ಗಮನಿಸಿ, ಬನ್ನೇರುಘಟ್ಟ ಝೋ ವೆಬ್ಸೈಟ್‌ ಬದಲಾವಣೆ, ಇಮೇಲ್ ವಿಳಾಸ ಕೂಡ ಬದಲು

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕೃತ ವೆಬ್‌ಸೈಟ್‌ನ URL ಅನ್ನು https://bannerghatta biologicalpark.org ನಿಂದ https://bannerghatta biopark.org ಗೆ ಬದಲಾಯಿಸಿದೆ.

Bannerghatta Biological Park website URL changed gow

ಬೆಂಗಳೂರು (ಡಿ.29): ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕೃತ ವೆಬ್‌ಸೈಟ್‌ನ URL ಅನ್ನು https://bannerghatta biologicalpark.org ನಿಂದ https://bannerghattabiopark.org ಗೆ ಬದಲಾಯಿಸಿದೆ. ಇದಲ್ಲದೆ, ಬನ್ನೇರುಘಟ್ಟ ಜೈವಿಕ ಉದ್ಯಾನವನವು ಪಿಆರ್‌ಒ ಅವರ ಇಮೇಲ್ ವಿಳಾಸವನ್ನು pro@bannerughattabiopark.org ಗೆ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರ ಇಮೇಲ್ ವಿಳಾಸವನ್ನು ed@bannerughattabiopark.org ಗೆ ಬದಲಾಯಿಸಿದೆ. ಸಾರ್ವಜನಿಕರು ಬದಲಾವಣೆಗಳನ್ನು ಗಮನಿಸಿ ಮತ್ತು ಹೆಚ್ಚಿನ ವಿವರಗಳಿಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ www.bannerughattabiopark.org ಗೆ ಭೇಟಿ ನೀಡಲು ವಿನಂತಿಸಲಾಗಿದೆ.

ಬೆಸ್ಕಾಂ ನಲ್ಲಿ 400 ಗ್ರ್ಯಾಜುಯೇಟ್, ತಂತ್ರಜ್ಞ ಅಪ್ರೆಂಟಿಸ್ ಹುದ್ದೆ

ಬೆಂಗಳೂರಿನಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ದೂರದಲ್ಲಿರುವ ಈ ಪಾರ್ಕ್ 25,000 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಮಂಗಳವಾರ  ಬಿಟ್ಟು ಮಿಕ್ಕ ಎಲ್ಲಾ ದಿನವೂ ತೆರೆದಿರುತ್ತದೆ ,ಮಂಗಳವಾರ ವೀಕ್ಷಣೆಗೆ ಅವಕಾಶವಿಲ್ಲ ಮತ್ತು ಅದು ರಜೆಯ ದಿನವಾಗಿರುತ್ತದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ ಇಲ್ಲಿ ವೀಕ್ಷಣೆಗೆ ಅವಕಾಶ ಇದೆ. ಹಾಗೂ ಪ್ರವಾಸಿಗರು  ಪ್ರಾಣಿ ಪ್ರಿಯರಾಗಿದ್ದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಲು ಅವಕಾಶವಿದೆ.

ಸೆಪ್ಟೆಂಬರ್‌ನಿಂದ ಜನವರಿ ವೀಕ್ಷಣೆಗೆ ಉತ್ತಮ ಸಮಯವಾಗಿದೆ. ಮೆಜೆಸ್ಟಿಕ್‌ನಿಂದ 365 , ಮಾರ್ಕೆಟ್‌ನಿಂದ 366 , ಶಿವಾಜಿನಗರದಿಂದ 368 , ಬ್ರಿಗೇಡ್ ರಸ್ತೆಯಿಂದ G-4 ಬಿಎಂಟಿಸಿ ಬಸ್‌ ವ್ಯವಸ್ಥೆ ಇದೆ. ಮೃಗಾಲಯದಲ್ಲಿ ಒಂದು ಚಿಕ್ಕ ವಸ್ತು ಸಂಗ್ರಹಾಲಯವಿದೆ ಅದರಲ್ಲಿ ಪ್ರಾಣಿವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಮಾಡಲಾಗಿದೆ. ಈ ಪ್ರದೇಶದ ಅತ್ಯಂತ ಆಕರ್ಷಣೀಯ ಸ್ಠಳ ಮೃಗಾಲಯದಲ್ಲಿ ರೆಪ್ಟೈಲ್ ಪಾರ್ಕ್ ಹಾಗೂ ಒಂದು ಸಣ್ಣ ಥಿಯೇಟರ್ ಕೂಡಾ ಇದೆ.

370ನೇ ವಿಧಿ ರದ್ದು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ

ದೇಶದ ಪ್ರಪ್ರಥಮ ಬಟರ್‌ಫ್ಲೈ ಪಾರ್ಕ್ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಸ್ಥಾಪಿತಗೊಂಡಿತು.  ಇದರಲ್ಲಿ ಬಟರ್‌ಫ್ಲೈಗಳ ಸಂರಕ್ಷಣಾ ಸ್ಥಳ, ವಸ್ತು ಸಂಗ್ರಹಾಲಯ ಮತ್ತು ಒಂದು ಆಡಿಯೋ-ವಿಶುಯಲ್ ಕೋಣೆಯೂ ಸಹ ಇವೆ. 

Latest Videos
Follow Us:
Download App:
  • android
  • ios