Asianet Suvarna News Asianet Suvarna News

2A Reservation: ಪಂಚಮಸಾಲಿ 2ಎ ಮೀಸಲಿಗೆ ಹಿಂದುಳಿದ ವರ್ಗದ ವಿರೋಧ

*  ಅತಿ ಹಿಂದುಳಿದ ವರ್ಗಗಳ ವೇದಿಕೆಯಿಂದ ಜಯಪ್ರಕಾಶ ಹೆಗ್ಡೆ ಭೇಟಿ
*  2 ‘ಎ’ ಗೆ ಸೇರ್ಪಡೆ ಮಾಡುವ ಸಂಬಂಧ ಪರ-ವಿರೋಧ ಅಭಿಪ್ರಾಯ
*  283 ಜಾತಿ, ಉಪ ಜಾತಿ ಮೀಸಲಾತಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು 
 

Backward Class Opposition to the Panchamsali 2A Reservation in Karnataka grg
Author
Bengaluru, First Published Feb 16, 2022, 9:03 AM IST

ಬೆಂಗಳೂರು(ಫೆ.16):  ಪಂಚಮಸಾಲಿ(Panchamsali) ಸಮುದಾಯವನ್ನು ಪ್ರವರ್ಗ 2 ‘ಎ’ ಗೆ ಸೇರ್ಪಡೆ ಮಾಡುವ ಸಂಬಂಧ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದ್ದರಿಂದ ಸಮಗ್ರ ಅಧ್ಯಯನ ನಡೆಸಿ ನಿಷ್ಪಕ್ಷಪಾತ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ(Jayaprakash Hegde) ಸ್ಪಷ್ಟಪಡಿಸಿದರು.

ದೇವರಾಜ ಅರಸು ಭವನದಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿದ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಿಯೋಗದಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪ್ರವರ್ಗ 2 ಎ ಗೆ(2A Reservation) ಸೇರ್ಪಡೆ ಮಾಡುವಂತೆ ಆ ಸಮುದಾಯದ ಸ್ವಾಮೀಜಿಗಳು, ವಕೀಲರೂ ವಾದ ಮಂಡಿಸಿದ್ದಾರೆ. ಈಗ ನೀವು ಸೇರ್ಪಡೆ ಮಾಡಬಾರದು ಎಂದು ಮನವಿ ಮಾಡಿದ್ದೀರಿ. ಸರ್ಕಾರ ವರದಿ ಕೇಳಿದ್ದು ನಿಷ್ಪಕ್ಷಪಾತ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

Reservation ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ಸ್ಥಳೀಯ ಸಂಸ್ಥೆಗಳ ಮೀಸಲಾತಿ(Reservation) ವಿಚಾರ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರ ವಹಿಸಿದರೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತೇವೆ. ರಾಜ್ಯ ಸರ್ಕಾರದ(Government of Karnataka) ಮೀಸಲಾತಿ ಪಟ್ಟಿಯಲ್ಲಿರುವ 73 ಜಾತಿ, ಉಪಜಾತಿಗಳನ್ನು ಕೇಂದ್ರದ ಪಟ್ಟಿಗೆ ಸೇರಿಸಲು ಕೇಂದ್ರ ಹಿಂದುಳಿದ ವರ್ಗಗಳ ಆಯೋಗಕ್ಕೆ(National Commission For Backward Classes) ವರದಿ ರವಾನಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್‌, ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸಬಾರದು. ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಕರ್ನಾಟಕದ 73 ಜಾತಿ, ಉಪಜಾತಿ ಸೇರ್ಪಡೆಗೊಳಿಸಬೇಕು. ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಅತಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ನೀಡಬೇಕು. ಎಚ್‌. ಕಾಂತರಾಜ ವರದಿಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ರಾಜ್ಯಾದ್ಯಂತ ಹೋರಾಟ:

ಪಂಚಮಸಾಲಿ ಸಮುದಾಯವು ವೀರಶೈವ-ಲಿಂಗಾಯತದ(Veerashaiva Lingayat) ಉಪ ಜಾತಿಯಾಗಿರುವುದರಿಂದ ಅಂತಹ ಉಪ ಜಾತಿಯನ್ನು ಬೇರೊಂದು ಪ್ರವರ್ಗಕ್ಕೆ ವರ್ಗಾಯಿಸುವುದು ಸುಪ್ರೀಂ ಕೋರ್ಟ್‌ ಇಂದ್ರಾ ಸಹಾನಿ ಪ್ರಕರಣದಲ್ಲಿ ನೀಡಿರುವ ತೀರ್ಪಿಗೆ ವಿರುದ್ಧವಾಗಿರುತ್ತದೆ. ಒಂದು ವೇಳೆ ಪ್ರವರ್ಗ 2ಎಗೆ ಸೇರಿಸಿದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಹೇಳಿದರು.

Panchamasali Reservation: ಬೊಮ್ಮಾಯಿ ಸರ್ಕಾರದ ವಿರುದ್ಧ ಕೂಡಲ ಶ್ರೀ ಕಿಡಿ

1992ರ ಮಂಡಲ್‌ ಆಯೋಗದ ವರದಿಯಂತೆ ಕರ್ನಾಟಕದ(Karnataka) 323 ಜಾತಿ, ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಬಳಿಕ 283 ಜಾತಿ, ಉಪ ಜಾತಿಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಯಿತು. ಆದರೂ ಸುಮಾರು 73 ಜಾತಿ ಉಪಜಾತಿಗಳು ರಾಜ್ಯ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದರೂ, ಕೇಂದ್ರದ ಪಟ್ಟಿಯಲ್ಲಿ ಸೇರಿಸಿಲ್ಲ. ಇವನ್ನೂ ಸೇರಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಮೇಯರ್‌ಗಳಾದ ಹುಚ್ಚಪ್ಪ, ವೆಂಕಟೇಶಮೂರ್ತಿ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜು, ಖಜಾಂಚಿ ಎಲ್‌.ಎ. ಮಂಜುನಾಥ್‌, ಮುಖಂಡ ಪುಟ್ಟಸ್ವಾಮಿ ಮತ್ತಿತರರು ಹಾಜರಿದ್ದರು.

ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ‘ಎ’ ಗೆ ಸೇರಿಸಬಾರದು. ಕೇಂದ್ರ ಸರ್ಕಾರದ(Central Government) ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಕರ್ನಾಟಕದ 73 ಜಾತಿ, ಉಪಜಾತಿ ಸೇರ್ಪಡೆಗೊಳಿಸಬೇಕು ಎಂದು ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್‌ ಅವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಗೆ ಬೆಂಗಳೂರಿನಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.
 

Follow Us:
Download App:
  • android
  • ios