ಅಯೋಧ್ಯೆಗೆ ಹೋಗುವೆ, ಆದರೆ ಭಕ್ತನಾಗಿ ಅಲ್ಲ: ಪ್ರಿಯಾಂಕ್ ಖರ್ಗೆ
ನಾನು ರಾಮಭಕ್ತ ಅಲ್ಲ, ಬುದ್ಧ, ಬಸವ ತತ್ವ, ಸಂವಿಧಾನದ ಭಕ್ತ, ಮುಖ್ಯಮಂತ್ರಿಗಳು ಆಯೋಧ್ಯೆಗೆ ಆಹ್ವಾನಿಸಿದರೆ ಹೋಗುತ್ತೇನೆ, ಆದರೆ ಭಕ್ತನಾಗಿ ಅಲ್ಲ, ಅಲ್ಲಿಯ ಸಂಸ್ಕೃತಿ, ಪದ್ಧತಿ ತಿಳಿದುಕೊಳ್ಳಲು ಹೋಗುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು (ಜ.24): ನಾನು ರಾಮಭಕ್ತ ಅಲ್ಲ, ಬುದ್ಧ, ಬಸವ ತತ್ವ, ಸಂವಿಧಾನದ ಭಕ್ತ, ಮುಖ್ಯಮಂತ್ರಿಗಳು ಆಯೋಧ್ಯೆಗೆ ಆಹ್ವಾನಿಸಿದರೆ ಹೋಗುತ್ತೇನೆ, ಆದರೆ ಭಕ್ತನಾಗಿ ಅಲ್ಲ, ಅಲ್ಲಿಯ ಸಂಸ್ಕೃತಿ, ಪದ್ಧತಿ ತಿಳಿದುಕೊಳ್ಳಲು ಹೋಗುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನಾಗೇ ಯಾವುದೇ ದೇವಸ್ಥಾನಕ್ಕೂ ಹೋಗುವುದಿಲ್ಲ, ನೀವು (ಮಾಧ್ಯಮದವರು) ಕರೆದರೆ ಖಂಡಿತವಾಗಿ ಆಯೋಧ್ಯೆಗೆ ಬರುತ್ತೇನೆ. ಯಾರೂ ಹೇಳದೇ ಇದ್ದರೂ ಹೃಷಿಕೇಶ, ಬನಾರಸ್, ಅಜ್ಮೀರ್ ದರ್ಗಾ ಮುಂತಾದ ಕಡೆ ಹೋಗಿದ್ದೇನೆ, ಯಾರೇ ಕರೆದರೂ ದೇವಸ್ಥಾನಗಳಿಗೂ ಹೋಗುತ್ತೇನೆ, ಅವರ ತತ್ವ, ಪದ್ಧತಿ, ಸಂಸ್ಕೃತಿ ತಿಳಿದುಕೊಳ್ಳಬೇಕೆಂಬ ಕಾರಣಕ್ಕೆ ತೆರಳುತ್ತೇನೆ’ ಎಂದರು. ಶ್ರೀರಾಮನ ಬಗ್ಗೆ ಎಷ್ಟೊಂದು ಮಾತನಾಡುವ ಬಿಜೆಪಿಗರಿಗೆ ಹನುಮಾನ್ ಚಾಲೀಸಾ, ರಾಮಾಯಣ, ಮಹಾಭಾರತ ಗೊತ್ತಿದೆಯೇ ಎಂದು ಇದೇ ವೇಳೆ ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ಸಿಎಂ ಸಿದ್ದರಾಮಯ್ಯ: ನೂರಾರು ನೌಕರರ ವಜಾ!
ಪ್ರಶ್ನಿಸಿದ ಅವರು, ಅಪೂರ್ಣವಾಗಿರುವ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಬಾರದು ಎಂದು ಶಂಕರಾಚಾರ್ಯ ಪೀಠದ ಸ್ವಾಮಿಗಳು ಕೇಳಿದ್ದಾರೆ. ಸಾಧು-ಸಂತರು ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಹೇಳಿದ್ದಾರೆ. ಈ ಮಾತನ್ನು ಕಾಂಗ್ರೆಸ್‌ನವರು ಕೇಳಿಲ್ಲ. ಹಾಗಾಗಿ ಬಿಜೆಪಿಯವರು ಈ ಬಗ್ಗೆ ಪ್ರಶ್ನಿಸಿದವರಿಗೆ ಉತ್ತರ ಕೊಡಬೇಕೇ ಹೊರತು ನಮಗೆ ಅಲ್ಲ ಎಂದು ಹೇಳಿದರು.