ವೃದ್ಧಾಶ್ರಮಗಳಿಗೆ ಒದಗಿಸುವ ಅನುದಾನ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ

* ವಿಶ್ವ ಹಿರಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಮಹತ್ವದ ಘೋಷಣೆ
* ವೃದ್ಧಾಶ್ರಮಗಳಿಗೆ ಒದಗಿಸುವ ಅನುದಾನವನ್ನು ಏರಿಕೆ ಮಾಡಿದ ಸಿಎಂ ಬೊಮ್ಮಾಯಿ
* ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಘೋಷಣೆ 

basavaraj bommai announces increase  old age homes grants rbj

ಬೆಂಗಳೂರು, (ಅ.01): ವೃದ್ಧಾಶ್ರಮಗಳಿಗೆ ಸರ್ಕಾರದಿಂದ ಒದಗಿಸುವ ಅನುದಾನವನ್ನು25 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಳ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದರು.

ಇಂದು  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಘೋಷಣೆ ಮಾಡಿದರು.

ಕಷ್ಟದಲ್ಲಿರೋ ವಿಜಯಲಕ್ಷ್ಮಿಗೆ ಸ್ಪಂದಿಸಿದ ಕರುನಾಡು, ಹರಿದು ಬಂತು ಸಹಾಯ

ವೃದ್ಧಾಪ್ಯ ಆಶ್ರಮಗಳಿಗೆ ರಾಜ್ಯದಿಂದ ವಾರ್ಷಿಕ 8 ಲಕ್ಷ ಅನುದಾನ ಕೊಡಲಾಗ್ತಿದೆ. ಅನುದಾನ ಮೊತ್ತದಲ್ಲಿ 7 ಲಕ್ಷ ಏರಿಕೆ ಮಾಡಿ ಒಟ್ಟು 15 ಲಕ್ಷ ಅನುದಾನ ಕೊಡ್ತೇವೆ. ಕೇಂದ್ರದಿಂದ ಸದ್ಯ 25 ಲಕ್ಷ ಅನುದಾನ ಬರ್ತಿದೆ. ರಾಜ್ಯದ ಅನುದಾನವೂ ಸೇರಿ ಒಟ್ಟು 40 ಲಕ್ಷ ಅನುದಾನ ಕೊಡುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

ವಯಸ್ಸಿನಿಂದ ಅನುಭವದಿಂದ ನಡವಳಿಕೆಯಿಂದ ನಿರ್ಧಾರವಾಗುತ್ತದೆ. ಮಾನಸಿಕವಾಗಿ ನಾವೂ ಗಟ್ಟಿಯಿದ್ದರೆ ಹಿರಿತನ ನಿರ್ಧಾರವಾಗುತ್ತದೆ. ಸಮಾಜಕ್ಕೆ ಇನ್ನೂ ಕೊಡುಗೆ ಕೊಡಬಹುದು ಅನ್ನುವ ಮನಸಿದ್ದರೆ ನಮ್ಮ ಹಿರಿತನವನ್ನು ಯಶಸ್ವಿಯಾಗಿ ಕಳೆಯಬಹುದು ಎಂದರು. 

ಕುಟುಂಬ, ಸರ್ಕಾರ, ವ್ಯವಸ್ಥೆ, ಸಮಾಜ ಹಿರಿಯರ ಜೊತೆಗಿರಬೇಕು. ಹಿರಿಯರಾಗಿದ್ದ ಸಿ.ಎಂ.ಉದಾಸಿಯವರು ಇತ್ತೀಚೆಗೆ ನಿಧನರಾದರು. ಅವರ ವಯಸ್ಸು ಕೇಳಿದ್ರೆ, ಏ ತಮ್ಮ ಹಾಗೆಲ್ಲ ಕೇಳಬಾರದು ಅಂತಿದ್ದರು. ನಾನು ಮಾಜಿ ಯುವಕ, ನೀನು ಭಾವಿ ಮುದುಕ ಎಂದು ಹೇಳುತ್ತಿದ್ದರು. ಅದು ಒಳ್ಳೆಯ ಮನಸ್ಥಿತಿ ಎಂದು ಬೊಮ್ಮಾಯಿ ನೆನಪುಗಳನ್ನು ಮೆಲುಕುಹಾಕಿದರು.

Latest Videos
Follow Us:
Download App:
  • android
  • ios