ಟರೆ ಹೃದಯವನ್ನ ಹೊಕ್ಕು ನೋಡುವವರು ವೈದ್ಯರು. ನನ್ನ ತಂದೆ ತಾಯಿಗೂ ಬೈಪಾಸ್ ಸರ್ಜರಿ ಆಗಿತ್ತು. ಈ ಸಂದರ್ಭದಲ್ಲಿ ಇದು ನೆನಪಾಗ್ತಿದೆ ಎಂದರು.

ಬಹಳ ವರ್ಷಗಳ ನಂತರ ಡೈನಾಮಿಕ್ ಆರೋಗ್ಯ ‌ಸಚಿವರು ಸಿಕ್ಕಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಬೇಕಾಗುವ ಯೋಜನೆಯನ್ನ ತಯಾರಿಸುವಂತೆ ಸೂಚಿಸಿದ್ದೇನೆ. ಅದನ್ನ ಸುಧಾಕರ್ ಮಾಡುವ ಪ್ರಯತ್ನದಲ್ಲಿ ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಸುಧಾಕರ್ ಮಾತು
ಬೆಂಗಳೂರಿಗೆ ಗಾರ್ಡನ್ ಸಿಟಿ ಅನ್ನುತ್ತೇವೆ. ಜಯದೇವ ಹೃದ್ರೋಗ ಸಿಟಿ ಎಂದು ಬೆಂಗಳೂರು ಕರೆಸಿಕೊಳ್ಳುವ ಕಾಲ ಬರುತ್ತೆ. 1000 ಹಾಸಿಗೆಯುಳ್ಳ ವಿಶ್ವದ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆ ಬೆಂಗಳೂರಿನಲ್ಲಿದೆ. ಇದಕ್ಕೆ ನಾನು ಇನ್ಫೋಸಿಸ್ ಪ್ರತಿಷ್ಠಾನಗೆ ನಮಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಹೃದಯ ರೋಗದ ಸಮಸ್ಯೆ ದಿನೇ ದಿನೇ ರಾಜ್ಯದಲ್ಲಿ ಹೆಚ್ಚಳವಾಗ್ತಿದೆ. 35 ವರ್ಷ ಮೇಲ್ಪಟ್ಟ 50 ವರ್ಷದೊಳಗಿನ ಯುವ ಸಮೂಹದಲ್ಲಿ ಹೃದಯಘಾತ ಆಗುತ್ತಿದೆ. ಪುರುಷರಿಗೆ ಅತಿ ಹೆಚ್ಚು ಹಾರ್ಟ್ ಅಟ್ಯಾಕ್ ಆಗುತ್ತಿದ್ದು,.ಒಳ್ಳೆ ಆರೋಗ್ಯಕ್ಕೆ ವ್ಯಾಯಾವ, ಆಹಾರ ಪದ್ಧತಿ ಮುಖ್ಯ. ಗ್ರಾಮೀಣ ಪ್ರದೇಶಗಳಲ್ಲಿ ಧೂಮಪಾನ, ಮದ್ಯಪಾನದಿಂದ ಅಸುನೀಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಕಲಬುರಗಿ, ಮೈಸೂರಿನಲ್ಲಿ, ಶಿವಮೊಗ್ಗ ಜಯದೇವ ಆಸ್ಪತ್ರೆ ನಿರ್ಮಾಣಗೊಂಡಿದೆ. ಹುಬ್ಬಳ್ಳಿ ಸೇರಿ ವಿಭಾಗೀಯ ಮಟ್ಟದಲ್ಲಿ ಜಯದೇವ ಆಸ್ಪತ್ರೆ ತೆರೆಯುವ ಆಲೋಚನೆ ಸರ್ಕಾರಕ್ಕಿದೆ ಎಂದು ತಿಳಿಸಿದರು.

100 ಹಾಸಿಗೆಯ ಸಾಮರ್ಥ್ಯದ ಆಸ್ಪತ್ರೆಯನ್ನು ಕೋವಿಡ್ ಟೈಮ್ ನಲ್ಲಿ ಇನ್ಫೋಸಿಸ್ ಕಟ್ಟಿಕೊಟ್ಟಿದೆ. ಬೊಮ್ಮಾಯಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಸೂಚಿಸಿದ್ದು, 250 ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಯೋಚನೆ ಮಾಡಲಾಗಿದೆ ಎಂದು ಹೇಳಿದರು.

ಶೇಕಾಡ 24% ಸಾವಿಗೆ ಹೃದಯ ಸಮಸ್ಯೆ ಕಾರಣವಾಗಿದೆ. ಹೀಗಾಗಿ ಯುವಕರು ವ್ಯಾಯಾಮ, ಯೋಗಕ್ಕೆ ಮಹತ್ವ ಕೊಡಬೇಕಿದೆ. ಅಪ್ಪು ಜಿಮ್ ಮಾಡುವ ಸಂದರ್ಭದಲ್ಲಿ ಹೃದಯ ತೊಂದರೆ ಆಗಿ ತೀರಿಕೊಂಡಿದ್ದಾರೆ. ಈ ಘಟನೆಯಿಂದ ಯುವಕರು ಹೆದರಿ ಆಸ್ಪತ್ರೆಯತ್ತ ಓಡಿ ಬರುತ್ತಿದ್ದಾರೆ. ಆದರೆ ಜಿಮ್ ಮಾಡುವುದರಿಂದ ಹೃದಯದ ಅಪಾಯ ಇಲ್ಲ. ಪೋಷಕರಿಗೆ ಹೃದಯ ಸಮಸ್ಯೆ ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಅತಿಯಾದ ವ್ಯಾಯಾಮ ಒಳ್ಳೆಯದಲ್ಲ ಎಂದು ಸಲಹೆ ನೀಡಿದರು.

ದೇವರ ದಯೆಯಿಂದ ರಾಜ್ಯ, ದೇಶಕ್ಕೆ ಕೋವಿಡ್ ಮೂರನೇ ಅಲೆ ಕಾಲಿಟ್ಟಿಲ್ಲ. ಅಂತಾರಾಷ್ಟ್ರೀಯ ಜರ್ನಲ್ ಪ್ರಕಾರ ಭಾರತದಲ್ಲಿ ಕೋವಿಡ್ ಎಂಡೆಮಿಕ್ ಸ್ಟೇಜ್ ಗೆ ತಲುಪಿದೆ ಎನ್ನಲಾಗಿದೆ. ಆದರೆ ವಿದೇಶಗಳಲ್ಲಿ ಕೋವಿಡ್ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಎಚ್ಚರಿಕೆ ಅತ್ಯಗತ್ಯ, ಮಾಸ್ಕ್ ಹಾಕಿಕೊಳ್ಳುವುದು ಅಗತ್ಯ ಎಂದು ಕಿವಿ ಮಾತು ಹೇಳಿದರು.

Follow Us:
Download App:
  • android
  • ios