ಅಯೋಧ್ಯಾ ರಾಮಮಂದಿರ ಉದ್ಘಾಟನೆ ಸಂಭ್ರಮ; ಜ.18 ರಿಂದ 22ರವರೆಗೆ ಉಚಿತ ಹೆರಿಗೆ ಘೊಷಿಸಿದ ವಿಜಯಪುರದ ಜೆಎಸ್‌ಎಸ್‌ ಆಸ್ಪತ್ರೆ!

ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯನ್ನು ಸಂಭ್ರಮಿಸಲು ವಿಜಯಪುರದ ಖಾಸಗಿ ಆಸ್ಪತ್ರೆಯೊಂದು ಜನವರಿ 18 ರಿಂದ ಜನವರಿ 22 ರವರೆಗೆ ಉಚಿತ ಹೆರಿಗೆ ಮಾಡಿಸುವುದಾಗಿ ಗುರುವಾರ ಘೋಷಿಸಿದೆ. ಆಸ್ಪತ್ರೆಯಲ್ಲಿ ಜನಿಸಿದ ಗಂಡು, ಹೆಣ್ಣು ಮಗುವನ್ನು ರಾಮ, ಸೀತೆ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಹೆರಿಗೆ ಉಚಿತ ಎಂದಿರುವ ಆಸ್ಪತ್ರೆ ಸಿಬ್ಬಂದಿ

Ayodhya RamMandir Inauguration Announcement free delivery till January 22 at Vijayapur JSS Hospital rav

ವಿಜಯಪುರ (ಜ.18): ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯನ್ನು ಸಂಭ್ರಮಿಸಲು ವಿಜಯಪುರದ ಖಾಸಗಿ ಆಸ್ಪತ್ರೆಯೊಂದು ಜನವರಿ 18 ರಿಂದ ಜನವರಿ 22 ರವರೆಗೆ ಉಚಿತ ಹೆರಿಗೆ ಮಾಡಿಸುವುದಾಗಿ ಗುರುವಾರ ಘೋಷಿಸಿದೆ.

ವಿಜಯಪುರದಲ್ಲಿ ಜೆಎಸ್‌ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಡೆಸುತ್ತಿರುವ 'ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್' ಈ ನಿರ್ಧಾರ ಪ್ರಕಟಿಸಿದೆ.

"ಅಯೋಧ್ಯೆಯಲ್ಲಿ ಇದೇ ಸೋಮವಾರ ನಡೆಯಲಿರುವ 'ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ'ಯನ್ನು ಆಚರಿಸಲು ಇಂದಿನಿಂದ(ಗುರುವಾರ) ಜನವರಿ 22 ರವರೆಗೆ ನಮ್ಮ ಆಸ್ಪತ್ರೆಯಲ್ಲಿ ಎಲ್ಲಾ ಹೆರಿಗೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಇದು ಒಂದು ದೊಡ್ಡ ಸಂದರ್ಭವಾಗಿದ್ದು, ಈ ಸಮಯದಲ್ಲಿ ನಾವು ಮಹತ್ವದ ಕೊಡುಗೆ ನೀಡಲು ನಿರ್ಧರಿಸಿದ್ದೇವೆ. ಐದು ದಿನಗಳ ನಿರ್ದಿಷ್ಟ ಅವಧಿಗೆ ನಮ್ಮ ಆಸ್ಪತ್ರೆಯಲ್ಲಿ ನಡೆಯುವ ಎಲ್ಲಾ ಹೆರಿಗೆಗಳನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಹಿಂದೂಗಳಿಗೆ ಅವಮಾನ ಮಾಡುವ ಸರ್ಕಾರ ರಾಜ್ಯದಲ್ಲಿದೆ; ಜ.22 ರಂದು ರಜೆ ಘೋಷಿಸದ ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

"ಇಂದು, ಇಲ್ಲಿಯವರೆಗೆ, ನಾವು ಏಳು ಹೆರಿಗೆಗಳನ್ನು ಉಚಿತವಾಗಿ ಮಾಡಿದ್ದೇವೆ" ಎಂದು ಅವರು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಯ ಈ ಕ್ರಮವನ್ನು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಶ್ಲಾಘಿಸಿದ್ದಾರೆ.

ಜೆಎಸ್‌ಎಸ್ ಆಸ್ಪತ್ರೆ(JSS Hospital vijayapur)ಯಲ್ಲಿ ಜನವರಿ 18, 2024 ರಿಂದ ಜನವರಿ 22, 2024 ರವರೆಗೆ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವನ್ನು ರಾಮನ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಹೊಸದಾಗಿ ಹುಟ್ಟಿದ ಹೆಣ್ಣು ಮಗುವನ್ನು ಸೀತೆಯ ರೂಪವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹೆರಿಗೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಜೈ ಶ್ರೀ ರಾಮ್," ಎಂದು ಮಾಜಿ ಕೇಂದ್ರ ಸಚಿವ ಯತ್ನಾಳ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 
ಕಾಂಗ್ರೆಸ್​ಗೆ ಹಸ್ತದ ಗುರುತು ನೀಡಿದವರೇ ಜೈನ ಮುನಿಗಳು: ಶಾಸಕ ಬಸನಗೌಡ ಯತ್ನಾಳ

Latest Videos
Follow Us:
Download App:
  • android
  • ios