ಬೆಂಗಳೂರು(ಜೂ.26): ಲಿವರ್‌ ಕಸಿ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ಪ್ರಮುಖ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಗಲಕೋಟೆ ಮೂಲದ ವೈದ್ಯರೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೆಲ ವರ್ಷಗಳಿಂದ ಲಿವರ್‌ ವೈಫಲ್ಯದಿಂದ ಬಳಲುತ್ತಿದ್ದ 30 ವರ್ಷದ ಈ ವೈದ್ಯಗೆ ಗುರುವಾರ ನಗರದ ಬನ್ನೇರುಘಟ್ಟದ ಫೋರ್ಟೀಸ್‌ ಆಸ್ಪತ್ರೆಯಲ್ಲಿ ಲಿವರ್‌ ಕಸಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದರು. ಅವರಿಗೆ ಒಂದೆರಡು ದಿನದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಬೇಕಿತ್ತು. ಆದರೆ, ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ವೈದ್ಯರು ಅವರಿಗೆ ಕೊರೋನಾ ಪರೀಕ್ಷೆ ನಡೆಸಿದ್ದರು. ಗುರುವಾರ ವರದಿ ಬಂದಿದ್ದು ಪಾಸಿಟಿವ್‌ ಎಂದು ದೃಢಪಟ್ಟಿದೆ. ಈ ಮಧ್ಯೆ ಅವರು ವರದಿ ಬರುವ ಮೊದಲೇ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಬೆಂಗಳೂರು ನಗರ ವಿಭಾಗದ ಅಧಿಕಾರಿ ಮೂಲಗಳು ಖಚಿತಪಡಿಸಿವೆ.

ಬೇರೆಯವರ ನೆಗೆಟಿವ್ ರಿಪೋರ್ಟ್ ಕೊಟ್ಟು ಮನೆಗೆ ಕಳಿಸಿದ ವಿಕ್ಟೋರಿಯಾ, ಎಲ್ಲೆಲ್ಲಿ ತಿರುಗಾಡಿದ್ದಾರೆ!

ಇನ್ನು, ಈ ವೈದ್ಯರ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಶುಕ್ರವಾರ ತನ್ನ ಕೋವಿಡ್‌ ಬುಲಿಟಿನ್‌ನಲ್ಲಿ ಅಧಿಕೃತ ಮಾಹಿತಿ ಪ್ರಕಟಿಸುವ ಸಾಧ್ಯತೆ ಇದೆ.