ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಕಾರಿನಲ್ಲಿ ಮದುವೆಯಾದ ಪ್ರೇಮಿಗಳು: ವಿರೋಧ ವ್ಯಕ್ತಪಡಿಸಿದ್ದ ಪೋಷಕರು!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಪೇಮಿಗಳು ಕಾರಿನಲ್ಲಿ ಮದುವೆಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೌದು! ಕಿರಾತಕ ಸಿನಿಮಾ ಸ್ಟೈಲ್‌ನಲ್ಲಿ ಪ್ರೇಮಿಗಳು ಕಾರಿಯಲ್ಲಿ ಹಾರ ಬದಲಿಸಿ ಮದ್ವೆಯಾಗಿದ್ದಾರೆ.
![ballari lovers married in a car at kirataka movie style gvd ballari lovers married in a car at kirataka movie style gvd](https://static-gi.asianetnews.com/images/01hk6wgpt1b1w88x3hw80mte79/bfbvdv_363x203xt.jpg)
ಬಳ್ಳಾರಿ (ಜ.03): ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಪೇಮಿಗಳು ಕಾರಿನಲ್ಲಿ ಮದುವೆಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೌದು! ಕಿರಾತಕ ಸಿನಿಮಾ ಸ್ಟೈಲ್‌ನಲ್ಲಿ ಪ್ರೇಮಿಗಳು ಕಾರಿಯಲ್ಲಿ ಹಾರ ಬದಲಿಸಿ ಮದ್ವೆಯಾಗಿದ್ದಾರೆ. ಶಿವಪ್ರಸಾದ್ ಹಾಗೂ ಅಮೃತಾ ಪ್ರೇಮ ವಿವಾಹದ ಜೋಡಿ. ಯುವತಿ ಪೋಷಕರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಿಪಡಿದ್ದರು. ಇಬ್ಬರು ಬೇರೆ ಬೇರೆ ಜಾತಿಯವರಾದ್ದರಿಂದ ಪೋಷಕರು ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಕೊಪ್ಪಳ ಮೂಲದ ಯುವತಿ ಅಮೃತಾ ಹಾಗೂ ಬಳ್ಳಾರಿಯ ತೆಕ್ಕಲಕೋಟೆಯ ಯುವಕ ಶಿವಪ್ರಸಾದ್ ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಹುಡುಗಿ ಮೇಲಿನ ಜಾತಿ, ಹುಡುಗ ಕೆಳ ಜಾತಿ ಹಿನ್ನಲೆ ಪ್ರೇಮ ವಿವಾಹಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಯುವತಿ ಅಮೃತಾ ಒಂದು ಬಾರಿ ಪೋಷಕರು ಬೇಕೆಂದು, ಮತ್ತೊಂದು ಬಾರಿ ಪ್ರೇಮಿಬೇಕೆಂದು ದ್ವಂದ್ವ ಹೇಳಿಕೆ ನೀಡಿದ್ದಾಳೆ. ಅಮೃತಾ ದ್ವಂದ್ವ ಹೇಳಿಕೆ ಹಿನ್ನಲೆ ಶಾಂತಿಧಾಮ ಮುಂದೆ ಯುವತಿ ಹಾಗೂ ಪ್ರೇಮಿಯ ನಡುವೆ ಹೈಡ್ರಾಮವೇ ನಡೆದಿದೆ.
ಲೋಕಸಭಾ ಸೀಟು ಹಂಚಿಕೆ ಚರ್ಚೆಗೆ ಎಚ್.ಡಿ.ಕುಮಾರಸ್ವಾಮಿ ಶೀಘ್ರ ದಿಲ್ಲಿಗೆ
ಸಿನಿಮೀಯ ರೀತಿಯಲ್ಲಿ ಯುವತಿಯನ್ನ ಯುವಕ ಎಳೆದೊಯ್ಯಲು ಯತ್ನಿಸಿದ್ದರಿಂದ ಕೆಲಕಾಲ ಸಾಂತ್ವನ ಕೇಂದ್ರದ ಮುಂದೆ ಗೊಂದಲ ವಾತಾವರಣ ಉಂಟಾಗಿತ್ತು. ಜೊತೆಗೆ ಇಬ್ಬರೂ ಪೋಷಕರ ನಡುವೆ ಗಲಾಟೆ ಕೂಡ ನಡೆದಿದೆ. ಬಲವಂತವಾಗಿ ಅಮೃತಾಳನ್ನು ಪೋಷಕರು ಕಾರಿನಲ್ಲಿ ಕರೆದೊಯ್ಯುತ್ತಿದ್ದಂತೆ ಅಮೃತಾ 'ಗಂಡ ಬೇಕು' ಅಂತಾ ಕಿರುಚಾಡಿದ್ದಾಳೆ. ಈ ವೇಳೆ ಪ್ರೇಮಿ ಕಾರು ಅಡ್ಡಗಟ್ಟಿ ಪ್ರೇಯಸಿಗಾಗಿ ಪೋಷಕರ ಮುಂದೆ ಗೋಗರೆದಿದ್ದಾನೆ. ಇದೆಲ್ಲವೂ ಪೊಲೀಸರ ಮುಂದೆಯೇ ನಡೆದಿದೆ. ಶಿವಪ್ರಸಾದ್ ಹೆಂಡ್ತಿನೂ ಬೇಕು, ರಕ್ಷಣೆನೂ ಬೇಕು ಇಡೀ ರಾತ್ರಿ ಸಾಂತ್ವನ ಕೇಂದ್ರ ಮುಂದೆ ಕುಳಿತು ಪಟ್ಟು ಹಿಡಿದಿದ್ದರಿಂದ ಅಮೃತಾ ಘೋಷಕರು ಆಕೆಯನ್ನು ಸಾಂತ್ವನ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಾರೆ.