ಬಾಬ್ರಿ ಮಸೀದಿ ಜಾಗಕ್ಕೆ ಹೋರಾಡಿದವರೆಲ್ಲಾ, ಇಂದಿನ ರಾಮ ಮಂದಿರಕ್ಕೆ ವಿರೋಧಿಸಿದ್ದಾರೆ: ಸಚಿವ ರಾಜಣ್ಣ
ಅಯೋಧ್ಯೆಯ ಬಾಬ್ರಿ ಮಸೀದಿ ಜಾಗಕ್ಕೆ ಯಾರೆಲ್ಲ ಹೋರಾಡಿದ್ದರೋ ಅವರೆಲ್ಲರೂ ಇಂದಿನ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ತುಮಕೂರು (ಜ.22): ನಾನು ಆಸ್ತಿಕನೆ, ನಾಸ್ತಿಕನಲ್ಲ. ಯಾರೆಲ್ಲಾ ಬಾಬ್ರಿ ಮಸೀದಿಯ ಜಾಗಕ್ಕಾಗಿ ಹೋರಾಟ ಮಾಡಿದ್ದರು ಅವರೆಲ್ಲಾ ಇಂದಿನ ಅಯೋಧ್ಯ ರಾಮಲಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ವಿರೋಧ ಮಾಡಿದ್ದಾರೆ. ವಿಶ್ವಹಿಂದೂ ಪರಿಷತ್ ನವರೂ ವಿರೋಧ ಮಾಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತೊಮ್ಮೆ ವಿವಾದಾತ್ಮಹ ಹೇಳಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಕಿತ್ತಗಳ್ಳಿ ಗ್ರಾಮದಲ್ಲಿನ ರಾಮ ಮಂದಿರದಲ್ಲಿ ಆಯೋಜನೆ ಮಾಡಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆಸ್ತಿಕನೆ ನಾಸ್ತಿಕನಲ್ಲ. ನಾನು ರಾಮನ ಪೂಜೆ ಮಾಡಬಹುದು ಇನ್ನೊಬ್ಬನನ್ನ ಪೂಜೆ ಮಾಡೋದು ಮತ್ತೊಂದು ವಿಚಾರವಾಗಿದೆ. ಇನ್ನು ಕಿತ್ತಗಳ್ಳಿ ರಾಮನ ದೇವಸ್ಥಾವನ್ನ ನಾನು 2004ರಲ್ಲಿ ಕಟ್ಟಿಸಿದ್ದೆ 30 ಲಕ್ಷ ಖರ್ಚು ಮಾಡಿ ದೇವಾಲಯ ಕಟ್ಟಿಸಿದ್ದನು. ಇವತ್ತಿನ ಲೆಕ್ಕದಲ್ಲಿ ಕೋಟಿಗಟ್ಟಲೆ ಬೆಲೆ ಹೇಳಿಕೊಳ್ಳಬಹುದು. ನಮಗೆ ರಾಮನ ಮೇಲೆ ಭಕ್ತಿ ಇಲ್ಲ, ನಾವು ರಾಮನ ವಿರೋಧಿಗಳು ಅಂತ ಹೇಳುವಂಥಾದ್ದು ಸರಿಯಲ್ಲ ಎಂದರು.
ಅಯೋಧ್ಯೆ ಶ್ರೀರಾಮನನ್ನು ನೋಡಿದರೆ, ಟೂರಿಂಗ್ ಟಾಕೀಸಿನಲ್ಲಿರೋ ಗೊಂಬೆ ಅನಿಸ್ತಿದೆ: ಸಚಿವ ಕೆ.ಎನ್. ರಾಜಣ್ಣ
ದೇವರ ವಿಚಾರದಲ್ಲಿ ಶಂಕರಾಚಾರ್ಯ ಗುರುಗಳು ಏನೇನು ಹೇಳಿದ್ದಾರೆ ಅದಕ್ಕೆ ನನ್ನ ಸಹಮತವಿದೆ. ಅದರಲ್ಲಿ ಎರಡನೇ ಮಾತಿಲ್ಲ. ಇನ್ನು ಯಾರೆಲ್ಲಾ ಬಾಬ್ರಿ ಮಸೀದಿಯ ಜಾಗಕ್ಕಾಗಿ ಹೋರಾಟ ಮಾಡಿದ್ದರು ಅವರೆಲ್ಲಾ ಇಂದಿನ ಕಾರ್ಯಕ್ರಮಕ್ಕೆ ವಿರೋಧ ಮಾಡಿದ್ದಾರೆ. ವಿಶ್ವಹಿಂದೂ ಪರಿಷತ್ ನವರೂ ವಿರೋಧ ಮಾಡಿದ್ದಾರೆ. ನಾನು ಕೂಡ ಅದನ್ನೇ ಹೇಳ್ತಿದ್ದೀನಿ. ಶಂಕರಾಚಾರ್ಯೆರಿಗೆ ಆಧ್ಯಾತ್ಮಿಕದ ಬಗ್ಗೆ ತಿಳುವಳಿಕೆ ಇಲ್ಲ ಅಂತ ಹೇಳೋಕಾಗುತ್ತಾ? ಅಥವ ವಿಶ್ವಹಿಂದೂಪರಿಷತ್ತಿನ ಮಂಗಳೂರಿನ ಶರ್ಮ, ಅವರೇ ಸುಪ್ರೀ ಕೋರ್ಟ್ ನಲ್ಲಿ ಕೇಸ್ ಹಾಕಿಕೊಂಡಿದ್ದವರು. ಅವರಿಗೂ ಒಂದೇಒಂದು ಆಹ್ವಾನವಿಲ್ಲ. ಇದೆಲ್ಲವನ್ನೂ ನಾವು ಯೋಚನೆ ಮಾಡಬೇಕಾಗುತ್ತದೆ. ಇವರು ರಾಜಕೀಯದ ರಾಮನ ಮಾಡೋಕೆ ಹೊರಟಿದ್ದಾರೆ, ನಿಜವಾದ ದಶರಥನ ಮಗ ರಾಮನನ್ನ ಮಾಡ್ಬೇಕು. ಮೋದಿ ರಾಮನ ಮಾಡೋದಲ್ಲ ಎಂದು ಕಿಡಿಕಾರಿದರು.
ಮಹಾತ್ಮ ಗಾಂಧಿಯವರಿಗೆ ಗೋಡ್ಸೆ ಗುಂಡು ಹೊಡೆದಾಗ ಅವರು ಹೆರಾಮ್ ಅಂತ ಹೇಳಿದರೇ ಹೊರತು ಮತ್ತೇನನ್ನೂ ಹೇಳಲಿಲ್ಲ. ಮಹಾತ್ಮಗಾಂಧಿ ಪೂಜಿಸುತ್ತಿದ್ದ ರಾಮ ಏನಿದಾನೆ ಅವನ ಭಕ್ತ ನಾನು. ಗೋಡ್ಸೆಯ ದೇವಸ್ಥಾನ ಕಟ್ಟಿ ಅವನನ್ನ ಪೂಜಿಸುತ್ತಾರೆ ಇವರೆಲ್ಲಾ ಗೂಡ್ಸೆ ಹಿಂದೂಗಳು. ದಶರಥ ರಾಮ ನಮ್ಮ ರಾಮ, ಗಾಂಧಿ ಹೇಳಿದ ರಾಮ ನಮ್ಮ ರಾಮನಾಗಿದ್ದಾನೆ. ದೇವಸ್ಥನ ಕಟ್ಟಿಸೋದು ಅವರವರ ಭಕ್ತಿಗನುಸಾರವಾಗಿ ಕಟ್ಟುವಂಥದ್ದಾಗಿದೆ. 1948ರಲ್ಲಿ ದೇವಾಯಕ್ಕೆ ಬೀಗ ಹಾಕಲಾಗಿತ್ತು. ಅದನ್ನು 1980 ರಲ್ಲಿ ರಾಜೀವ್ ಗಾಂಧಿ ಬೀಗ ತೆಗೆಸಿಕೊಟ್ಟರು. ರಾಮ ಸರ್ವಂತರ್ಯಾಮಿ ಸರ್ವವ್ಯಾಪಿ ಎಲ್ಲರಿಗೂ ಬೇಕಿರುವನು ಎಂದು ಹೇಳಿದರು.
ರಾಮಮಂದಿರದ ಮೇಲೆ ಇಸ್ಲಾಂ ಧರ್ಮದ ಧ್ವಜ ಹಾರಿಸಿದ ಕಿಡಿಗೇಡಿ ತಾಜುದ್ದೀನ್ ಬಂಧನ
ಹೆದರಿಕೆ ಎಂಬುದೆ ನನ್ನ ಡಿಕ್ಷನರಿಯಲ್ಲಿಲ್ಲ. ನಾನು ಹೇಳುವುದರಲ್ಲಿ ಯಾವುದೇ ಡ್ಯಾಮೇಜು ಇಲ್ಲ, ಕಂಟ್ರೋಲು ಇಲ್ಲ. ನಾನೇಳುವುದಕ್ಕೆ ಸದಾಕಾಲ ಬದ್ಧವಾಗಿರುತ್ತೇನೆ. ನಿಷ್ಕಳಂಕ, ನಿರ್ಮಲ ಮನಸ್ಸನಿಂದ ಪೂಜೆ ಮಾಡಿದ್ರೆ ಮಾತ್ರ ಅದು ನಿಜವಾದ ಪೂಜೆಯಾಗುತ್ತದೆ. ರಾಮರಾಜ್ಯದ ಕಲ್ಪನೆ ನಮ್ಮದು. ಒಂದು ಧರ್ಮ ಇನ್ನೊಂದು ಧರ್ಮವನ್ನ ದ್ವೇಷ ಮಡಬೇಕು ಅಂತ ಯಾವ ಧರ್ಮದಲ್ಲೂ ಇಲ್ಲ. ಜನಗಳಿಗೆಲ್ಲಾ ಒಳ್ಳೇದು ಮಾಡಲಿ, ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ. ನಮ್ಮ ಆತ್ಮ ನಿಷ್ಕಳಂಕ ಭಕ್ತಿಯಿಂದ ಮಾಡುತ್ತಿರುವ ಪೂಜೆ ಇದು. ನಮ್ಮ ಕರ್ನಾಟಕದ ಪಂಡಿತರು ಒಳ್ಳೆ ಸಮಯ ಫಿಕ್ಸ್ ಮಾಡಿದ್ರಿಂದ ಈಗ ಪೂಜೆ ಮಾಡುತ್ತಿದ್ದೇವೆ. ಅಯೋಧ್ಯಗೆ ನಾವ್ಯಾಕೆ ಹೋಗಬಾರದು, ನಾವೇನು ಅವರಿಗೆ ಜಾಗಿರಿ ಕೊಟ್ಟಿದ್ದೀವಾ ಎಂದು ಕಿಡಿಕಾರಿದರು.