ಬೆಸ್ಕಾಂ, ಚೆಸ್ಕಾಂ, FDI ಸೇರಿ ವಿವಿಧ ಹುದ್ದೆಗಳ ಡೀಲ್: ಲೇಡಿ PSI ಆಡಿಯೋ ರಿಲೀಸ್!
FDI ಪರೀಕ್ಷೆ ಸೇರಿದಂತೆ ಹಲವು ಹುದ್ದೆಗಳ ಡೀಲ್ ಸಂಭಾಷಣೆಯ ಸ್ಫೋಟಕ ಆಡಿಯೋ ಬಹಿರಂಗವಾಗಿದ್ದು, ಈ ಪ್ರಕರಣದ ಭಾರೀ ಸಂಚಲನ ಮೂಡಿಸಿದೆ.
ಮೈಸೂರು, (ಸೆಪ್ಟೆಂಬರ್.17): ಪಿಎಸ್ಐ, ಕೆಪಿಟಿಸಿಎಲ್ ಹಾಗೂ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಮೂರು ಹಗರಣಗಳ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ಜಾಬ್ಸ್ ನೇಮಕಾತಿ ಹಗರಣಗಳು ಹೆಚ್ಚಾಗುತ್ತಿದ್ದು, ರಾಜ್ಯ ಬಿಜೆಪಿ ಸರ್ಕಾರಕ್ಕೆ ದೊಡ್ಡ ಮುಜುಗರ ಉಂಟುಮಾಡಿದೆ. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಹಗರಣ ಬಯಲಿಗೆ ಬಿದ್ದಿದ್ದು, ಇದಕ್ಕೆ ಸಂಬಂಧಿದ ಸ್ಫೋಟ ಆಡಿಯೋ ಬಹಿರಂಗವಾಗಿದೆ.
ಹೌದು...FDI ಪರೀಕ್ಷೆ ಹಗರಣ ಕುರಿತು ಮೈಸೂರಿನ ಪೊಲೀಸ್ ಅಧಿಕಾರಿಯ ಸಂಭಾಷಣೆ ಆಡಿಯೋ ರಿಲೀಸ್ ಅಗಿದೆ. ಡೀಲ್ ನಲ್ಲಿ ಭಾಗಿಯಾಗಿದ್ದ ಮೈಸೂರಿನ PSI ಅಶ್ವಿನಿ ಅನಂತಪುರ ಆಡಿಯೋ ಇದಾಗಿದೆ.
KPTCL Recruitment Scam: ಮತ್ತೆ ಮೂವರ ಬಂಧನ, ಒಬ್ಬೊಬ್ರುದು ಒಂದೊಂದು ಕೈಚಳಕ
FDI ಪರೀಕ್ಷೆ ವಿಚಾರವಾಗಿ ಲಂಚದ ಬೇಡಿಕೆ ಇಟ್ಟಿರುವ 30 ನಿಮಿಷಗಳ ಆಡಿಯೋ ಕ್ಲಿಪಿಂಗ್ ಅನ್ನು ಇಂದು(ಶನಿವಾರ)ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರು ಬಿಡುಗಡೆ ಮಾಡಿದ್ದು, ಸಂಗಮೇಶ ಜಲಕಿ ಎಂಬ ಅಭ್ಯರ್ಥಿಯ ಜೊತೆ ಮೈಸೂರಿನ ಎನ್ ಆರ್ ಠಾಣೆಯಲ್ಲಿPSI ಅಶ್ವಿನಿ ಮಾತನಾಡಿರುವುದು ಆಡಿಯೋದಲ್ಲಿದೆ.
ಆಡಿಯೋ ಬಿಡುಗಡೆ ಮಾಡಿ ಮಾತನಾಡಿರುವ ಎಂ ಲಕ್ಷ್ಮಣ್, ಅಶ್ವಿನಿ ಮೂಲತಃ ಭಾಗಲಕೋಟೆಯ ಜಮಖಂಡಿಯವರು. PIS ಹಗರಣಕ್ಕೆ ಸಂಬಂಧಪಟ್ಟ ಡೀಲ್ ಕುದುರಿಸುತ್ತಾರೆ. ಬೆಸ್ಕಾಂ, ಚೆಸ್ಕಾಂ, ಎಫ್ ಡಿ ಐ ವಿವಿಧ ಹುದ್ದೆಗಳಲ್ಲಿ ಡೀಲ್ ಮಾಡುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಇಂತವರು ಇದ್ದಾರೆ ಎನ್ನುವ ಮಾಹಿತಿ ಇದೆ ಎಂದು ಸ್ಫೋಟಕ ಆರೋಪವನ್ನು ಮಾಡಿದರು.
ಅಶ್ವಿನಿ ಎಂಬುವವರು ವ್ಯವಹಾರ ಕುದುರಿಸಿದ್ದು,20ಲಕ್ಷ ಡಿಮ್ಯಾಂಡ್ ಮಾಡಿದ್ದಾರೆ. ಹತ್ತು ಬಾರಿ ಹಣ ವರ್ಗಾವಣೆಯಾಗಿದೆ.ಬೆಸ್ಕಾಂ ಹುದ್ದೆಯ ಡೀಲ್ ಬಗ್ಗೆಯೂ ಸಂಭಾಷಣೆಯಲ್ಲಿ ಮಾತನಾಡಿದ್ದಾರೆ. ಸರ್ಕಾರದ ಬೆಂಬಲ ವಿಲ್ಲದೆ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ.ಇದರ ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಆಗ್ರಹಿಸಿದರು.
ಆಡಿಯೋ ನಲ್ಲಿ ಯಾರಿಗೆ ದುಡ್ಡು ವರ್ಗಾವಣೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. PSI ಹಗರಣದ ಬಗ್ಗೆಯೂ ಮಾತನಾಡಿದ್ದಾರೆ. ಬಿಜೆಪಿ ಮಂತ್ರಿಗಳು ಈ ಹಗರಣದ ಹಿಂದೆ ಇದ್ದಾರೆ. ಬಿಜೆಪಿ ನಾಯಕರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದರು.