ಪ್ರೆಸ್‌ ಕ್ಲಬ್‌ನ 2022ನೇ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರ್ಷದ ವ್ಯಕ್ತಿ ‘ವಿಶೇಷ ಪ್ರಶಸ್ತಿ’ಗೆ ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಮತ್ತು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಭಾಜನರಾಗಿದ್ದಾರೆ.

ಬೆಂಗಳೂರು (ಡಿ.20) : ಪ್ರೆಸ್‌ ಕ್ಲಬ್‌ನ 2022ನೇ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರ್ಷದ ವ್ಯಕ್ತಿ ‘ವಿಶೇಷ ಪ್ರಶಸ್ತಿ’ಗೆ ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಮತ್ತು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಭಾಜನರಾಗಿದ್ದಾರೆ.

ಇನ್ನುಳಿದಂತೆ ಪ್ರೆಸ್‌ಕ್ಲಬ್‌ ‘ವಾರ್ಷಿಕ ಪ್ರಶಸ್ತಿ’ಗೆ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಇನ್‌ಪುಟ್‌ ಎಡಿಟರ್‌ ಎಂ.ಸಿ.ಶೋಭಾ ಸೇರಿದಂತೆ ಹಲವರು ಭಾಜನರಾಗಿದ್ದಾರೆ. ಎಚ್‌.ಎಸ್‌.ಬಲರಾಂ, ಅಗ್ರಹಾರ ಕೃಷ್ಣಮೂರ್ತಿ, ಗಂಗಾಧರ ಮೊದಲಿಯಾರ್‌, ಚೆನ್ನ ನಾಗರಾಜ್‌ ಎಂ., ಶ್ರೀಧರ ಬಿ.ಎನ್‌, ವಿನಯ್‌ ಎಂ., ಗೌತಮ್‌ ಮಾಚಯ್ಯ ಎಂ., ರಾಜಶೇಖರ್‌ ಎಸ್‌., ಎಚ್‌.ಮೂರ್ತಿ, ಸಂಗಮ್‌ ದೇವ್‌ ಐ.ಎಚ್‌, ಮುನೀರ್‌ ಅಹಮದ್‌ ಅಜದ್‌, ಕೆ.ವಿ.ಪರಮೇಶ್‌, ಸಿ.ಎಸ್‌.ಬೋಪಯ್ಯ, ಶ್ಯಾಂ ಬೋಜಕ್‌, ಭಾಗ್ಯಪ್ರಕಾಶ್‌ ಕೆ, ಅನಿಲ್‌ ವಿ. ಗೆಜ್ಜೆ, ಗಾಯತ್ರಿ ಶ್ರೀನಿವಾಸ್‌, ಬಸವರಾಜು, ಹನುಮೇಶ್‌ ಯಾವಗಲ್‌, ಶಿವಣ್ಣ, ದಿವಾಕರ್‌ ಸಿ, ನಾಗಭೂಷಣ್‌ ವೈ.ಎಂ, ವಿಲಾಸ್‌ ನಂದೂಡಕರ್‌, ಇ.ನಾಗರಾಜು, ಪಿ.ರಾಜೇಂದ್ರ, ಶಿವಾನಂದ ತಗಡೂರು, ಶಿವಪ್ರಕಾಶ್‌ ಎಸ್‌, ಓಂಕಾರ ಕಾಕಡೆ, ಜಯಪ್ರಕಾಶ್‌ ಆರ್‌, ನರಸಿಂಹ ರಾವ್‌, ರಾಘವೇಂದ್ರ ಕೆ.ತೊಗರ್ಸಿ, ಗಿರಿಪ್ರಕಾಶ್‌ ಕೆ. ಅವರಿಗೆ ವಾರ್ಷಿಕ ಪ್ರಶಸ್ತಿ ಸಂದಿದೆ.

ಪತ್ರಕರ್ತರ ಸಂಘದಿಂದ ಪ್ರತಿಭಾ ಪುರಸ್ಕಾರ: 2.5 ಲಕ್ಷ ರೂ. ಘೋಷಿಸಿದ ವಿ. ಸೋಮಣ್ಣ