RIP: ಚಿಂತಕ, ನಟ GK Govinda Rao ಇನ್ನಿಲ್ಲ, ಹುಬ್ಬಳ್ಳಿಯಲ್ಲೇ ಸರಳ ಅಂತ್ಯಕ್ರಿಯೆ
- ಚಿಂತಕ ಜಿ. ಕೆ. ಗೋವಿಂದ ರಾವ್ ಇನ್ನಿಲ್ಲ
- ನಟ, ಸಾಹಿತಿ, ಚಿಂತಕರಾಗಿ ಗುರುತಿಸಿಕೊಂಡಿದ್ದ ಗೋವಿಂದ ರಾವ್
ಹುಬ್ಬಳ್ಳಿ(ಅ.15): ಚಿಂತಕ, ಸಾಹಿತಿ, ನಟ ಜಿ. ಕೆ. ಗೋವಿಂದ ರಾವ್(86) (G.K. Govinda Rao) ಅವರು ಅ.015ರಂದು ಹುಬ್ಬಳ್ಳಿಯಲ್ಲಿ(Hubli) ಪುತ್ರಿಯ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅದ್ಭುತ ವಾಗ್ಮಿಯಾಗಿದ್ದ ಗೋವಿಂದ ರಾವ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ರಂಗ ಚಟುವಟಿಕೆ, ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ನಟ ಇಳಿ ವಯಸ್ಸಿನಲ್ಲಿಯೂ ಯುವಕರೇ ನಾಚುವಂತೆ ಕ್ರಿಯಾಶೀಲರಾಗಿದ್ದರು. ಬೆಂಗಳೂರಿನಲ್ಲಿದ್ದ ನಟ ಆರೋಗ್ಯದಲ್ಲಿ ಏರುಪೇರಾದ ಕಾರಣ ಹುಬ್ಬಳ್ಳಿಗೆ ತೆರಳಿದ್ದರು. ಅಲ್ಲಿ ತಮ್ಮ ಪುತ್ರಿಯ ಮನೆಯಲ್ಲಿಯೇ ಉಳಿದುಕೊಂಡಿದ್ದ ಗೋವಿಂದ ರಾವ್ ಅವರು ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.
ಹುಬ್ಬಳ್ಳಿಯ ಪುತ್ರಿ ಮನೆಯಲ್ಲಿದ್ದ ಗೋವಿಂದ ರಾವ್
ಪುತ್ರಿ ಶ್ಯಾಮಲಾ ಗುರುಪ್ರಸಾದ್ ಮನೆಯಲ್ಲಿ ಉಳಿದುಕೊಂಡಿದ್ದು ಗೋವಿಂದ ರಾವ್ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅಳಿಯ ಹುಬ್ಬಳ್ಳಿಯ ಖ್ಯಾತ ನೇತ್ರ ತಜ್ಞ ವೈದ್ಯ ಡಾ. ಗುರು ಪ್ರಸಾದ್ ಗೋವಿಂದ ರಾವ್ ಅವರನ್ನು ಹುಬ್ಬಳ್ಳಿಗೆ ಕರೆಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದರು. ಕಳೆದ ಎರಡು ತಿಂಗಳಿಂದ ಹುಬ್ಬಳ್ಳಿಯಲೇ ವಾಸವಾಗಿದ್ದ ಅವರು ಹುಬ್ಬಳ್ಳಿಯ ಗೋಲ್ಡನ್ ಟೌನ್‌ನಲ್ಲಿರುವ ಪುತ್ರಿಯ ನಿವಾಸದಲ್ಲಿದ್ದರು. ಬೆಳಗಿನ ಜಾವ 4.30 ಸುಮಾರಿಗೆ ವಿಧಿವಶರಾಗಿದ್ದಾರೆ.
ಆಂಗ್ಲ ಭಾಷಾ ಉಪನ್ಯಾಸಕರಾಗಿದ್ದ ಆಗಿದ್ದ ಜಿ ಕೆ ಗೋವಿಂದರಾವ್ ಕನ್ನಡ ಭಾಷೆಯಲ್ಲೂ ಅಷ್ಟೇ ಚೆನ್ನಾಗಿ ಬರೆಯುವವರು. ಹಲವು ಕೃತಿಗಳನ್ನು ರಚಿಸಿದ್ದ ಜಿ ಕೆ ಗೋವಿಂದ ರಾವ್ ನಟ ಮಾತ್ರವಲ್ಲ ಚಿಂತಕರಾಗಿಯೂ ಎಲ್ಲೆಡೆ ಪರಿಚಿತರು. ಸಾಹಿತ್ಯದ ಜೊತೆಜೊತೆಗೆ ನಾಟಕಗಳಲ್ಲಿಯೂ ಜಿ ಕೆ ಗೋವಿಂದರಾವ್ ವಿಶೇಷ ಆಸಕ್ತಿ ಹೊಂದಿದ್ದರು. ಹಲವು ಸಿನಿಮಾ ಹಾಗೂ ಪ್ರಸಿದ್ಧ ಧಾರವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.
ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆ
ಹಿರಿಯ ರಂಗಕರ್ಮಿ ಪ್ರೋ.ಕೆ.ವಿ.ಗೋವಿಂದ ಅಂತ್ಯಕ್ರಿಯೆ ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿದಾಮದಲ್ಲಿ ನಡೆದಿದೆ. ಅವರ ಕೋರಿಕೆಯಂತೆ ಸರಳ ಅಂತ್ಯಕ್ರಿಯೆ ಮಾಡಲಾಗಿದ್ದು ಸಾವಿನ ಬಳಿಕ ನೇತ್ರದಾನ ಮಾಡಲಾಗಿದೆ. ಬೆಳಗ್ಗೆ 4:30 ಕ್ಕೆ ಹುಬ್ಬಳ್ಳಿಯ ಮಗಳ ಮನೆಯಲ್ಲಿ ಮೃತಪಟ್ಟಿದ್ದ ಜಿವಿಜಿ ಅಂತ್ಯಕ್ರಿಯೆ ಬೆಳಗ್ಗೆ 8:30 ಕ್ಕೆ ಮಾಡಲಾಗಿದೆ. ಅಂತ್ಯಕ್ರಿಯೆಯಲ್ಲಿ ಕೇವಲ ಕುಟುಂಬಸ್ಥರಷ್ಟೆ ಭಾಗಿಯಾಗಿದ್ದಾರೆ.
ಎಲೆಕ್ಟ್ರಿಕ್ ಚಿತೆಯಲ್ಲೇ ಅಂತ್ಯಕ್ರಿಯೆ ಮಾಡಲು ಕೇಳಿಕೊಂಡಿದ್ದರು
ಬೆಳಗ್ಗೆ 8 ಗಂಟೆಗೆ ಕುಟುಂಬದ ಸದಸ್ಯರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅತ್ಯಂತ ಸರಳವಾಗಿ ಅಂತ್ಯಕ್ರಿಯೆ ನಡೆಸುವಂತೆ ಕೇಳಿಕೊಂಡಿದ್ದ ಗೋವಿಂದ ರಾವ್ ಅವರ ಕೋರಿಕೆಯಂತೆಯೇ ಅಂತ್ಯಕ್ರಿಯೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಗೋವಿಂದ ರಾವ್ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಗಿದೆ. ತಮ್ಮ ಅಂತ್ಯಕ್ರಿಯೆ ಎಲೆಕ್ಟ್ರಿಕ್ ಚಿತೆಯಲ್ಲೇ ನೆರವೇರಿಸುವಂತೆ ಗೋವಿಂದ ರಾವ್ ಕೇಳಿಕೊಂಡಿದ್ದರು. ಆದರೆ ಹುಬ್ಬಳ್ಳಿಯಲ್ಲಿ ಎಲೆಕ್ಟ್ರಿಕ್ ಚಿತಗಾರ ಇಲ್ಲದೆ ಕಟ್ಟಿಗೆ ಬಳಸಿ ಅಗ್ನಿ ಸ್ಪರ್ಶ ಮಾಡಲಾಗಿದೆ.
‘ಮಠಾಧೀಶರ ಕಾಲಿಗೆ ಜನ ಬೀಳೋದು ನಿಲ್ಸೋವರೆಗೆ ದೇಶ ಉದ್ಧಾರವಾಗಲ್ಲ'
ಹಿರಿಯ ಚಿಂತಕ, ರಂಗಕರ್ಮಿ ಪ್ರೊ ಜಿ.ಕೆ.ಗೋವಿಂದರಾವ್ ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಅವರು ಚಲನಚಿತ್ರ, ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ
ಕನ್ನಡದ ಹಿರಿಯ ನಟ, ಚಿಂತಕ, ಪ್ರೊ.ಜಿ.ಕೆ ಗೋವಿಂದ ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಂಗಭೂಮಿ, ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿದಿದ್ದ ಅವರು, ತಮ್ಮ ಜನಪರ ನಿಲುವಿನಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಜಿ.ಕೆ. ಗೋವಿಂದ ರಾವ್ ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯಲ್ಲಿ ನೆರವೇರಿದೆ.
ಅವರ ನಿಧನದಿಂದ ಒಬ್ಬ ಅನನ್ಯ ಚಿಂತಕನನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಸಂತಾಪ
ಹಿರಿಯ ಚಿಂತಕ ಮತ್ತು ಸಾಹಿತಿ ಜಿ.ಕೆ.ಗೋವಿಂದರಾವ್ ಅವರ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಸಂತಾಪ ವ್ಯಕ್ತಪಡಿಸಿದ್ದಾರೆ. ಗೋವಿಂದರಾವ್ ಅವರು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಸಮಾಜದಲ್ಲಿ ಯಾವುದೇ ಸಮಸ್ಯೆ ಕಂಡುಬಂದಾಗ ದನಿ ಎತ್ತುತ್ತಿದ್ದರು. ಅವರ ನಿಧನದಿಂದ ಪ್ರಖರ ಚಿಂತಕರೊಬ್ಬರನ್ನು ಕಳೆದುಕೊಂಡಿದ್ದೇವೆ. ಅವರ ನಿಧನದ ನೋವನ್ನು ತಾಳಿಕೊಳ್ಳುವ ಶಕ್ತಿಯನ್ನು ಭಗವಂತನು ಕುಟುಂಬದ ಸದಸ್ಯರಿಗೆ ನೀಡಲಿ ಎಂದು ಸಚಿವರು ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.