Asianet Suvarna News Asianet Suvarna News

ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧ; ಟೌನ್‌ಹಾಲ್‌ಗೆ ಸೀಮಿತವಾದ ಮಹಿಷಾ ದಸರಾ

ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ ಹಿನ್ನೆಲೆ ಮೈಸೂರು ಟೌನ್‌ಹಾಲ್‌ಗೆ ಸೀಮಿತವಾಗಿ ಮಹಿಷಾ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ.

Ban on entry to chamundibetta; Mahisha dasara celebs in front of Town Hall rav
Author
First Published Oct 13, 2023, 9:22 AM IST

ಮೈಸೂರು (ಅ.13) : ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ ಹಿನ್ನೆಲೆ ಮೈಸೂರು ಟೌನ್‌ಹಾಲ್‌ಗೆ ಸೀಮಿತವಾಗಿ ಮಹಿಷಾ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ.

ನಗರದ ಪುರಭವನ ಆವರಣದಲ್ಲಿ ಇಂದು (ಅ.13) ಮಹಿಷಾ ದಸರಾ ಆಚರಣೆಗೆ ಮಾಡಲಾಗುತ್ತಿದ್ದು, ಮಹಿಷಾ ದಸರಾ ಆಚರಣೆ ಸಮಿತಿ ಟೌನ್‌ಹಾಲ್ ಮುಂಭಾಗ ವೇದಿಕೆ ನಿರ್ಮಿಸಿ ಮಹಿಷಾಸುರ ಅವರಿಗೆ ಪುಷ್ಪಾರ್ಚನೆ ಹಾಗೂ ದಮ್ಮ ದೀಕ್ಷಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ವೇದಿಕೆ ಮೇಲೆ ಮಹಿಷಾಸುರ ಪ್ರತಿಮೆ ಜೊತೆಗೆ ಬುದ್ಧ ಅಂಬೇಡ್ಕರ್ ಪ್ರತಿಮೆ ಇರಿಸಿರುವ ಸದಸ್ಯರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮಹಿಷ ಉತ್ಸವ ಮತ್ತು ಧಮ್ಮ ದೀಕ್ಷಾ ಆಚರಣೆ. ಆದರೆ ಮೈಸೂರು ನಗರ ಪೊಲೀಸ್ ಆಯುಕ್ತರು ಕೆಲವು ಷರತ್ತು ವಿಧಿಸಿರುವ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಟೌನ್ ಹಾಲ್ ಮುಂಭಾಗ ಸಾಮಿಯಾನ ಹಾಕಿ ಕಾರ್ಯಕ್ರಮಕ್ಕೆ ಬರುವವರಿಗೆ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಟೌನ್‌ಹಾಲ್ ಆವರಣದಲ್ಲಿ 200ಕ್ಕೂ ಹಚ್ಚು ಪೊಲೀಸರ ನಿಯೋಜಿಸಲಾಗಿದೆ.

ಮೈಸೂರಲ್ಲಿ ಮಹಿಷಾ ದಸರಾಗೆ ಸರ್ಕಾರ ಅನುಮತಿ: ಶಾಸಕ ಶ್ರೀವತ್ಸ ಏನು ಹೇಳಿದ್ರು? 

ಇನ್ನು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆ ಬೆಟ್ಟಕ್ಕೆ ಸಂಪರ್ಕಿಸುವ ಎಲ್ಲ ಮಾರ್ಗಗಳು ಬಂದ್ ಮಾಡಲಾಗಿದ್ದು, ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಮೆಟ್ಟಿಲುಗಳ ಮೂಲಕ ನಡೆದುಕೊಂಡು ಬೆಟ್ಟ ಹತ್ತುವ ಮಾರ್ಗವೂ ಬಂದ್ ಮಾಡಲಾಗಿದೆ. ಸುತ್ತೂರು ಮಠದ ಬಳಿಯ ಚಾಮುಂಡಿ ಪಾದದ ಬಳಿ ಪೊಲೀಸರ ನಿಯೋಜನೆ. ಇದೇ ಮಾರ್ಗದಲ್ಲಿ ಪ್ಲಾನ್ ಆಗಿದ್ದ ಬಿಜೆಪಿ ಚಾಮುಂಡಿ ಬೆಟ್ಟ ಚಲೋ.  ಚಾಮುಂಡಿ ಬೆಟ್ಟ ಚಲೋ ರದ್ದಾಗಿದ್ರೂ ಮುಂಜಾಗೃತ ಕ್ರಮವಾಗಿ 100ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ.

ಮಹಿಷಾ ದಸರಾಗೆ ಸರ್ಕಾರ ಅನುಮತಿ: ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಏನು ಹೇಳಿದ್ರು?

ತಲತಲಾಂತರಿಂದ ಈ ದಿನ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತ ಬಂದಿದ್ದ ಭಕ್ತರಿಗೆ ಈ ಬಾರಿ ನಿರಾಶೆಯಾಗಿದೆ. ಚಾಮುಂಡಿ ಬೆಟ್ಟಕ್ಕೆ ಪ್ರವೇಶಿಸುವ ಎಲ್ಲ ಮಾರ್ಗಗಳು ಬಂದ್ ಆಗಿರುವ ಹಿನ್ನೆಲೆ ದರ್ಶನ ಸಿಗದೇ ಬೇಸರದಿಂದ ವಾಪಾಸ್ ಆಗುತ್ತಿರುವ ಭಕ್ತರು. ಬೆಟ್ಟದ ಪಾದದ ಬಳಿಯೇ ಕೈ ಮುಗಿದು ವಾಪಾಸ್ ಆಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಇನ್ನು ನಿರ್ಬಂಧದ ಮಾಹಿತಿ ಇಲ್ಲದೆ ಚಾಮುಂಡಿ ದರ್ಶನಕ್ಕೆ ಹೊರಜಿಲ್ಲೆಗಳಿಂದ ಬಂದಿರುವ ಭಕ್ತರಿಗೂ ನಿರಾಶೆಯಾಗಿದ್ದು, ಎರಡು ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿ ಭಕ್ತರಿಗೆ ಅವಕಾಶ ಕೊಡಬೇಕಿತ್ತು. ಭಕ್ತರನ್ನು ತಡೆದಿರುವುದು ಬೇಸರ ತಂದಿದೆ. ಪ್ರತಿವಾರವೂ ದರ್ಶನಕ್ಕೆ ಬರುತ್ತಿದ್ದೆವು. ಇವತ್ತು ತಾಯಿಯ ದರ್ಶನ ಮಾಡುವ ಅವಕಾಶ ಕಿತ್ತುಕೊಂಡಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು. 

Follow Us:
Download App:
  • android
  • ios