Asianet Suvarna News Asianet Suvarna News

ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ಇದೆಯಂತೆ ವಾಸ್ತುದೋಷ!

ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ಗ್ರಹಚಾರವೇ ಸರಿಯಿಲ್ಲ ಎನ್ನುವ ಚರ್ಚೆಯೊಂದು ಐಎಎಸ್ ವಲಯದಲ್ಲಿ ಕೇಳಿಬರುತ್ತಿದೆ.   ಈ ಹಿಂದೆ ರಾಜಧಾನಿಯ ಪ್ರತಿಷ್ಠಿತ  ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದವರ ವಿಚಿತ್ರ ಘಟನೆಗಳಿಂದ  ಈ ಅನುಮಾನಕ್ಕೆ‌ಕಾರಣವಾಗಿದೆ.‌ 

Bangalore City District Collector post is  Vastu Dosha rav
Author
First Published Dec 6, 2022, 10:57 AM IST

ವರದಿ - ರಕ್ಷಾ ಕಟ್ಟೆಬೆಳಗುಳಿ 

ಬೆಂಗಳೂರು (ಡಿ.6) : ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ಗ್ರಹಚಾರವೇ ಸರಿಯಿಲ್ಲ ಎನ್ನುವ ಚರ್ಚೆಯೊಂದು ಐಎಎಸ್ ವಲಯದಲ್ಲಿ ಕೇಳಿಬರುತ್ತಿದೆ.   ಈ ಹಿಂದೆ ರಾಜಧಾನಿಯ ಪ್ರತಿಷ್ಠಿತ  ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದವರ ವಿಚಿತ್ರ ಘಟನೆಗಳಿಂದ  ಈ ಅನುಮಾನಕ್ಕೆ‌ಕಾರಣವಾಗಿದೆ.‌ 

ನಗರದ ಜಿಲ್ಲಾಧಿಕಾರಿ ಕಚೇರಿಗೆ ನಿಜಕ್ಕೂ ವಾಸ್ತುದೋಷ ಇದೆಯೇ, ವಾಸ್ತುದೋಷದ ಕಾರಣದಿಂದಲೇ ಐಎಎಸ್ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆಯೇ? ಹೌದು ಎಂತಿದ್ದಾರೆ ಕೆಲವು ಅಧಿಕಾರಿಗಳು. ಅದಕ್ಕೆ ಇಂಬು ಕೊಡುವಂತೆ ಕೆಲವು ಘಟನೆ ಉದಾಹರಣೆ ಕೊಡುತ್ತಾರೆ.

ಜಿಲ್ಲಾಧಿಕಾರಿ ಹುದ್ದೆಗೆ ಕುಳಿತವರೆಲ್ಲ ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿ ಅಮಾನತ್ತು ಆಗುತ್ತಿರುವುದೇ ಚರ್ಚೆಗೆ ಕಾರಣವಾಗಿದೆ. ಬ್ಯಾಕ್ ಟು ಬ್ಯಾಕ್ ಅಕ್ರಮದಲ್ಲಿ ತಗ್ಲಾಕೊಂಡು ಸೆಸ್ಪೆಂಡ್, ಜೈಲು ಪಾಲಾಗ್ತಿದ್ದಾರೆ. ಇದಕ್ಕೆಲ್ಲ ವಾಸ್ತುದೋಷವೇ ಕಾರಣ ಎಂದು  ಅನುಮಾನ ವ್ಯಕ್ತಪಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ.

ವಾಸ್ತು ದೋಷ ನಿವಾರಣೆಗೆ ವಿಘ್ನನಿವಾರಕನ ಸರಳ ಪರಿಹಾರ!

 ಸಾಮಾಜಿಕ ಕಾರ್ಯಕರ್ತರ ಸಾಯಿ ದತ್ತ ಅವರು, 'ಡಿಸಿ ಕಚೇರಿ ವಾಸ್ತುದೋಷ ನಿವಾರಣೆಗೆ ಕಚೇರಿಯಲ್ಲಿ ಸಂಬಂಧಪಟ್ಟ ಪೂಜೆ ನೆರವಿಸಬೇಕೆಂದು' ಕಂದಾಯ ಸಚಿವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ. 

ನಗರದ ಡಿಸಿಯಾದವರು ಆತ್ಮಹತ್ಯೆ, ಅಮಾನತು, ಜೈಲು ಪಾಲಾಗೋದಕ್ಕೆ ವಾಸ್ತುದೋಷವೆ ಕಾರಣ ಆಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಾಯಿ ದತ್ತ, 2013ರಲ್ಲಿ ಎಂ.ಕೆ‌. ಅಯ್ಯಪ್ಪ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗಿನಿಂದ ಶುರುವಾದ ಈ ಕಳಂಕ ಪರ್ವ ಈಗಲೂ ಮುಂದುವರಿದಿದ್ದು ನಗರ ಜಿಲ್ಲಾಧಿಕಾರಿ ಹುದ್ದೆಗೆ ಬರುವವರಿಗೆ ಈ ಆತಂಕ ಮುಂದುವರಿದಿದೆ. ಡಿಸಿ ಕಚೇರಿಯ ಮುಂಭಾಗದಲ್ಲಿ ಕಂದಾಯ ಇಲಾಖೆ ನಿರ್ಮಾಣವಾದ ನಂತರ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ ಐಎಎಸ್ ಅಧಿಕಾರಿಗಳು  ಸಾಲು ಸಾಲು ಅಕ್ರಮಗಳ ಕಳಂಕ ಎದುರಿಸುತ್ತಿದ್ದಾರೆ. ಹೀಗಾಗಿ ಇಲ್ಲಿಗೆ ಜಿಲ್ಲಾಧಿಕಾರಿ ಹುದ್ದೆ ಸ್ವೀಕರಿಸುವುದಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಡಿಸಿ ಕಚೇರಿ ವಾಸ್ತುದೋಷ- ಕಂಟಕಕ್ಕೆ ಸಿಲುಕಿದವರ ಪಟ್ಟ!

  •  ಮತದಾರರ ಮಾಹಿತಿ ಕಳವು ಆರೋಪದಲ್ಲಿ  ಬೆಂಗಳೂರು ನಗರ  ಡಿಸಿ ಆಗಿದ್ದ  ಶ್ರೀನಿವಾಸ್ ಇತ್ತೀಚೆಗೆ ಅಮಾನತ್ತು.
  • 2020ರಲ್ಲಿ ಐಎಂಎ ಪ್ರಕರಣದಲ್ಲಿ ಆರೋಪಿಯಾಗಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ.
  •  (ಐಎಂಎ ಮಾಲೀಕನಿಂದ 1.5 ಕೋಟಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ವಿಜಯ್ ಶಂಕರ್ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗಲೇ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಆರೋಪದ ಖಿನ್ನತೆಯಿಂದಲೇ ಸಾವಿನ ಶಂಕೆಯಿದ್ದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು).
  • ಲಂಚ ಸ್ವೀಕಾರದ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಬಂಧನ. (ಮಂಜುನಾಥ್ ಜಮೀನು ವ್ಯಾಜ್ಯದ ವಿಷಯದಲ್ಲಿ 5 ಲಕ್ಷ ಲಂಚಕ್ಕಾಗಿ ಬೇಡಿಕೆ ಇಟ್ಟಿದ ಆರೋಪ ಹಿನ್ನೆಲೆಯಲ್ಲಿ ಎಸಿಬಿ ದಾಳಿ ಬಳಿಕ ಜೈಲು ಪಾಲಾಗಿದ್ದರು)
  •  ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಎಂ.ಕೆ ಅಯ್ಯಪ್ಪ ಸಹ ಅಮಾನತು.. (2013 ರಲ್ಲಿ ನಕಲಿ ದಾಖಲೆಗಳ ಆಧಾರದಡಿ ಸರ್ಕಾರಿ ಭೂಮಿಯನ್ನ ವ್ಯಕ್ತಿಯೊಬ್ಬರಿಗೆ ಮಂಜೂರು ಮಾಡಿದ್ದ ಆರೋಪ  ಪ್ರಕರಣದಲ್ಲಿ  2013 ರ ಮಾರ್ಚ್ 16 ರಂದು ಬಂಧನಕ್ಕೊಳಗಾಗಿದ್ದ ಅಯ್ಯಪ್ಪ.

ಇವೆಲ್ಲ ಘಟನೆಗಳಿಂದ ಅನುಮಾನಗೊಂಡು ನಗರ ಜಿಲ್ಲಾಧಿಕಾರಿ ಹುದ್ದೆಗೆ ವಾಸ್ತುದೋಷವೇ ಕಾರಣ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಪತ್ರ ಬರೆದಿದ್ದಾರೆ. ಕಂದಾಯ ಸಚಿವರಿಗೆ ಪತ್ರ ಬರೆದು, ಸಾರ್ವಜನಿಕರ ಭಾವನೆಗೆ ಸ್ಪಂದಿಸಿ ಜಿಲ್ಲಾಧಿಕಾರಿಗಳ ಕಚೇರಿ ವಾಸ್ತುದೋಷ ನಿವಾರಣೆಗೆ ಮನವಿ ಮಾಡಿಕೊಂಡಿದ್ದಾರೆ.

ಕಂದಾಯ ಸಚಿವರು ಇದನ್ನೆಲ್ಲ ನಂಬುತ್ತಾರಾ? ನಂಬಿ ವಾಸ್ತು ದೋಷ ನಿವಾರಣೆಗೆ ಜಿಲ್ಲಾಧಿಕಾರಿ ಕಚೇರಿಗೆ ವಿಶೇಷ ಪೂಜೆ ಮಾಡಿಸುತ್ತಾರಾ? ಕಾದು ನೋಡಬೇಕು.

Follow Us:
Download App:
  • android
  • ios