ಬೆಳಗಾವಿ(ಡಿ.06): ಸಚಿವ ಸಂಪುಟದ ಸಭೆಯನ್ನು ಯಾವ ಘಳಿಗೆಯಲ್ಲಿ, ಯಾವ ಸೇಕೆಂಡ್ ನಲ್ಲಿ ಶುರು ಮಾಡಬೇಕು ಅಂತ ಯೋಚನೆ ಮಾಡುವಂತ ದುಸ್ಥಿತಿಯಲ್ಲಿ ನಾವಿದ್ದೀವಿ ಎಂದು ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿಕೆ ನೀಡಿದ್ದಾರೆ.

"

ಸಂಪುಟ ವಿಸ್ತರಣೆ ಆಗಬೇಕು ಅಂತ ಇಷ್ಟು ದಿನ ಬಾಯಿ ಬಡ್ಕೊಂಡು, ಅದಾಗುತ್ತೆ ಅಂತ ತಿರ್ಮಾನವಾದಾಗ ಧನುರ್ಮಾಸ ಅಂತ ಮುಂದಕ್ಕೆ ಹಾಕ್ತಿವಿ ಅಂತ ಯಾರು ಹೇಳ್ತಾರೊ ಅವರಿಗೆಲ್ಲ ಮಂತ್ರಿ ಪದವಿ ಇಲ್ಲಾ ಅಂತ ಹೇಳಿಬಿಟ್ಟರೆ ಒಳ್ಳೆಯದಲ್ಲವೇ ಎಂದು ಬರಗೂರು ಹರಿಹಾಯ್ದರು.

ವಿಧಾನಸೌಧ, ಸಂಸತ್ತು ಎರಡೂ ಮೌಢ್ಯದಿಂದ ಮುಕ್ತವಾಗಬೇಕು. ಶಾಸಕರು, ಸಂಸದರು ತಮ್ಮ ಮನೆಗಳಲ್ಲಿ ಏನಾದರು ಆಚರಣೆ ಇಟ್ಟುಕೊಳ್ಳಲು ಆದರೆ ಬಹುತ್ವವನ್ನು ಪ್ರತಿಪಾದಿಸುವ ಸಂವಿಧಾನಕ್ಕೆ ಗೌರವ ಕೊಡಿ ಎಂದು ಬರಗೂರು ಆಗ್ರಹಿಸಿದರು.

ಮಠ ಮಾನ್ಯಗಳಲ್ಲೂ ಮೌಢ್ಯ ವಿಮೋಚನೆಯಾಗಬೇಕು. ಮಠಮಾನ್ಯಗಳು ಧರ್ಮದ ಸ್ಥಾನಗಳಾಗದೇ ಜಾತಿ ಕೇಂದ್ರಗಳಾಗಿ ರೂಪಾಂತರಗೊಂಡಿವೆ ಎಂದೂ ಬರಗೂರು ತೀವ್ರ ವಿಷಾದ ವ್ಯಕ್ತಪಡಿಸಿದರು.