ಬೆಸ್ಕಾಂ ನಲ್ಲಿ 400 ಗ್ರ್ಯಾಜುಯೇಟ್, ತಂತ್ರಜ್ಞ ಅಪ್ರೆಂಟಿಸ್ ಹುದ್ದೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಗ್ರ್ಯಾಜುಯೇಟ್ ಅಪ್ರೆಂಟಿಸ್ ಮತ್ತು ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು , ಆಸಕ್ತ ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

BESCOM  Recruitment Graduate and Technician Apprentice post  gow

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಗ್ರ್ಯಾಜುಯೇಟ್ ಅಪ್ರೆಂಟಿಸ್ ಮತ್ತು ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು , ಆಸಕ್ತ ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ:

ಗ್ರ್ಯಾಜುಯೇಟ್ ಮತ್ತು ತಂತ್ರಜ್ಞ ಅಪ್ರೆಂಟಿಸ್ - 400 ಹುದ್ದೆ

ಅ) ಗ್ರ್ಯಾಜುಯೇಟ್ ಅಪ್ರೆಂಟಿಸ್ ವಿಭಾಗ

1. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ - 143 ಹುದ್ದೆ

2. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ – 116 ಹುದ್ದೆ

3. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ – 36 ಹುದ್ದೆ

4. ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ – 20 ಹುದ್ದೆ

5. ಸಿವಿಲ್ ಇಂಜಿನಿಯರಿಂಗ್ – 05 ಹುದ್ದೆ

6. ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ ಇಂಜಿನಿಯರಿಂಗ್- 05 ಹುದ್ದೆ

ಆ) ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್ ವಿಭಾಗ

7. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ – 55 ಹುದ್ದೆ

8. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ 10 ಹುದ್ದೆ

9. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ 10 ಹುದ್ದೆ

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2023

ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯ ಘೋಷಣೆಯ ದಿನಾಂಕ: 08-01-2024

ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆಯ ದಿನಾಂಕ: 22-01-2024 ರಿಂದ 24-01-2024

ಅವಶ್ಯಕವಾದ ಅರ್ಹತೆಗಳು

1. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಅನ್ವಯಿಸುವ ಪ್ರವರ್ಗಗಳಲ್ಲಿ ಬಿ.ಇ/ ಬಿ-ಟೆಕ್‌ ಪದವಿ/ಡಿಪ್ಲೋಮಾ ಪದವಿಯನ್ನು ಪಡೆದಿರಬೇಕು.

2. ರಾಜ್ಯ/ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಕಾಲೇಜು/ಸಂಸ್ಥೆಯಿಂದ 3 ವರ್ಷದ ಡಿಪ್ಲೊಮಾವನ್ನು ಅನ್ವಯಿಸುವ ಪ್ರವರ್ಗಗಳಲ್ಲಿ ಪಡೆದಿರಬೇಕು.

ಅರ್ಹತಾ ಮಾನದಂಡಗಳು:

1.ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ.ಇ/ಬಿ-ಟೆಕ್‌ ಪದವಿ ಅಥವಾ ಪ್ರಾವಿಷನಲ್‌ ಬಿ.ಇ/ಬಿ-ಟೆಕ್‌ ಪದವಿ / ಡಿಪ್ಲೋಮಾ ಪದವಿಯನ್ನು ಪಡೆದಿರಬೇಕು.

2. ಅಭ್ಯರ್ಥಿಗಳು ಕನಿಷ್ಠ ಉತ್ತೀರ್ಣ ಅಂಕಗಳನ್ನು ಗಳಿಸಿ/ಡಿಪ್ಲೋಮಾವನ್ನು ಫೆಬ್ರವರಿ-2019 ಹಾಗೂ ಅದರ ನಂತರ 2020, 2021, 2022 ಮತ್ತು ಅಕ್ಟೋಬರ್-2023 ಅವಧಿಯಲ್ಲಿ ಪಡೆದಿರಬೇಕು.

3. ಅಪ್ರೆಂಟಿಸ್‌ಶಿಪ್ ಕಾಯಿದೆ 1961 ರ ಅಡಿಯಲ್ಲಿ ಈಗಾಗಲೇ ತರಬೇತಿ ಪಡೆದ ಅಥವಾ ಪ್ರಸ್ತುತ ಅಪ್ರೆಂಟಿಸ್‌ಶಿಪ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು/ ಒಂದು ವರ್ಷದ ಅನುಭವವಿರುವವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

4. ಅಪ್ರೆಂಟಿಸ್‌ಶಿಪ್ ನಿಯಮದ ಪ್ರಕಾರ ವಯಸ್ಸಿನ ಮಿತಿ ಹದಿನೆಂಟು ವರ್ಷಕ್ಕಿಂತ ಕಡಿಮೆ ಇರಬಾರದು.

ತರಬೇತಿಯ ಅವಧಿ:

ಅಪ್ರೆಂಟಿಸ್‌ಶಿಪ್ ಕಾಯಿದೆ 1961 ರ ಪ್ರಕಾರ ಒಂದು ವರ್ಷದ ತರಬೇತಿ ಅವಧಿ ನಿಗದಿಯಾಗಿರುತ್ತದೆ.

ಆಯ್ಕೆ ವಿಧಾನ:

ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ಟ್ರೈನಿಂಗ್ (ದಕ್ಷಿಣ ಪ್ರದೇಶ) ವು ಅಭ್ಯರ್ಥಿಗಳು ಆನ್‌ಲೈನ್ ಅಪ್ಲಿಕೇಶನ್ ಡೇಟಾದಲ್ಲಿ ಸಲ್ಲಿಸಿರುವ ಅಂಕಗಳು ಮತ್ತು ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಪ್ರಕ್ರಿಯೆಯನ್ನು ಮಾಡಲಾಗುವುದು. ಶಾರ್ಟ್‌ಲಿಸ್ಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇ-ಮೇಲ್‌ ಮೂಲಕ ಮಾಹಿತಿಯನ್ನು ನೀಡಲಾಗುವುದು. ಅಂತಹ ಅಭ್ಯರ್ಥಿಗಳು ಮೂಲ ದಾಖಲಾತಿ ಪರಿಶೀಲನೆಗಾಗಿ ಈ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಹಾಜರಾಗಬೇಕಾಗುತ್ತದೆ.

ದಾಖಲಾತಿ ಪರಿಶೀಲನೆಯ ವಿಳಾಸ:

ಉಪ ಪ್ರಧಾನ ವ್ಯವಸ್ಥಾಪಕರು ಅವರ ಕಚೇರಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಬೆಸ್ಕಾಂ, ಕ್ರೆಸೆಂಟ್ ಟವರ್ಸ್,

ಕ್ರೆಸೆಂಟ್ ರಸ್ತೆ, ಮಲ್ಲಿಗೆ ಆಸ್ಪತ್ರೆ, ಹತ್ತಿರ ರೇಸ್ ಕೋರ್ಸ್, ಬೆಂಗಳೂರು-560001.

ಕನಿಷ್ಠ ದೈಹಿಕ ಗುಣಮಟ್ಟ :

ಅ) ಅಭ್ಯರ್ಥಿಯು ಯಾವುದೇ ಸಾಂಕ್ರಾಮಿಕಗಳನ್ನು ಹೊಂದಿರಬಾರದು.

ಆ) ಅಪ್ರೆಂಟಿಸ್‌ ಕಾಯ್ದೆಯ ಅನುಸೂಚಿ-೨ರಲ್ಲಿ ನೀಡಿರುವ ಕ್ಷಯರೋಗ ಕಾಯಿಲೆಯ ಸಕ್ರಿಯತೆಯ ಪುರಾವೆಯಿಂದ ಅಥವಾ

ಅದರ ಆರೋಗ್ಯದ ಸಮಸ್ಯೆಯಿಂದ ಮುಕ್ತನಾಗಿರಬೇಕು.

ಇ) ಅವನು/ಅವಳು ಸಹಾಯಕ ಶಸ್ತ್ರಚಿಕಿತ್ಸಕರ ದರ್ಜೆಗಿಂತ ಕೆಳಮಟ್ಟವಲ್ಲದ ಅಧಿಕಾರಿಯಿಂದ ಲಿಖಿತ ರೂಪದಲ್ಲಿ ವೈದ್ಯಕೀಯ ಫಿಟ್ನೆಸ್ ಪ್ರಮಾಣ ಪತ್ರವನ್ನು ಅಭ್ಯರ್ಥಿಯು ಹಾಜರುಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ :  https://bescom.karnataka.gov.in/

Latest Videos
Follow Us:
Download App:
  • android
  • ios