Asianet Suvarna News Asianet Suvarna News

ಮುಂಬೈನ ಧಾರಾವಿ ಕೊಳಗೇರಿಯಲ್ಲಿರುವ ಕನ್ನಡಿಗರ ಪಾಲಿಗೆ ದೇವರಾದ ಅಶ್ವತ್ಥ್ ನಾರಾಯಣ

ಮುಂಬೈನ ಧಾರಾವಿ ಕೊಳಗೇರಿಯಲ್ಲಿರುವ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ ಅವರಿಂದ ಮೆಚ್ಚುಗೆ ಕಾರ್ಯ...

ashwath narayan Team distributes 500 ration kit to kannadigas stranded in dharavi mumbai
Author
Bengaluru, First Published May 24, 2020, 9:08 PM IST

ಬೆಂಗಳೂರು, (ಮೇ.24): ಮುಂಬೈನ ಧಾರಾವಿ ಕೊಳಗೇರಿಯಲ್ಲಿರುವ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ಅವರು 500 ದಿನಸಿ ಕಿಟ್‌ಗಳನ್ನು ತಲುಪಿಸಿದ್ದಾರೆ. 

ಕೋವಿಡ್ ಲಾಕ್‌ ಡೌನ್‌ನಿಂದಾಗಿ ಮುಂಬಯಿನ ಧಾರಾವಿ ಪ್ರದೇಶದಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಈ ಮಾಹಿತಿ ದೊರೆತ ತಕ್ಷಣ ಡಾ. ಅಶ್ವತ್ಥ್ ನಾರಾಯಣ, ತಮ್ಮ ಸಹಾಯಹಸ್ತ ಚಾಚಿದ್ದಾರೆ.

ದೂರವಾಯ್ತು ಐಪಿಎಲ್ ಆಯೋಜನೆ ವಿಘ್ನ, 64ರ ವೃದ್ದೆಗೆ 26ರ ಯುವಕನ ಜೊತೆ ಲಗ್ನ; ಮೇ.24ರ ಟಾಪ್ 10 ಸುದ್ದಿ!

ದಿನಸಿ ಪದಾರ್ಥಗಳಿರುವ 500 ಕಿಟ್‌ಗಳನ್ನು ಮುಂಬಯಿಗೆ ತಲುಪಿಸಿದ್ದಾರೆ. ಸ್ಥಳೀಯ ಮುಂಖಡರು ಆ ಕಿಟ್‌ಗಳನ್ನು ಭಾನುವಾರ ಸಂತ್ರಸ್ತರಿಗೆ ವಿತರಿಸಿದರು. 

ಈ ಬಗ್ಗೆ ಅಲ್ಲಿನ ವ್ಯಕ್ತಿಯೋರ್ವ ತಮ್ಮ ಪ್ರತಿಕ್ರಿಯೆಯನ್ನು ಅಶ್ವತ್ಥ್ ನಾರಾಯಣ ಅವರಿಗೆ ಕಳುಹಿಸಿದ್ದು, ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು, ಫಲಾನುಭವಿಗಳ ಕೃತಜ್ಞತಾಪೂರ್ವಕ ಮಾತುಗಳು ನಮಗೆ ಮತ್ತಷ್ಟು ಕೆಲಸ ಮಾಡಲು ಪ್ರೇರಣೆ. ನಿಮ್ಮ ಹಿತರಕ್ಷಣೆ ನಮಗೆ ಪ್ರಮುಖ ಆದ್ಯತೆ. ಸಂಕಷ್ಟದಲ್ಲಿರುವ ನಮ್ಮ ಕನ್ನಡಿಗ ಬಾಂಧವರಿಗೆ ಸಹಾಯಹಸ್ತ ನೀಡಿದ ಈ ಸಾರ್ಥಕತೆಯ ಭಾವಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದಿದ್ದಾರೆ.

ಈ ಮಧ್ಯೆ ಬಿಹಾರ ಹಾಗೂ ಒಡಿಶಾಗೆ ಪ್ರಯಾಣ ಬೆಳೆಸಿರುವ ವಲಸೆ ಕಾರ್ಮಿಕರನ್ನು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಭಾನುವಾರ ಭೇಟಿ ಮಾಡಿ ಅವರಿಗೆ ಆಹಾರ ಪೊಟ್ಟಣಗಳನ್ನು ಕೊಟ್ಟರು.

Follow Us:
Download App:
  • android
  • ios