Asianet Suvarna News Asianet Suvarna News

ಏಷ್ಯಾನೆಟ್ ಸುವರ್ಣ ನ್ಯೂಸ್ ನಿರೂಪಕಿ ಭಾವನಾ ನಾಗಯ್ಯಾಗೆ 'ಮಾಧ್ಯಮ ರತ್ನ' ಪ್ರಶಸ್ತಿ

* ಏಷ್ಯಾನೆಟ್ ಸುವರ್ಣ ನ್ಯೂಸ್ ಮುಡಿಗೆ ಮತ್ತೊಂದು ಗರಿ 
*ಏಷ್ಯಾನೆಟ್ ಸುವರ್ಣ ನ್ಯೂಸ್ ನಿರೂಪಕಿ ಭಾವನಾ ನಾಗಯ್ಯಾಗೆ 'ಮಾಧ್ಯಮ ರತ್ನ' ಪ್ರಶಸ್ತಿ
*  ಮುದ್ದೇಬಿಹಾಳದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನಿಂದ ನೀಡಲಾಗುವ ಈ ಮಾಧ್ಯಮ ರತ್ನ ಪ್ರಶಸ್ತಿ 

Asianetnews Anchor Bhavana Nagaiah Selected for muddebihal Madhyama Ratna Award rbj
Author
Bengaluru, First Published Jul 30, 2021, 7:46 PM IST
  • Facebook
  • Twitter
  • Whatsapp

ವಿಜಯಪುರ, (ಜು.30): ಏಷ್ಯಾನೆಟ್ ಸುವರ್ಣ ನ್ಯೂಸ್ ನಿರೂಪಕಿ ಭಾವನಾ ನಾಗಯ್ಯಾ ಅವರು 'ಮಾಧ್ಯಮ ರತ್ನ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಏಷ್ಯಾನೆಟ್ ಸುವರ್ಣ ನ್ಯೂಜ್ ಮುಡಿಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.

ಪ್ರತಿ ವರ್ಷ ಮುದ್ದೇಬಿಹಾಳದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನಿಂದ ನೀಡಲಾಗುವ ಈ ಮಾಧ್ಯಮ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಅದರಂತೆ 2020-21ನೇ ಸಾಲಿನ ಪ್ರಶಸ್ತಿಗೆ ಭಾವನಾ ನಾಗಯ್ಯ ಆಯ್ಕೆಯಾಗಿದ್ದಾರೆ.

 ಕನ್ನಡಪ್ರಭ ವರದಿಗಾರ ಸಂದೀಪ್‌ಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ

ಬರುವ ಆಗಷ್ಟ್ 7 ರಂದು ಮುದ್ದೇಬಿಹಾಳ ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಅಂದು ಭಾವನಾ ನಾಗಯ್ಯಾಗೆ 'ಮಾಧ್ಯಮ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಇನ್ನು ಈ ಕಾರ್ಯಕ್ರಮವನ್ನು ನಾಡೋಜ ಮಹೇಶ ಜೋಶಿ ಉದ್ಘಾಟಿಸಲಿದ್ದಾರೆ. ಎಂದು ಮುದ್ದೇಬಿಹಾಳದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಿಳಿಸಿದೆ.

Follow Us:
Download App:
  • android
  • ios