Asianet Suvarna News Asianet Suvarna News

ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ, ಕರಾವಳಿಯ ಕೋಗಿಲೆ ಎಂದೇ ಖ್ಯಾತಿ ಪಡೆದಿದ್ದ ಸುಬ್ರಹ್ಮಣ್ಯ ಧಾರೇಶ್ವರ(67)  ಇಂದು(ಏ.25) ನಸುಕಿನ ಜಾವ ಬೆಂಗಳೂರಿನ ಪುತ್ರನ ಮನೆಯಲ್ಲಿ ನಿಧನ ಹೊಂದಿದರು.

Badagutittu yakshagana bhagavat subrahmanya Dhareshwar passed away at bengaluru rav
Author
First Published Apr 25, 2024, 10:29 AM IST | Last Updated Apr 25, 2024, 10:50 AM IST

ಉಡುಪಿ (ಏ.25): ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ, ಕರಾವಳಿಯ ಕೋಗಿಲೆ ಎಂದೇ ಖ್ಯಾತಿ ಪಡೆದಿದ್ದ ಸುಬ್ರಹ್ಮಣ್ಯ ಧಾರೇಶ್ವರ(67)  ಇಂದು(ಏ.25) ನಸುಕಿನ ಜಾವ ಬೆಂಗಳೂರಿನ ಪುತ್ರನ ಮನೆಯಲ್ಲಿ ನಿಧನ ಹೊಂದಿದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಧಾರೇಶ್ವರ, ಇಂದು ಮುಂಜಾನೆ 4.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ, ಪುತ್ರಿಯನ್ನು ಆಗಲಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸುಬ್ರಹ್ಮಣ್ಯ ಧಾರೇಶ್ವರರು,. ಹೊಸ ಪ್ರಸಂಗಗಳನ್ನು ನಿರ್ದೇಶಿಸುವ ಮೂಲಕ ರಂಗ ಮಾಂತ್ರಿಕ ಹೆಸರು ಪಡೆದಿದ್ದರು. ಯಕ್ಷಗಾನ ರಂಗ ತಜ್ಞ ಭಾಗವತರೆನಿಸಿದ್ದ ಅವರು ಸುಮಾರು 47 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು.

ಕೇದಾರದಲ್ಲಿದ್ದ ಬೆಳಗಾವಿ ಮೂಲದ ಪಂಡಿತ ಮೃತ್ಯುಂಜಯ ಲಿಂಗೈಕ್ಯ 

ಸುಬ್ರಹ್ಮಣ್ಯ ಧಾರೇಶ್ವರದು ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆ. ತಮ್ಮ ಮಧುರ, ವಿಶಿಷ್ಟ ಕಂಠದಿಂದ ಯಕ್ಷಗಾನ ಅಭಿಮಾನಿಗಳಿಗೆ ಮೋಡಿ ಮಾಡಿದ್ದರು. ಕರಾವಳಿಯ ಮನೆಮನೆಗಳಲ್ಲಿ ಅವರ ಹಾಡುಗಳು ಕೇಳಿಬರುತ್ತವೆ. ಪೆರ್ಡೂರ್ ಮೇಳದಲ್ಲಿ 28 ವರ್ಷಗಳ ಕಾಲ ಭಾಗವತರಾಗಿದ್ದರು. ಅದಕ್ಕೂ ಮೊದಲು ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಶಿರಸಿ ಮೇಳದಲ್ಲೂ ಭಾಗವತರಾಗಿ ಸೇವೆ ಸಲ್ಲಿಸಿದ್ದರು.

ಯಕ್ಷಗಾನದಲ್ಲಿ ಸಾಂಪ್ರಾದಾಯಿಕ ರಾಗಗಳ ಜೊತೆಗೆ ಹೊಸ ರಾಗಗಳ ಪ್ರಯೋಗದಲ್ಲಿಯೂ ಯಶಸ್ವಿಯಾಗಿದ್ದರು. ಸುಮಾರು 400ಕ್ಕೂ ಅಧಿಕಾರ ಕ್ಯಾಸೆಟ್‌ಗಳಿಗೆ ಧ್ವನಿಯಾಗಿದ್ದಾರೆ. ಯುಟ್ಯೂಬ್ ಚಾನೆಲ್‌ಗಳಲ್ಲೂ ಅವರ ಹಾಡುಗಳನ್ನು ಆಲಿಸಬಹುದಾಗಿದೆ.  ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ. 

ಅಂತ್ಯಕ್ರಿಯೆ:  ಗುರುವಾರ ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಿರಿಮಂಜೇಶ್ವರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 ಸಂತಾಪ ಸೂಚಿಸಿದ ಸಿಎಂ

Latest Videos
Follow Us:
Download App:
  • android
  • ios