ತರಕಾರಿ ಸಾಗಾಣಿಕೆ ಮಾಡುತ್ತಿದ್ದ ಗೂಡ್ಸ್ ವಾಹನದ ಮೇಲೆ ಐವರು ದರೋಡೆಕೋರರ ಗುಂಪು ದಾಳಿ ಮಾಡಿ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ವಿಫಲ ಯತ್ನ ನಡೆಸಿದ ಘಟನೆ ತಾಲೂಕಿನ ಇಂಡುವಾಳು ಸಮೀಪ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ(Bengaluru mysuru expressway)ಯಲ್ಲಿ ತಡರಾತ್ರಿ ಜರುಗಿದೆ.

ಮಂಡ್ಯ (ಆ.19): ತರಕಾರಿ ಸಾಗಾಣಿಕೆ ಮಾಡುತ್ತಿದ್ದ ಗೂಡ್ಸ್ ವಾಹನದ ಮೇಲೆ ಐವರು ದರೋಡೆಕೋರರ ಗುಂಪು ದಾಳಿ ಮಾಡಿ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ವಿಫಲ ಯತ್ನ ನಡೆಸಿದ ಘಟನೆ ತಾಲೂಕಿನ ಇಂಡುವಾಳು ಸಮೀಪ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ(Bengaluru mysuru expressway)ಯಲ್ಲಿ ತಡರಾತ್ರಿ ಜರುಗಿದೆ.

ಮದ್ದೂರಿನ ಗೂಡ್ಸ್ ವಾಹನದ ಚಾಲಕ ಚಂದ್ರು ಹಾಗೂ ದಯಾನಂದ ದರೋಡೆಕೋರರ ದಾಳಿಯಿಂದ ಯಾವುದೇ ಗಾಯಗಳಿಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ದರೋಡೆಕೋರರು ಮಾರಕಾಸ್ತ್ರ ಮತ್ತು ಕಲ್ಲುಗಳಿಂದ ದಾಳಿ ನಡೆಸಿದ ಪರಿಣಾಮ ಗೂv್ಸ… ವಾಹನದ ಮುಂಭಾಗದ ಗಾಜು ಸೇರಿದಂತೆ ಹಲವು ಭಾಗಗಳು ಜಖಂಗೊಂಡಿವೆ.

ಬೆಂಗಳೂರು-ಮೈಸೂರು ಹೆದ್ದಾರೀಲಿ ಅಪಘಾತ ಬಳಿಕ ಈಗ ದರೋಡೆ ಹಾವಳಿ..!

ಮದ್ದೂರು ಪಟ್ಟಣದ ಹಳೇ ಎಂ.ಸಿ.ರಸ್ತೆಯ ಮಹಾವೀರ ಚಿತ್ರಮಂದಿರದ ಬಳಿ ಇರುವ ನಿಡಘಟ್ಟಗ್ರಾಮದ ಪ್ರಸನ್ನ ತರಕಾರಿ ಮಂಡಿಗೆ ಚಾಲಕ ಚಂದ್ರು ಹಾಗೂ ದಯಾನಂದ ತಮ್ಮ ಟಾಟಾ ಏಸ್‌ (ಕೆ.ಎ.11 ಪಿ. 4158) ವಾಹನದಲ್ಲಿ ಮೈಸೂರಿನ ಎಪಿಎಂಸಿ ಮಾರುಕಟ್ಟೆಯಿಂದ ತರಕಾರಿ ತುಂಬಿಕೊಂಡು ಬರುತ್ತಿದ್ದರು. ಮಧ್ಯರಾತ್ರಿ 1.15ರ ಸುಮಾರಿಗೆ ಇಂಡುವಾಳು ಸಮೀಪದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ಬಳಿ ರಸ್ತೆ ವಿಭಜಕದ ಮಧ್ಯೆ ಬೆಳೆದುನಿಂತಿದ್ದ ಗಿಡಗಂಟೆಗಳ ಮಧ್ಯೆ ಅಡಗಿ ಕುಳಿತಿದ್ದ ಐವರು ದರೋಡೆಕೋರರ ಗುಂಪು ಏಕಾಏಕಿ ಹೆದ್ದಾರಿಗಿಳಿದು ಗೂv್ಸ… ವಾಹನವನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ.

ಈ ವೇಳೆ ಚಾಲಕ ಚಂದ್ರು ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಮತ್ತಷ್ಟುವೇಗವಾಗಿ ಚಾಲನೆ ಮಾಡಿಕೊಂಡು ಬಂದ ಪರಿಣಾಮ ದರೋಡೆ ಯತ್ನ ವಿಫಲವಾಗಿದೆ. ಈ ಸಂಬಂಧ ಮಂಡ್ಯಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬೆಂಗಳೂರು-ಮೈಸೂರು ಹೈವೇನಲ್ಲಿ ಬಸ್‌ಗಳ ಒನ್‌ವೇ ಸಂಚಾರಕ್ಕೆ ಲಗಾಮು..!