90 ದೇಶಗಳು ಏರ್‌ ಶೋದಲ್ಲಿ ಪಾಲ್ಗೊಂಡಿದ್ದು, 70 ವಿಮಾನಗಳು ಚಿತ್ತಾಕರ್ಷಕ ಪ್ರದರ್ಶನ ನೀಡಲಿವೆ. 5 ದಿನಗಳ ಅವಧಿಯಲ್ಲಿ 30 ದೇಶಗಳ ರಕ್ಷಣಾ ಮಂತ್ರಿಗಳು ಹಾಗೂ 7 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.

ಬೆಂಗಳೂರು(ಫೆ.11): ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿರುವ, ಐದು ದಿನಗಳ ಕಾಲ ನಡೆಯಲಿರುವ 15ನೇ ಆವೃತ್ತಿಯ ‘ಏರೋ ಇಂಡಿಯಾ’ಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸೋಮವಾರ ಚಾಲನೆ ನೀಡಿದರು. 

90 ದೇಶಗಳು ಏರ್‌ ಶೋದಲ್ಲಿ ಪಾಲ್ಗೊಂಡಿದ್ದು, 70 ವಿಮಾನಗಳು ಚಿತ್ತಾಕರ್ಷಕ ಪ್ರದರ್ಶನ ನೀಡಲಿವೆ. 5 ದಿನಗಳ ಅವಧಿಯಲ್ಲಿ 30 ದೇಶಗಳ ರಕ್ಷಣಾ ಮಂತ್ರಿಗಳು ಹಾಗೂ 7 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.

ಏಷ್ಯಾದ ಅತಿದೊಡ್ಡ ಏರ್ ಶೋಗೆ ಬೆಂಗಳೂರೇ ವೇದಿಕೆ | Aero India 2025 | Suvarna News

ಶಕ್ತಿ, ಸಂಶೋಧನೆಯ ಮಹಾ ಕುಂಭಮೇಳ

ಪ್ರಯಾಗರಾಜ್‌ನಲ್ಲಿ ದೇಶದ ಭಕ್ತಿ ಸಂಸ್ಕೃತಿಯ ಪ್ರತಿರೂಪವಾದ ಮಹಾಕುಂಭ ನಡೆಯುತ್ತಿದ್ದರೆ, ಯಲಹಂಕ ವಾಯುನೆಲೆಯಲ್ಲಿ ದೇಶದ ಶಕ್ತಿ ಹಾಗೂ ಸಂಶೋಧನೆ ಅನಾವರಣ ಮಾಡುವ ಮಹಾ ಕುಂಭಮೇಳ ಶುರುವಾಗಿದೆ. ಈ ಸಮ್ಮೇಳನ ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ತಿಳಿಸಿದ್ದಾರೆ.