Asianet Suvarna News Asianet Suvarna News

Panchamasali Reservation: ಬೊಮ್ಮಾಯಿ ಸರ್ಕಾರದ ವಿರುದ್ಧ ಕೂಡಲ ಶ್ರೀ ಕಿಡಿ

*  ಮೂರನೇ ಪೀಠದ ‘ಯಾರಿದ್ದಾರೆಂಬುದು ಬಹಿರಂಗ ಸತ್ಯ’
*  ತಳವಾರ, ಪರಿವಾರಕ್ಕೆ ಎಸ್ಟಿ ಮೀಸಲಾತಿ ಆದೇಶ ನೀಡಿದ ಸರ್ಕಾರ 
*  ನಮ್ಮ ಮೀಸಲಾತಿ ಕೂಗಿಗೆ ಯಾಕೆ ಸ್ಪಂದಿಸಲ್ಲ?
 

Jayamrutunjaya Swamiji Slams on CM Basavaraj Bommai Government grg
Author
Bengaluru, First Published Feb 1, 2022, 1:57 PM IST

ದಾವಣಗೆರೆ(ಫೆ.01): ಉತ್ತರ ಕರ್ನಾಟಕದ(North Karnataka) ತಳವಾರ, ಪರಿವಾರ ಸಮಾಜಕ್ಕೆ ಎಸ್ಟಿಮೀಸಲಾತಿ ಆದೇಶ ಪತ್ರ ನೀಡುವಂತೆ ನಿನ್ನೆಯಷ್ಟೇ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಪಂಚಮಸಾಲಿ(Panchamasali) ಸಮಾಜಕ್ಕೆ 2 ಎ ಮೀಸಲಾತಿಗಾಗಿ(2A Reservation) 718 ಕಿಮೀ ಸುದೀರ್ಘ, ಐತಿಹಾಸಿಕ ಪಾದಯಾತ್ರೆ(Padayatra) ಕೈಗೊಂಡರೂ ನಮ್ಮ ಕೂಗನ್ನು ಅಷ್ಟೊಂದು ಗಂಭೀರವಾಗಿ ಸರ್ಕಾರ ಪರಿಗಣಿಸಿದಂತಿಲ್ಲ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಕಿಡಿಕಾರಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟ 25 ವರ್ಷ ಹಳೆಯದು. ಕಳೆದೊಂದು ವರ್ಷದಿಂದ ಪಾದಯಾತ್ರೆ ಸೇರಿದಂತೆ ವಿವಿಧ ಹಂತದ ಹೋರಾಟ ನಡೆಸಿಕೊಂಡು ಬಂದಿದ್ದರೂ ಸರ್ಕಾರ(Government of Karnataka) ಮಾತ್ರ ನಮ್ಮ ಕೂಗಿಗೆ ಮನ್ನಣೆ ನೀಡಿಲ್ಲ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ನಿನ್ನೆಯಷ್ಟೇ ಉತ್ತರ ಕರ್ನಾಟಕದ ತಳವಾರ, ಪರಿವಾರ ಸಮಾಜಕ್ಕೆ ಎಸ್ಟಿ ಮೀಸಲಾತಿಯ ಆದೇಶ ಪತ್ರ ನೀಡಲು ಸುತ್ತೋಲೆ ಹೊರಡಿಸಿದೆ. ಆದರೆ, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲಿರುವ ಅಡ್ಡಿ ಏನು? ಎಲ್ಲಾ ಸಮಾಜಗಳ ಮೀಸಲಾತಿ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿರುವುದು ಉತ್ತಮ ಬೆಳವಣಿಗೆ. ಅದೇ ರೀತಿ ನಮ್ಮ ಸಮುದಾಯದ ದಶಕಗಳ ಕೂಗಿಗೆ ಸ್ಪಂದಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

Panchamasali Reservation: ಮಾಜಿ ಸಿಎಂ ಬಿಎಸ್‌ವೈ ಕೈಕೊಟ್ಟಿದ್ದಾರೆ: ಕೂಡಲ ಶ್ರೀ

ಮೀಸಲಾತಿ ವಿಚಾರದಲ್ಲಿ ಯಾಕೆ ಸುಮ್ಮನಿದ್ದೀರಿ ಎಂಬುದಾಗಿ ಪಂಚಮಸಾಲಿ ಯುವ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ನಮ್ಮ ಹೋರಾಟದಿಂದಾಗಿ ಶಾಶ್ವತ ಹಿಂದುಳಿದ ವರ್ಗ
ಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ದಾವಣಗೆರೆ, ಬೆಳಗಾವಿ, ಮೈಸೂರು ಇತರೆ ಜಿಲ್ಲೆ ಪ್ರವಾಸ ಮಾಡಿದ್ದು, ಇತರೆ ಜಿಲ್ಲೆಗಳ ಪ್ರವಾಸದ ನಂತರ ಸರ್ಕಾರಕ್ಕೆ ವರದಿ(Report) ನೀಡಲಿದ್ದಾರೆ. ಈ ಪ್ರವಾಸ ಮುಂಚೆಯೇ ಆಗಬೇಕಿತ್ತು. ಆದರೆ, ಲೋಕಸಭೆ, ವಿಧಾನಸಭೆ, ವಿಪ ಚುನಾವಣೆ, ಉಪ ಚುನಾವಣೆ ನೀತಿ ಸಂಹಿತೆ, ಕೊರೋನಾ ಕಾರಣಕ್ಕೆ ವರದಿ ಸಲ್ಲಿಕೆ ತಡವಾಗಿದೆಯೆಂದು ಜಯಪ್ರಕಾಶ ಹೆಗಡೆ ಪ್ರತಿಕ್ರಿಯಿಸಿದ್ದಾರೆ ಎಂದು ಅವರು ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಡಿ.16ರಂದು ಪಂಚಮಸಾಲಿ ಸಮಾಜಕ್ಕೆ ಮಾರ್ಚ್‌ ಒಳಗಾಗಿ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಜ.14ರಂದು ಮೀಸಲಾತಿ ಪಾದಯಾತ್ರೆ ವರ್ಷಾಚರಣೆ

ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಪಾಲ್ಗೊಂಡು, ಮೀಸಲಾತಿ ಘೋಷಿಸುತ್ತಾರೆಂಬ ಆಶಾಭಾವನೆ ಇತ್ತು. ಆದರೆ, ಅನೇಕ ಕಾರಣಕ್ಕೆ ಮೀಸಲಾತಿ ಬೇಡಿಕೆ ಈಡೇರಲಿಲ್ಲ ಎಂದರು. ಪಾದಯಾತ್ರೆ ಸ್ವಾಗತ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎಚ್‌.ಎಸ್‌.ಶಿವಶಂಕರ್‌, ದೂಡಾ ಮಾಜಿ ಅಧ್ಯಕ್ಷ ಡಿ.ಶಂಕರಪ್ಪ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ, ಹಾವೇರಿ ಅಧ್ಯಕ್ಷ ಬಸವರಾಜ ಹಾಲಪ್ಪ, ರಾಣೆಬೆನ್ನೂರು ವಕೀಲ ಎ.ವಿ.ಪಾಟೀಲ, ಹಿರೇಕೆರೂರಿನ ದಿಗ್ವಿಜಯ, ಜಗಳೂರು ಕಲ್ಲೇಶಪ್ಪ, ತೆಲಗಿ ಮಂಜಣ್ಣ, ಎಸ್‌.ಓಂಕಾರಪ್ಪ, ಮಲ್ಲಿಕಾರ್ಜುನ, ಯೋಗೇಶ, ತೆಲಗಿ ಮಂಜಣ್ಣ, ಚನ್ನಬಸವಗೌಡ ಇತರರು ಇದ್ದರು.

ನಾಳೆ ಬೆಳಗಾವಿಯಲ್ಲಿ ಪಂಚಮಸಾಲಿ ಕಾರ್ಯಕಾರಿಣಿ

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಬೆಳಗಾವಿ(Belagavi) ಗಾಂಧಿ ಭವನದಲ್ಲಿ ಫೆ.2ರಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. 

ಅಂದು ಬೆಳಿಗ್ಗೆ 11ಕ್ಕೆ ನಡೆಯುವ ಸಭೆಯಲ್ಲಿ ಶಾಸಕರಾದ ಬಸವನಗೌಡ ಪಾಟೀಲ್‌ ಯತ್ನಾಳ್‌(Basanagouda Patil Yatnal), ಅರವಿಂದ ಬೆಲ್ಲದ್‌(Aravind Bellad), ಡಾ.ವಿಜಯಾನಂದ ಕಾಶಪ್ಪನವರ್‌, ಎ.ಬಿ.ಪಾಟೀಲ, ಎಚ್‌.ಎಸ್‌.ಶಿವಶಂಕರ, ವಿನಯ ಕುಲಕರ್ಣಿ ಸೇರಿದಂತೆ ಹಾಲಿ-ಮಾಜಿ ಜನ ಪ್ರತಿನಿಧಿಗಳು, ಸಮಾಜದ ಪದಾಧಿಕಾರಿಗಳು, ಮುಖಂಡರು, ಯುವ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.

Panchamasali Reservation: 2ಎ ಮೀಸಲು ಸೌಲಭ್ಯ ಸಿಗೋವರೆಗೂ ಹೋರಾಟ: ಕೂಡಲ ಶ್ರೀ

ಮೂರನೇ ಪೀಠದ ‘ಯಾರಿದ್ದಾರೆಂಬುದು ಬಹಿರಂಗ ಸತ್ಯ’!

ಪಂಚಮಸಾಲಿ ಮೂರನೇ ಪೀಠ ಯಾಕೆ, ಯಾರು ಮಾಡುತ್ತಿದ್ದಾರೆ, ಇದರ ಹಿಂದೆ ಯಾರಿದ್ದಾರೆಂಬುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯವಾಗಿದ್ದು, ಸಾವಿರ ಪೀಠಗಳಾದರೂ ನಮಗೆ ಬೇಸರವಿಲ್ಲ. ಪಂಚಮಸಾಲಿಗೆ 2 ಎ ಮೀಸಲಾತಿ ಪಡೆಯುವುದು, ಸಮಾಜ ಕಟ್ಟುವುದು ಮಾತ್ರವೇ ನಮ್ಮ ಉದ್ದೇಶ ಎಂದು ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. 

ಸಮಾಜ ಸಂಘಟನೆಗೆ ಪೀಠಗಳಾಗುತ್ತಿವೆಯೆಂದರೆ ಆಗಲಿ. ಆದರೆ, ಒಂದು ರಾಷ್ಟ್ರಕ್ಕೆ ಒಬ್ಬರೇ ರಾಷ್ಟ್ರಪತಿ, ಒಂದು ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಹೇಗಿರುತ್ತಾರೋ ಅದೇ ರೀತಿ ನಮಗೆ ಗೊತ್ತಿರುವುದು ಕೂಡಲ ಸಂಗಮದ ಪಂಚಮಸಾಲಿ ಪೀಠವೊಂದೇ. ಇಟ್ಟಿಗೆ, ಸಿಮೆಂಟ್‌, ಟೈಲ್ಸ್‌, ಫ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಕಿ ಪೀಠವನ್ನಾಗಲೀ, ಸಮಾಜವನ್ನಾಗಲೀ ನಾವು ಕಟ್ಟಿಲ್ಲ. ಸಮಾಜ ಬಾಂಧವರ ಹೃದಯದಲ್ಲಿ ಸಮಾಜವನ್ನು, ಪೀಠವನ್ನು ನಾವು ಕಟ್ಟಿದವರು ಎಂದು ಅವರು ತಿಳಿಸಿದರು.
 

Follow Us:
Download App:
  • android
  • ios