ವೇಗದ ಅಭಿವೃದ್ಧಿ: ವಿಶ್ವದ ಟಾಪ್ 20ರಲ್ಲಿ ಬೆಂಗಳೂರು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Dec 2018, 8:00 AM IST
bangalore is among top 20 developing cities in the world
Highlights

2019ರಿಂದ 35ರವರೆಗೆ ಅತಿವೇಗದಿಂದ ಅಭಿವೃದ್ಧಿ ಆಗಲಿರುವ ಟಾಪ್ 20 ನಗರಗಳಲ್ಲಿ ಬೆಂಗಳೂರು ಸೇರಿದಂತೆ ಭಾರತದ ಒಟ್ಟು 17 ನಗರಗಳು ಸ್ಥಾನ ಗಿಟ್ಟಿಸಿಕೊಂಡಿವೆ.

ನವದೆಹಲಿ[ಡಿ.07]: 2019ರಿಂದ 2035ರ ಅವಧಿಯಲ್ಲಿ ವಿಶ್ವದಲ್ಲಿ 20 ನಗರಗಳು ಅತಿವೇಗದ ಅಭಿವೃದ್ಧಿ ಕಾಣಲಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ವಿಶೇಷವೆಂದರೆ ಈ 20 ನಗರಗಳಲ್ಲಿ ಬೆಂಗಳೂರು ಸೇರಿದಂತೆ ಭಾರತದ 17 ನಗರಗಳು ಇವೆ!

ಹೌದು. ‘ಆಕ್ಸ್‌ಫರ್ಡ್‌ ಎಕಾನಮಿಕ್ಸ್‌’ ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂಶವಿದ್ದು, ಭಾರತದಲ್ಲಿ ಸೂರತ್‌ ಅತಿವೇಗದ ಅಭಿವೃದ್ಧಿ ಕಾಣಲಿದೆ ಎಂದು ಅಂದಾಜು ಮಾಡಿದೆ. ಇನ್ನು ನಂತರದ ಸ್ಥಾನದಲ್ಲಿ ಆಗ್ರಾ, ಬೆಂಗಳೂರು, ಹೈದರಾಬಾದ್‌, ನಾಗಪುರ, ತಿರುಪ್ಪುರ, ರಾಜಕೋಟ್‌, ತಿರುಚಿರಾಪಳ್ಳಿ, ಚೆನ್ನೈ, ವಿಜಯವಾಡ ಇವೆ.

‘ಜಿಡಿಪಿ ಬೆಳವಣಿಗೆ ದರ ಆಧರಿಸಿ ಭಾರತೀಯ ನಗರಗಳು ಮುಂದಿನ 16 ವರ್ಷಗಳಲ್ಲಿ ಉತ್ತಮ ಪ್ರಗತಿ ಕಾಣಲಿವೆ. ಟಾಪ್‌-20 ಬೆಳವಣಿಗೆಯ ನಗರಗಳಲ್ಲಿ ಭಾರತದ 17 ಇರಲಿವೆ’ ಎಂದು ವರದಿ ಹೇಳಿದೆ.

ಸೂರತ್‌ನ ಸರಾಸರಿ ವಾರ್ಷಿಕ ಜಿಡಿಪಿ ಬೆಳವಣಿಗೆ ದರ ಶೇ.9.2 (2018ರಿಂದ 2035ರವರೆಗೆ) ಇರಲಿದೆ. ಇನ್ನು ನಂತರದ ಸ್ಥಾನದಲ್ಲಿರುವ ಆಗ್ರಾ ಬೆಳವಣಿಗೆ ದರ ಶೇ.8.58 ಬೆಂಗಳೂರಿನ ಅಭಿವೃದ್ಧಿ ದರ ಶೇ.8.50 ಇರಲಿದೆ ಎಂದು ಆಕ್ಸ್‌ಫರ್ಡ್‌ ಗ್ಲೋಬಲ್‌ ಸಿಟೀಸ್‌ ರೀಸಚ್‌ರ್‍ ರಿಪೋರ್ಟ್‌ ಹೇಳಿದೆ.

ಇದೇ ವೇಳೆ, ಕಾಂಬೋಡಿಯಾದ ಫೆä್ನೕಮ್‌ ಪೆನ್‌್ಹ ವಿಶ್ವದ ಅತಿ ವೇಗದ ಬೆಳವಣಿಗೆ ಕಾಣುವ ನಗರವಾಗಲಿದೆ.

loader