Asianet Suvarna News Asianet Suvarna News

ಕಾಂಗ್ರೆಸ್​ಗೆ ಹಸ್ತದ ಗುರುತು ನೀಡಿದವರೇ ಜೈನ ಮುನಿಗಳು: ಶಾಸಕ ಬಸನಗೌಡ ಯತ್ನಾಳ

ಹಿಂದುತ್ವ ಇಡೀ ಜಗತ್ತನ್ನೇ ಆಳುವ ಕಾಲ ದೂರವಿಲ್ಲ. ಮತಾಂಧ ಶಕ್ತಿಗಳ ಶಕ್ತಿ ಮುಗಿದಿದೆ, ಭಾರತವೇ ಜಗದ್ಗುರುವಾಗಲಿದೆ ಎಂದು ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Mla Basanagouda Patil Yatnal Slams On Congress Govt gvd
Author
First Published Jan 15, 2024, 11:59 PM IST

ವಿಜಯಪುರ (ಜ.15): ಹಿಂದುತ್ವ ಇಡೀ ಜಗತ್ತನ್ನೇ ಆಳುವ ಕಾಲ ದೂರವಿಲ್ಲ. ಮತಾಂಧ ಶಕ್ತಿಗಳ ಶಕ್ತಿ ಮುಗಿದಿದೆ, ಭಾರತವೇ ಜಗದ್ಗುರುವಾಗಲಿದೆ ಎಂದು ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರಿಂದ ಇಸ್ಲಾಂ ರಾಷ್ಟ್ರಗಳಲ್ಲೂ ಭಾರತದ ಗೌರವ ಹೆಚ್ಚಿದೆ. ಕೆಲವೇ ದಿನಗಳಲ್ಲಿ ಮೋದಿಯವರು ಅಬುಧಾಬಿಯಲ್ಲಿ ಲಕ್ಷ್ಮಿ ನಾರಾಯಣ ದೇವಸ್ಥಾನ ಉದ್ಘಾಟಿಸಲಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ ಕುಮಾರ ಹೆಗಡೆ ಏಕವಚನದಲ್ಲಿ ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಅನಂತಕುಮಾರ​ಗೆ ಕಿವಿಮಾತು ಹೇಳುವಷ್ಟು ದೊಡ್ಡವ ನಾನಲ್ಲ. 

ಅವರ ಸ್ವಭಾವ ಬೇರೆ, ನನ್ನ ಸ್ವಭಾವ ಬೇರೆ. ನಾವೇನು ಹಾಗೆ ಮಾತನಾಡಲ್ಲ. ನಾನು ಗೌರವಾನ್ವಿತವಾಗಿ ಸನ್ಮಾನ್ಯ ಸಿದ್ದರಾಮಯ್ಯ ಎಂದೇ ಮಾತನಾಡುತ್ತೇನೆ ಎಂದರು. ಅಯೋಧ್ಯ ರಾಮಮಂದಿರ ಉದ್ಘಾಟನೆಗೆ ನನ್ನ ಕರೆದಿಲ್ಲ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಉದ್ಘಾಟನೆ ಕಾರ್ಯಕ್ರಮ ಮುಗಿದ ನಂತರ ಹೋಗುವುದಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೆ. ಅಷ್ಟಾದರೂ ಶ್ರೀರಾಮಚಂದ್ರ ಅವರಿಗೆ ಸದ್ಭುದ್ದಿ ನೀಡಿದ್ದಾನೆ. ಅಯೋಧ್ಯೆಗೆ ಹೋದ ಬಳಿಕೆ ಅವರಿಗೂ ಗೊತ್ತಾಗುತ್ತದೆ. ಬಳಕೆ ನಾನು (ಸಿದ್ದರಾಮಯ್ಯ) ಶ್ರೀರಾಮನ ಭಕ್ತನಾಗುತ್ತೇನೆ ಎಂದು ಘೋಷಣೆ ಮಾಡಿದರು ಮಾಡಬಹುದು ಎಂದರು.

ಚುನಾವಣೆ ಸಮಯದಲ್ಲಿ ಮಾತ್ರ ರಾಮಮಂದಿರ ಚರ್ಚೆ: ಸಚಿವ ಸಂತೋಷ ಲಾಡ್

ರಾಮಮಂದಿರ ಉದ್ಘಾಟನೆಗೆ ಹೋಗಬೇಕೆಂದರೆ ಹೈಕಮಾಂಡ್ ಅನುಮತಿ ಬೇಕೆಂದು ಸಚಿವರು ಹೇಳುತ್ತಾರೆ. ಇದು ನಾಚಿಕೆಗೇಡಿ ಹೇಳಿಕೆ. ಸಾಯಬೇಕಾದರೂ ಸೋನಿಯಾ ಗಾಂಧಿಯವರ ಅನುಮತಿ ಕೇಳುತ್ತಾರಾ? ಇದು ಕಾಂಗ್ರೆಸ್ ಗುಲಾಮಗಿರಿಯ ಸಂಕೇತ ಎಂದರು. ಅಯೋಧ್ಯ ರಾಮ ಮಂದಿರ ಕಾಶಿ ವಿಶ್ವನಾಥ ದೇವಸ್ಥಾನ ಮುತುರಾಜ ಕೃಷ್ಣ ದೇವಸ್ಥಾನ ಮುಕ್ತಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ಸದ್ಯ ಶ್ರೀ ರಾಮ ಮಂದಿರ ಉದ್ಘಾಟನೆಯ ಮೂಲಕ ಮುಕ್ತವಾಗುತ್ತಿದೆ. ಕಾನೂನಿನಲ್ಲಿ ನಮಗೆ ವಿಶ್ವಾಸವಿದ್ದು ಕಾಶಿ ವಿಶ್ವನಾಥ ಮಥುರಾ ದೇವಸ್ಥಾನವೂ ಮುಕ್ತವಾಗಲಿದೆ. ವಿಜಯಪುರದಲ್ಲೂ ಹಿಂದೂ ದೇವಾಲಯಗಳನ್ನು ನಾಶ ಮಾಡಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ. 

ಈ ಬಗ್ಗೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ. ಇಲಾಖೆ ಗಮನಹರಿಸಿದಿದ್ದರೆ ನ್ಯಾಯಾಲಯ ಮೊರೆ ಹೋಗುತ್ತೇವೆ. ಕುತುಬ್ ಮಿನಾರ್ ಸರ್ವೆ ಹಾಗೂ ಉತ್ಖನನ ಮಾಡಬೇಕು ಎಂದು ಒತ್ತಾಯಿಸಿದರು. ಗಾಂಧಿ ಕುಟುಂಬಕ್ಕೆ ಸಂತರ ಶಾಪ ನಿಶ್ಚಿತವಾಗಿಯೂ ಇದೆ ಎಂದ ಯತ್ನಾಳ್, ಇವರು ಗಾಂಧಿ ಕುಟುಂಬವೇ ಅಲ್ಲ. ಇವರು ನಕಲಿ ಗಾಂಧಿ. ಇಂದಿರಾ ಗಾಂಧಿ ಫಿರೋಜ್ ಖಾನ್ ಎಂಬುವನನ್ನು ಮದುವೆಯಾದರೂ ಹಿಂದೂಗಳ ಮತ ಪಡೆಯಲು ಗಾಂಧಿ ಎಂದು ಸೇರಿಸಿಕೊಂಡಿದ್ದಾರೆ. ನೆಹರು ಇಸ್ಲಾಂ ಧರ್ಮದ ಸಮೀಪವಿದ್ದರು. ಬಳಿಕ ರಾಜೀವ್ ಗಾಂಧಿ ಕ್ರಿಶ್ಚಿಯನ್ ಧರ್ಮದ ಕಡೆ ವಾಲಿಸಿದರು. ಗಾಂಧಿ ಕುಟುಂಬ ಹೈಬ್ರಿಡ್ ತಳಿ ಇದ್ದಂತೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್​ಗೆ ಹಸ್ತದ ಗುರುತು ನೀಡಿದವರೇ ಜೈನ ಮುನಿಗಳು. ದೇಶದಲ್ಲಿ ಗೋ ಹತ್ಯೆಯನ್ನು ನಿಷೇಧ ಮಾಡುವುದಾಗಿ ಜೈನ ಮುನಿಗಳಿಗೆ ಇಂದಿರಾಗಾಂಧಿ ಆಶ್ವಾಸನೆ ಕೊಟ್ಟಿದ್ದರು. ಆದರೆ ಅದನ್ನ ಈಡೇರಿಸಲಿಲ್ಲ. ಗೋ ಹತ್ಯೆನಿಷೇಧಕ್ಕಾಗಿ ಜೈನ ಮುನಿಗಳು ದೆಹಲಿಯಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸಿದರು. ಜೈನ ಮುನಿಗಳ ಮೇಲೆ ಗೋಲಿಬಾರ್ ನಡೆಸಲಾಯಿತು. ಜೇನುಮನಿಗಳು ಉಪವಾಸ ಅಮೃತ ಮಾಡಿ ಪ್ರಾಣ ಅರ್ಪಿಸಿದರು. ಈ ವೇಳೆ ಜೈನ ಮುನಿಗಳು ಗಾಂಧಿ ಕುಟುಂಬಕ್ಕೆ ಶಾಪ ಕೊಟ್ಟರು. ನಮ್ಮನ್ನ ಹೇಗೆ ರಸ್ತೆಯಲ್ಲಿ ಹೊಡೆದರೋ ಅದೇ ರೀತಿ ನಿಮ್ಮ ಕುಟುಂಬದವರಿಗೂ ಆಗಲಿ ಎಂದು ಶಾಪಕೊಟ್ಟರು ಎಂದರು.

ಇಂದಿರಾ ಗಾಂಧಿ ಸಾವು ಹಾಗೂ ರಾಜೀವ್ ಗಾಂಧಿ ಸಾವು ಅದೇ ರೀತಿಯಾಯಿತು. ರಾಹುಲ್ ಗಾಂಧಿ ಮದುವೆ ಇಲ್ಲದೆ ಅಲೆಮಾರಿಯಾದಂತಾಗಿದೆ. ಇದೆಲ್ಲಾ ಶಾಪದ ಪರಿಣಾಮ. ಇದೇ ಶಾಪ ಕ್ರಮೇಣ ಗಾಂಧಿ ಕುಟುಂಬವನ್ನು ನಾಶ ಮಾಡುತ್ತಾ ಬರುತ್ತದೆ. ಭಾರತದಲ್ಲಿ ನಕಲಿ ಗಾಂಧಿ ಕುಟುಂಬ ನಾಶವಾಗುವುದು ನಿಶ್ಚಿತ, ಕಾಂಗ್ರೆಸ್ ಪಕ್ಷ ನಾಶವಾಗುವುದು ನಿಶ್ಚಿತ ಎಂದರು. ರಾಹುಲ್ ಗಾಂಧಿ ನೇತೃತ್ವದ ನ್ಯಾಯಯಾತ್ರೆ ಬಗ್ಗೆ ಮಾತನಾಡಿದ ಯತ್ನಾಳ್, ಈ ದೇಶಕ್ಕೆ ಅನ್ಯಾಯ ಮಾಡಿದವರು, ದೇಶವನ್ನು ವಿಭಜನೆ ಮಾಡಿದವರು, ದೇಶವನ್ನು ತುಂಡರಿಸಿದವರು, ದೇಶ ವಿಭಜನೆಯಲ್ಲಿ ಕೋಟ್ಯಾಂತರ ಹಿಂದೂಗಳ ಕೊಲೆಗೆ ಕಾರಣವಾಗಿದ್ದೆ ಈ ನಕಲಿ ಗಾಂಧಿ ಕುಟುಂಬ. 

ಋಷ್ಯಶೃಂಗರಿಗೂ ಅಯೋಧ್ಯೆ ರಾಮನಿಗೂ ಅವಿನಾಭಾವ ಸಂಬಂಧ!

ಇವರು ಅಧಿಕಾರದಲ್ಲಿದ್ದಾಗ ದೇಶದ ಅಭಿವೃದ್ಧಿ ಆಗಲಿಲ್ಲ. ರಾಹುಲ್ ಗಾಂಧಿ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ಮಾಡಿದರೇನು, ಆತನ ಒಂದು ಹೇಳಿಕೆ ಕಾಂಗ್ರೆಸ್​ ತನ್ನ ಮತಗಳನ್ನೇ ಕಳೆದುಕೊಳ್ಳುತ್ತದೆ ಎಂದರು. ಮೋದಿ ಅವರ ಕಾಲದಲ್ಲಿ ಭಾರತ ಐದನೇ ಬಲಾಢ್ಯ ಆರ್ಥಿಕ ರಾಷ್ಟ್ರವಾಗಿದೆ. ಪಾರ್ಕ್ ಆಕ್ರಮಿತ ಕಾಶ್ಮೀರವನ್ನು ನಾವು ಹಿಂಪಡೆಯುತ್ತೇವೆ. ಲೋಪ ಲೋಕಸಭಾ ಚುನಾವಣೆಗೂ ಮುನ್ನವೇ ಪಿಓಕೆಯನ್ನು ಪಡೆಯುತ್ತೇವೆ. ಮುಂದಿನ ಹತ್ತು ವರ್ಷಗಳಲ್ಲಿ ಪಾಕಿಸ್ತಾನವು ಭಾರತದ ಭಾಗವಾಗಲಿದೆ. ಪಾಕಿಸ್ತಾನವು ಭಾರತದ ಒಂದು ರಾಜ್ಯವಾಗಲಿದೆ. ಹಿಂದೂ ಧರ್ಮ ಇಡೀ ಜಗತ್ತನ್ನೇ ಆಳುತ್ತದೆ ಎಂದರು.

Follow Us:
Download App:
  • android
  • ios