Asianet Suvarna News Asianet Suvarna News

ಬೆಂಗಳೂರು: 3 ದಿನ ಕ್ರಿಸ್‌ಮಸ್ ಆಚರಿಸಿದ್ದ ಬಸವನಗುಡಿ ಕಾಲೇಜಿನಲ್ಲಿ ರಾಮನ ಪೂಜೆಗೆ ಅವಕಾಶವಿಲ್ಲ!

ಮೂರು ದಿನಗಳ ಕಾಲ ಕ್ರಿಸ್‌ಮಸ್ ಆಚರಣೆಗೆ ಒಂದು ದಿನ ಶ್ರೀರಾಮ ಪೂಜೆಗೆ ಅವಕಾಶ ಮಾಡಿಕೊಡದ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ತಿರುಗಿ ಬಿದಿದ್ದಾರೆ.,

Bangalore Engineering College opposed to Ram Puja by the students sat
Author
First Published Jan 22, 2024, 4:46 PM IST

ಬೆಂಗಳೂರು (ಜ.22): ಕಳೆದ ಡಿಸೆಂಬರ್ ತಿಂಗಳು ಮೂರು ದಿನ ಕ್ರಿಸ್‌ಮಸ್‌ ಹಬ್ಬವನ್ನು ಆಚರಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಬೆಂಗಳೂರಿನ ಬಸವನಗುಡಿ ಖಾಸಗಿ ಕಾಲೇಜಿನಲ್ಲಿ ಇಂದು ಶ್ರೀರಾಮ ಫೋಟೋವನ್ನು ಇಟ್ಟು ಪೂಜೆ ಮಾಡಲು ಬಿಡಲಿಲ್ಲ. ಇದರಿಂದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಾಲೇಜು ಯುವಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ.

ಇಡೀ ದೇಶದಾದ್ಯಂತ ಬಾಲರಾಮ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಲಾದ ಹಿನ್ನೆಲೆಯಲ್ಲಿ ವಿವಿಧೆಡೆ ದೇವಸ್ಥಾನಗಳು, ಶಾಲೆ-ಕಾಲೇಜು, ಸಂಸ್ಥೆ, ಸಂಘಟನೆ ಹಾಗೂ ಕೆಲವು ಕಚೇರಿಗಳಲ್ಲಿಯೂ ಶ್ರೀರಾಮನ ಪೂಜೆ ಮಾಡಲಾಗಿದೆ. ಆದರೆ, ಕಳೆದ ತಿಂಗಳು ಡಿಸೆಂಬರ್ 25ರಿಂದ ಮೂರು ದಿನಗಳ ಕಾಲ ಕ್ರಿಸ್‌ಮಸ್ ಆಚರಣೆ ಮಾಡಲು ಹಾಗೂ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಅವಕಾಶ ಮಾಡಿಕೊಟ್ಟ ಬೆಂಗಳೂರಿನ ಬಸವನಗುಡಿ ಖಾಸಗಿ ಕಾಲೇಜಿನಲ್ಲಿ ಸಾವಿರಾರು ಹಿಂದೂ ವಿದ್ಯಾರ್ಥಿಗಳಿದ್ದರೂ ಶ್ರೀರಾಮನನ್ನು ಇಟ್ಟು ಪೂಜೆಮಾಡಲು ಬಿಡಲಿಲ್ಲ. ಇನ್ನು ಕೇಸರಿ ಶಾಲು ಧರಿಸಿಕೊಂಡು ಬಂದ ವಿದ್ಯಾರ್ಥಿಗಳನ್ನು ಗೇಟಿನಿಂದ ಹೊರಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧವೇ ಪ್ರತಿಭಟನೆ ಮಾಡಿದ್ದಾರೆ.

ಮಸೀದಿಯಲ್ಲಿ ಶ್ರೀರಾಮನನ್ನಿಟ್ಟು ಪೂಜಿಸಿದ ಮುಸ್ಲಿಮರು!

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಕಾಲೇಜಿನಲ್ಲಿ ಶ್ರೀರಾಮ ಪೋಟೋ ಇಟ್ಟು ಪೂಜೆ ಮಾಡುವುದಕ್ಕೆ  ಕಾಲೇಜು ಆಡಳಿತ ಮಂಡಳಿ ವಿರೋಧಿಸಿದೆ. ಇನ್ನು ಪೂಜೆ ಮಾಡಲು ಮುಂದಾದ ವಿದ್ಯಾರ್ಥಿಗಳನ್ನು ಕಾಲೇಜು ಗೇಟಿನಿಂದ ಹೊರಗಿಡಲಾಗಿತ್ತು. ಹೀಗಾಗಿ, ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ಗಂಟೆಗಳ ಕಾಲ ಕಾಲೇಜ್ ಒಳಗೆ ಬಿಡದೇ ಗೇಟ್ ಬಂದ್ ಮಾಡಲಾಗಿತ್ತು. ಸ್ವತಃ ಕಾಲೇಜಿನ ಪ್ರಿನ್ಸಿಪಾಲರೇ ಬಂದು ರಾಮನ ಪೋಟೋ ಹಿಡಿದು ಒಳಗೆ ಹೋಗಲು ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದರು.

ಬಾಬ್ರಿ ಮಸೀದಿ ಜಾಗಕ್ಕೆ ಹೋರಾಡಿದವರೆಲ್ಲಾ, ಇಂದಿನ ರಾಮ ಮಂದಿರಕ್ಕೆ ವಿರೋಧಿಸಿದ್ದಾರೆ: ಸಚಿವ ರಾಜಣ್ಣ

ಕಾಲೇಜ್ ಆಡಳಿತ ಮಂಡಳಿ ಸತತವಾಗಿ 3 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿದರೂ ಅವರು ಪ್ರತಿಭಟನೆ ಬಿಡದೇ ಕಾಲೇಜು ಗೇಟಿನ ಹೊರಭಾಗದಲ್ಲಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗುತ್ತಿದ್ದರು. ಇನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲವೆಂದಾಗ ವಿದ್ಯಾರ್ಥಿಗಳನ್ನು ಒಳಗೆ ಬಿಟ್ಟಿದ್ದಾರೆ. ನಂತರ, ಕೇಸರಿ ಶಾಲುಗಳನ್ನು ಧರಿಸಿ ಒಳಗೆ ಹೋದ ವಿದ್ಯಾರ್ಥಿಗಳು ಶ್ರೀರಾಮನ ಫೋಟೋವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಜೊತೆಗೆ, ಕ್ರಿಸ್ ಮಸ್ ಆಚರಣೆಗೆ 3 ದಿನ ಅವಕಾಶ ನೀಡಿದ್ದ ಕಾಲೇಜ್ ಆಡಳಿತ ಮಂಡಳಿ ಅರ್ಧ ದಿನ ರಾಮನ ಪೂಜೆಗೆ ಅಡ್ಡಿ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಕೆಂಡಾಮಂಡಲವಾಗಿದ್ದರು.

Follow Us:
Download App:
  • android
  • ios