ವಿನಯ್ ಬಲಗೈಯಲ್ಲಿ ಇರುವುದು ಕುಂಭಮೇಳದ ಟ್ಯಾಟೂ; ಶಿವ, ನಂದಿ, ಅಘೋರಿ ನೋಡಿದ್ರಾ?
ವಿಜಯ್ ಕೈಯಲ್ಲಿರುವ ಟ್ಯಾಟೂ ಮೇಲೆ ನೆಟ್ಟಿಗರ ಕಣ್ಣು. ಸ್ಪಷ್ಟವಾಗಿ ತಿಳಿದುಕೊಳ್ಳಲು ಈ ಫೋಟೋ ನೋಡಿ..
ಹರಹರ ಮಹಾದೇವ್ (Hara Hara Mahadev) ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಮಿಂಚಿರುವ ವಿನಯ್ ಗೌಡ ಈಗ ಬಿಗ್ ಬಾಸ್ ಸೀಸನ್ 10ರ ಟಫ್ ಸ್ಪರ್ಧಿ.
ವೀಕೆಂಡ್‌ನಲ್ಲಿ ಸಖತ್ ಕಲರ್‌ಫುಲ್ ಆಗಿ ಮಿಂಚುವ ವಿನಯ್ ಗೌಡ ವಾರ ಪೂರ್ತಿ ಸ್ಲೀವ್ ಲೆಸ್ ಅಥವಾ ಹಾಟ್ ಶರ್ಟ್‌ಗಳನ್ನು ಧರಿಸುತ್ತಾರೆ.
ವಿನಯ್ ಬಲಗೈ ಮೇಲೆ ತುಂಬಾ ಟ್ಯಾಟೂಗಳಿದೆ. ಸ್ಪಷ್ಟವಾಗಿ ನೋಡಿದರೂ ಅನೇಕರಿಗೆ ಅದರಲ್ಲಿ ಏನಿದೆ ಎಂದು ಅರ್ಥ ಆಗುವುದಿಲ್ಲ. ಏನಿದೆ ಅಂತ ಹೇಳಿದರೆ ಯಾರೂ ನಂಬುವುದಿಲ್ಲ.
ಹೌದು! ವಿನಯ್ ಟ್ಯಾಟೂ ಹಾಕಿಸಿರುವುದು ಕುಂಭಮೇಳ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳಕ್ಕೆ ಭೇಟಿ ನೀಡಬೇಕೆಂದು ಎರಡು ಸಲ ಪ್ರಯತ್ನ ಪಟ್ಟಿದ್ದಾರೆ.
ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗದ ಕಾರಣ ವಿನಯ್ ಟ್ಯಾಟೂ ಹಾಕಿಸಿದ್ದಾರೆ. ತಮ್ಮ ಸ್ನೇಹಿತರು ಕುಂಭಮೇಳಕ್ಕೆ ಹೋಗಿ ಅಲ್ಲಿ ಕೆಲವೊಂದು ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.
ಹಲವಾರು ಲೈವ್ ಫೋಟೋಗಳನ್ನು ಒಂದು ಮಾಡಿ ಈ ಡಿಸೈನ್ ಹಾಕಿಸಿದ್ದಾರೆ. ವಿನಯ್ ಗೌಡ ಅವರ ಮನೆ ದೇವರು ಶಿವ. ಇದು ಟ್ಯಾಟೂ ಕಥೆ.
ಈ ಟ್ಯಾಟೂವನ್ನು ಗಮನಿಸಿ ನೋಡಿದರೆ ಅದಲ್ಲಿರ ಶಿವ, ನಂದಿ, ಗಂಗಾ ನದಿ ತೀರಾ, ಅಘೋರಿ, ಹಾವು, ದೇವಸ್ಥಾನ ಮತ್ತು ತ್ರಿಶೂಲ್ ಕಾಣಿಸುತ್ತದೆ.
ಫೋಟೋ ನೋಡಿಕೊಂಡು ಈ ಟ್ಯಾಟೂ ಮಾಡಲು ಸುಮಾರು ನಾಲ್ಕು ವಾರಗಳು ಬೇಕಾಯಿತಂತೆ. ಆಗಾಗ ಬ್ರೇಕ್ ತೆಗೆದುಕೊಂಡು ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ.