ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಗಮ (ಬೆಸ್ಕಾಂ) ನಗರದ ಜನತೆಗೆ ಅಲರ್ಟ್‌ ನೀಡಿದ್ದು, ಈ ತಿಂಗಳ ಕರೆಂಟ್‌ ಬಿಲ್‌ಅನ್ನು ಯಾವುದೇ ಆಪ್‌ಗಳಿಂದ ಆನ್‌ಲೈನ್‌ನಲ್ಲಿ ಕಟ್ಟಬೇಡಿ ಎಂದು ಹೇಳಿದೆ. ತಾಂತ್ರಿಕ ತೊಂದರೆಯ ಕಾರಣದಿಂದಾಗಿ ಆನ್‌ಲೈನ್‌ ಬಿಲ್‌ ಪೇಮೆಂಟ್‌ ಸೇವೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಯವಾಗಲಿದೆ. 

ಬೆಂಗಳೂರು (ನ.10): ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಗಮ (ಬೆಸ್ಕಾಂ) ತನ್ನ ಗ್ರಾಹಕರಿಗೆ ಈ ತಿಂಗಳ ವಿದ್ಯುತ್‌ ಬಿಲ್‌ಗಳನ್ನು ತನ್ನ ಕೇಂದ್ರಗಳಿಗೆ ಬಂದು ಕಟ್ಟುವಂತೆ ಸೂಚನೆ ನೀಡಿದೆ. ಈ ತಿಂಗಳ ಬಿಲ್‌ಗಳನ್ನು ಯಾವುದೇ ಕಾರಣಕ್ಕೂ ಆನ್‌ಲೈನ್‌ನಲ್ಲಿ ಕಟ್ಟಬೇಡಿ ಎಂದು ಕಂಪನಿ ಹೇಳಿದೆ. ದೊಡ್ಡ ಮಟ್ಟದ ತಾಂತ್ರಿಕ ದೋಷ ಆನ್‌ಲೈನ್‌ ಪೇಮೆಂಟ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಬೆಸ್ಕಾಂ ಹೇಳಿದೆ. ಆನ್‌ಲೈನ್‌ ಬಿಲ್‌ನಲ್ಲಿ ನಮೂದಾಗಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಬಿಲ್‌ ಹಣವನ್ನು ಪಾವತಿ ಮಾಡುವಂತೆ ತೋರಿಸುತ್ತಿದೆ. ಆ ಕಾರಣಕ್ಕಾಗಿ ಆನ್‌ಲೈನ್‌ ಪೇಮೆಂಟ್‌ ಮಾಡಬೇಡಿ ಎಂದು ಹೇಳಿದೆ. ಈ ಕುರಿತಾಗಿ ಈಗಾಗಲೇ ಅನೇಕ ಗ್ರಾಹಕರು ಬೆಸ್ಕಾಂಗೆ ದೂರು ಕೂಡ ಸಲ್ಲಿಸಿದ್ದಾರೆ. ಇದರ ಪರೀಕ್ಷೆ ನಡೆಸಿದಾಗ ಆನ್‌ಲೈನ್‌ ಪೇಮೆಂಟ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ. ಅನೇಕ ಬೆಸ್ಕಾಂ ಗ್ರಾಹಕರು ತಮ್ಮ ನಿಜವಾದ ಬಿಲ್‌ಗಳಲ್ಲಿ ನಮೂದಿಸಲಾದ ಮೊತ್ತಕ್ಕಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚಿನ ಆನ್‌ಲೈನ್ ಬಿಲ್‌ಗಳನ್ನು ಸ್ವೀಕರಿಸಿದ್ದಾರೆ, ಇದು ನಾಗರಿಕರಲ್ಲಿ ಗೊಂದಲ ಮತ್ತು ಭೀತಿಯನ್ನು ಸೃಷ್ಟಿಸಿದೆ. ಬೆಸ್ಕಾಂ ಇ-ಪಾವತಿ ಸೇರಿದಂತೆ ಬಹು ಇ-ಪಾವತಿ ಪೋರ್ಟಲ್‌ಗಳಲ್ಲಿ ಮೊತ್ತದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನಗೆ ಬಂದಿರುವ ಮುದ್ರಿತ ಬೆಸ್ಕಾಂ ಬಿಲ್‌ನಲ್ಲಿ 1800 ರೂಪಾಯಿ ಮೊತ್ತವಿದೆ. ಎಂದಿನಂತೆ ನಾನು ಇದನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಪ್ರಯತ್ನ ಮಾಡಿದ್ದೆ. ಆದರೆ, ಯಾವುದೇ ಬಿಲ್‌ಗಳನ್ನು ಬಾಕಿ ಇರಿಸಿಕೊಳ್ಳದೇ ಇದ್ದರೂ, ನನ್ನ ಬಿಲ್‌ ಮೊತ್ತ 5400 ರೂಪಾಯಿ ಎಂದು ತೋರಿಸಿದೆ' ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ. ವಹಿವಾಟಿನ ಇತಿಹಾಸದಲ್ಲೂ ಯಾವುದೇ ದೋಷಗಳನ್ನು ತೋರಿಸುವುದಿಲ್ಲ. ನಾನು ನಿಜವಾದ ಮೊತ್ತವನ್ನು ನಮೂದಿಸಲು ಪ್ರಯತ್ನ ಮಾಡಿದೆ. ಆದರೆ, ನನಗೆ ಇದುನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಸಹಾಯಕ್ಕಾಗಿ ಬೆಸ್ಕಾಂ ಅನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಯಾರೂ ಲಭ್ಯವಿಲ್ಲ ಎಂದು ಬೆಂಗಳೂರಿನ ನಿವಾಸಿಯೊಬ್ಬರು ಹೇಳಿದ್ದಾರೆ.

ಬೆಸ್ಕಾಂ, ಚೆಸ್ಕಾಂ, FDI ಸೇರಿ ವಿವಿಧ ಹುದ್ದೆಗಳ ಡೀಲ್: ಲೇಡಿ PSI ಆಡಿಯೋ ರಿಲೀಸ್!

ಬೆಂಗಳೂರಿನ ಇನ್ನೊಬ್ಬ ಮಹಿಳೆಗೂ ಕೂಡ ಇದೇ ರೀತಿಯ ಸಮಸ್ತೆ ಎದುರಾಗಿದೆ. ಬೆಸ್ಕಾಂನ ಮುದ್ರಿತ ಬಿಲ್‌ಗಿಂತ ಆನ್‌ಲೈನ್‌ನಲ್ಲಿ ಹೆಚ್ಚಿನ ಮೊತ್ತವನ್ನು ತೋರಿಸುತ್ತಿದೆ ಎಂದು ದೂರಿದ್ದಾರೆ. ಆನ್‌ಲೈನ್‌ನಲ್ಲಿ ಮನೆಯ ಕರೆಂಟ್‌ ಬಿಲ್‌ 6 ಸಾವಿರ ತೋರಿಸುತ್ತಿದ್ದರೆ, ಮುದ್ರಿತ ಬಿಲ್‌ನಲ್ಲಿ ಬರೀ 1900 ರೂಪಾಯಿ ಪ್ರಿಂಟ್‌ ಆಗಿತ್ತು ಎಂದು ಹೇಳಿದ್ದಾರೆ.

ಇನ್ನೊಂದು ವರ್ಷದಲ್ಲಿ ಎಲ್ಲ ಫುಟ್ಪಾತ್‌ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ: ಬೆಸ್ಕಾಂ

ತಾಂತ್ರಿಕ ದೋಷವಿದೆ ಎಂದ ಬೆಸ್ಕಾಂ ಎಂಡಿ: ತಾಂತ್ರಿಕ ದೋಷವನ್ನು ಒಪ್ಪಿಕೊಂಡಿರುವ ಬೆಸ್ಕಾಂ ಎಂಡಿ ಮಹಾಂತೇಶ ಬಿಳಗಿ, ಈ ಬಗ್ಗೆ ಅನೇಕ ನಾಗರಿಕರಿಂದ ದೂರು ವರದಿಯಾಗುತ್ತಿದೆ. ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ದೋಷಗಳಾಗಿದೆ. ನವೆಂಬರ್ 1 ರಿಂದ ಇಂಥ ವರದಿಗಳು ಬಂದಿವೆ ಎಂದು ಅವರು ಹೇಳಿದ್ದಾರೆ. “ಇನ್ಫೋಸಿಸ್‌ನಿಂದ ಇನ್ಫೈನೈಟ್ ಸೊಲ್ಯೂಷನ್ಸ್‌ಗೆ ಕಾರ್ಯಾಚರಣೆಯ ಸೇವೆಗಳ ಬದಲಾವಣೆಯು ಸುಗಮ ಪ್ರಕ್ರಿಯೆಯಾಗಬೇಕಿತ್ತು, ಆದರೆ ನಾವು ಕೆಲವು ದೋಷಗಳನ್ನು ಈ ವೇಳೆ ಕಂಡುಕೊಂಡಿದ್ದೇವೆ. ಆದಷ್ಟು ಶೀಘ್ರ ಇದನ್ನು ಸರಿಪಡಿಸಲಿದ್ದೇವೆ.ಹೀಗಾಗಿ ನಾಗರಿಕರು ತಮ್ಮ ಬಿಲ್ ಮೊತ್ತದಲ್ಲಿ ದೋಷಗಳನ್ನು ಕಾಣುತ್ತಿದ್ದಾರೆ. ಹೆಚ್ಚುವರಿ ಶುಲ್ಕಗಳನ್ನು ಪಾವತಿಸದಂತೆ ಅವರನ್ನು ವಿನಂತಿಸಲಾಗಿದೆ. ನಿಜವಾದ ಮೊತ್ತವನ್ನು ನೋಡಿಕೊಂಡು ಬಿಲ್‌ಗಳನ್ನು ಬೆಸ್ಕಾಂ ಕೇಂದ್ರದಲ್ಲಿಯೇ ಕಟ್ಟಿ ಎಂದು ಹೇಳಲಾಗುತ್ತಿದೆ. ಹಲವರು ಆನ್‌ಲೈನ್‌ನಲ್ಲಿ ಪಾವತಿಸಲು ಸಾಧ್ಯವಾಗದ ಕಾರಣ, ಬಿಲ್‌ಗಳನ್ನು ಕೈಯಾರೆ ಬಂದು ಪಾವತಿಸುವುದು ಉತ್ತಮ ಆಯ್ಕೆಯಾಗಿದೆ. 1912ಕ್ಕೆ ಕರೆ ಮಾಡುವ ಮೂಲಕ ನಾಗರಿಕರು ದೂರು ನೀಡಬೇಕು, ”ಎಂದು ಅವರು ಹೇಳಿದ್ದಾರೆ.