*  ಶೀಘ್ರ ಮೃತದೇಹ ತರುವುದಾಗಿ ಕೇಂದ್ರ ಭರವಸೆ*  ‘ಮೃತದೇಹ ತವರಿಗೆ ವಾಪಸ್‌ ತರುವುದು ನಮ್ಮ ಆದ್ಯತೆ: ಸಿಎಂ*  ನವೀನ್‌ ಕುಟುಂಬಕ್ಕೆ ಎಲ್ಲ ಸಹಾಯ, ಸಹಕಾರ 

ಬೆಂಗಳೂರು(ಮಾ.03): ಉಕ್ರೇನ್‌ನಲ್ಲಿ(Ukraine) ದಾಳಿಗೆ ಬಲಿಯಾಗಿರುವ ನವೀನ್‌ ಗ್ಯಾನಗೌಡರ್‌(Naveen Gyanagoudar) ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai ತಿಳಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್‌ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ನವೀನ್‌ ಕುಟುಂಬಕ್ಕೆ ಎಲ್ಲ ಸಹಾಯ, ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ನವೀನ್ ಪಾರ್ಥೀವ ಶರೀರವನ್ನು ತರುವ ಕೆಲಸ ನಡೆಯುತ್ತಿದೆ; ಪ್ರಹ್ಲಾದ್ ಜೋಶಿ

ನವೀನ್‌ ಅವರು ಹಾಕಿಕೊಂಡಿದ್ದ ಬಟ್ಟೆಗಳನ್ನು ಹೋಲುವ ಕೆಲವು ಛಾಯಾಚಿತ್ರಗಳನ್ನು ಆತನ ಸ್ನೇಹಿತರು ಕಳುಹಿಸಿಕೊಟ್ಟಿದ್ದಾರೆ. ಶೆಲ್‌ ದಾಳಿ ನಿಂತ ಮೇಲೆ ನವೀನ್‌ ಜೊತೆಗಿದ್ದವರು ತೆಗೆದ ಚಿತ್ರಗಳು ಅವು. ಈ ಬಗ್ಗೆ ವಿದೇಶಾಂಗ ಸಚಿವರೊಂದಿಗೆ ಹಾಗೂ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ(Indian Embassy) ಮಾತನಾಡಿ ನವೀನ್‌ ಪಾರ್ಥಿವ ಶರೀರವನ್ನು(Deadbody) ಪಡೆಯಲು ಗಂಭೀರ ಪ್ರಯತ್ನ ಮಾಡಲಾಗುವುದು ಎಂದರು.

ಭಾರತ ಸರ್ಕಾರ(Government of India) ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು(Indians) ತೆರವು ಮಾಡಲು ತೀವ್ರ ಪ್ರಯತ್ನ ಮಾಡುತ್ತಿದೆ. ಸುಮಾರು 26 ವಿಮಾನಗಳು(Flight) ಮುಂದಿನ 2-3 ದಿನಗಳಲ್ಲಿ ಕರೆತರುತ್ತಿದ್ದು, ಈ ಪೈಕಿ ಕನ್ನಡಿಗರನ್ನು(Kannadigas) ಕರೆತರಲು ಗರಿಷ್ಠ ಪ್ರಯತ್ನ ಮಾಡಲಾಗುವುದು. ಬೇರೆ ಬೇರೆ ನಗರಗಳಲ್ಲಿ ಇರುವವರನ್ನು ಬೇರೆ ಬೇರೆ ದಿಕ್ಕಿನಲ್ಲಿ ಬರಲು ತಿಳಿಸಲಾಗಿದೆ. ನಿರಂತರವಾಗಿ ಸಮನ್ವಯ ಮಾಡಲಾಗುತ್ತಿದೆ. ಯುದ್ಧ ನಡೆಯುತ್ತಿರುವುದರಿಂದ ಸ್ವಲ್ಪ ಕಷ್ಟವಾಗಿದೆ ಎಂದು ತಿಳಿಸಿದರು.

ನವೀನ್‌ ಜೊತೆಗಿದ್ದ ಗಾಯಾಳು ವಿದ್ಯಾರ್ಥಿಯ ಸ್ಥಿತಿಗತಿಯ ಬಗ್ಗೆ ವಿಚಾರಣೆ ನಡೆದಿದೆ. ಒಂದು ವರದಿಯ ಪ್ರಕಾರ ಜೊತೆಗಿದ್ದ ಎಂದು, ಮತ್ತೊಂದರ ಪ್ರಕಾರ ಇರಲಿಲ್ಲ. ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿಗಳಿವೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದರು.

ಶೆಲ್‌ನಿಂದಲ್ಲ, ಲೋಹ ಬಡಿದು ನವೀನ್‌ ಸಾವು: ಉದಾಸಿ ಶಂಕೆ

ನವದೆಹಲಿ: ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿ(Medical Student) ನವೀನ್‌ ಶೆಲ್‌ ಸ್ಫೋಟದ ವೇಳೆ ಉಂಟಾದ ತೀವ್ರತೆಯಿಂದ ಮೆಟಲ್‌ ಬಡಿದು ಮೃತಪಟ್ಟಿರುವ ಸಾಧ್ಯತೆಯಿದೆ ಎಂಬ ಶಂಕೆ ಇದೆ ಎಂದು ಸಂಸದ ಶಿವಕುಮಾರ್‌ ಉದಾಸಿ(Shivakumar Udasi) ತಿಳಿಸಿದ್ದಾರೆ.

ನವದೆಹಲಿಯಲ್ಲಿ ಬುಧವಾರ ಸಚಿವ ಜೈಶಂಕರ್‌ ಅವರನ್ನು ಭೇಟಿಯಾದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಲ್‌ ಆಗಿದ್ದರೆ ದೇಹದ ಅವಶೇಷಗಳು ದೊರಕುತ್ತಿರಲಿಲ್ಲ. ಆದರೆ ಸ್ಫೋಟದ ತೀವ್ರತೆಯಿಂದ ಯಾವುದಾದರೂ ಮೆಟಲ್‌ನಿಂದ ಪೆಟ್ಟು ಬಿದ್ದಿರುವ ಸಾಧ್ಯತೆ ಇದೆ ಎಂದರು.

Russia-Ukraine Crisis: ಶಿವ​ರಾ​ತ್ರಿ​ಯಂದೇ ಶಿವನ ಪಾದ ಸೇರಿ​ದೆಯಾ ಮಗ​ನೇ...: ಹೆತ್ತವ್ವಳ ಆಕ್ರಂದ​ನ..!

ಇದೇ ವೇಳೆ ನವೀನ್‌ ಮೃತದೇಹ ತರುವ ವಿಚಾರವಾಗಿ ವಿದೇಶಾಂಗ ಸಚಿವ ಜೈಶಂಕರ್‌ ಅವರಿಗೆ ಮನವಿ ಮಾಡಿದ್ದು, ಒಂದೆರಡು ದಿನದಲ್ಲಿ ತರುವ ಭರವಸೆ ನೀಡಿದ್ದಾರೆ. ನಮ್ಮ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಉಕ್ರೇನ್‌ ಮತ್ತು ರಷ್ಯಾ ಎರಡೂ ಕಡೆಗಳಿಂದ ಈ ಬಗ್ಗೆ ಮನವಿ ಮಾಡಿರುವುದಾಗಿ ಜೈಶಂಕರ್‌ ಹೇಳಿದ್ದಾರೆ ಎಂದು ಹೇಳಿದರು. ಇನ್ನು ನನ್ನ ಮತ ಕ್ಷೇತ್ರ ಸೇರಿದಂತೆ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆಯೂ ಸಚಿವರೊಂದಿಗೆ ಚರ್ಚೆ ಮಾಡಿದ್ದು ಇದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ನವೀನ್ ಸಾವು ಇಟ್ಟುಕೊಂಡು ಜಾತಿ, ಮೀಸಲಾತಿ ಬಗ್ಗೆ ಮಾತನಾಡುವುದು ತರವಲ್ಲ: ಅಶ್ವತ್ಥನಾರಾಯಣ

ಬೆಂಗಳೂರು: ಭಾರತದಲ್ಲಿ ದುಬಾರಿ ವೈದ್ಯಕೀಯ ಶಿಕ್ಷಣ, ಜಾತಿ ವ್ಯವಸ್ಥೆಯಿಂದ ನಮ್ಮ ದೇಶದ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಓದಿನ ಕನಸು ಹೊತ್ತುಕೊಂಡು ಅಗ್ಗವಾಗಿ ಶಿಕ್ಷಣ ಸಿಗುವ ಉಕ್ರೇನ್ ನಂತಹ ದೇಶಕ್ಕೆ ಹೋಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನು ಈ ಬಗ್ಗೆ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದು, ನವೀನ್ ಅವರ ಅಕಾಲಿಕ ನಿಧನ ನೋವಿನ ಸಂಗತಿಯಾಗಿದೆ. ಈ ದುಃಖದ ಸಮಯದಲ್ಲಿ ಸರಕಾರವು ಅವರ ಕುಟುಂಬದೊಂದಿಗೆ ನಿಲ್ಲಲಿದೆ, ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಜಾತಿ ವ್ಯವಸ್ಥೆ ಮತ್ತು ಮೀಸಲಾತಿ ಬಗ್ಗೆ ಮಾತನಾಡುವುದು ಅನುಚಿತವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದರು.