Asianet Suvarna News Asianet Suvarna News

ಪ್ರಶಸ್ತಿಗೆ ಚೂಪಾದ ರೆಕ್ಕೆ ಇದ್ದ ಕಾರಣಕ್ಕೆ ಸಂದೇಹ; ಕಲಾವಿದ ವೀರ್ ದಾಸ್‌ ‘ಎಮ್ಮಿ’ಪ್ರಶಸ್ತಿ ಏರ್ಪೋರ್ಟನಲ್ಲಿ ತಪಾಸಣೆ!

ನಟ ಹಾಗೂ ಹಾಸ್ಯ ಕಲಾವಿದ ವೀರ್‌ ದಾಸ್ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಎಮ್ಮಿ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ‘ಇದಾದ ಬಳಿಕ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿ ನನ್ನ ಪ್ರಶಸ್ತಿಯ ಟ್ರೋಫಿಯನ್ನು ತಪಾಸಣೆಗೆ ಒಳಪಡಿಸಿದರು’ ಎಂಬ ಸ್ವಾರಸ್ಯಕರ ಸಂಗತಿಯೊಂದನ್ನು ವೀರ್‌ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

Artist Veer Das 'Emmy' award check in Bengaluru airport rav
Author
First Published Nov 27, 2023, 6:18 AM IST

ಬೆಂಗಳೂರು (ನ.27): ನಟ ಹಾಗೂ ಹಾಸ್ಯ ಕಲಾವಿದ ವೀರ್‌ ದಾಸ್ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಎಮ್ಮಿ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ‘ಇದಾದ ಬಳಿಕ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿ ನನ್ನ ಪ್ರಶಸ್ತಿಯ ಟ್ರೋಫಿಯನ್ನು ತಪಾಸಣೆಗೆ ಒಳಪಡಿಸಿದರು’ ಎಂಬ ಸ್ವಾರಸ್ಯಕರ ಸಂಗತಿಯೊಂದನ್ನು ವೀರ್‌ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಭದ್ರತಾ ಸಿಬ್ಬಂದಿಯೊಬ್ಬರು ‘ಬ್ಯಾಗ್‌ನಲ್ಲಿ ಚೂಪಾದ ಮೂರ್ತಿ ಇದೆಯೇ’ ಎಂದು ಪ್ರಶ್ನಿಸಿದಾಗ ‘ಇಲ್ಲ ಸರ್‌ ಅದು ಪ್ರಶಸ್ತಿ. ಅದಕ್ಕೆ ಚೂಪಾದ ರೆಕ್ಕೆ ಇವೆ’ ಎಂದು ವೀರ್‌ ಹೇಳಿದ್ದಾರೆ. ಬಳಿಕ ಅದನ್ನು ತೆಗೆದು ಅಧಿಕಾರಿಗೆ ತೋರಿಸಿದಾಗ ಅವರು ‘ಚೆನ್ನಾಗಿದೆ. ನೀವೇನು ಮಾಡುತ್ತೀರಿ’ ಎಂದು ಕೇಳಿದ್ದಾರೆ. ಅದಕ್ಕೆ ವೀರ್‌, ‘ಜೋಕ್‌ ಮಾಡುತ್ತೇನೆ’ ಎಂದಿದ್ದಾರೆ. ಹೀಗೆ ಇಬ್ಬರ ಸಂಭಾಷಣೆ ನಗುವಿನಲ್ಲಿ ಅಂತ್ಯವಾಗಿದೆ. ಎಮ್ಮಿ ಪ್ರಶಸ್ತಿ ಟ್ರೋಫಿಯು ಮನುಷ್ಯಾಕಾರದಲ್ಲಿದ್ದು, ಇದರ ಬಾಹುಗಳಿಗೆ ಎರಡು ಚೂಪಾದ ರೆಕ್ಕೆಗಳಿವೆ.

ಒಳ ಉಡುಪಿನಲ್ಲಿ ಚಿನ್ನ ಕಳ್ಳಸಾಗಣೆ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 1.26 ಕೋಟಿ ಮೌಲ್ಯದ ಚಿನ್ನ ವಶ

ಚಾಕು, ಟ್ರೇನಲ್ಲಿ ಚಿನ್ನ ಕಳ್ಳಸಾಗಣೆ; ಇಬ್ಬರ ಬಂಧನ

ಬೆಂಗಳೂರು:  ಚಾಕು ಹಾಗೂ ಟ್ರೇಗಳಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿ 298 ಗ್ರಾಂ ತೂಕದ ಚಿನ್ನ ಜಪ್ತಿ ಮಾಡಿದ್ದಾರೆ.

ದುಬೈನಿಂದ ಕುಟುಂಬ ಸಮೇತ ಬೆಂಗಳೂರಿಗೆ ಬಂದಿಳಿದ ಎಚ್‌ಡಿಕೆ; ಬರುತ್ತಲೇ ಕಾಂಗ್ರೆಸ್ ವಿರುದ್ಧ ಕಿಡಿ

ಶನಿವಾರ ದುಬೈನಿಂದ ಬಂದ 6-ಇ-1486 ಸಂಖ್ಯೆಯ ವಿಮಾನದ ಪ್ರಯಾಣಿಕರನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಇಬ್ಬರು ಪ್ರಯಾಣಿಕರ ಲಗೇಜ್‌ಗಳನ್ನು ತಪಾಸಣೆ ಮಾಡಿದಾಗ ಎರಡು ಚಾಕುಗಳು ಹಾಗೂ ಟ್ರೇಗಳಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆ ಇಬ್ಬರು ಪ್ರಯಾಣಿಕರನ್ನು ಬಂಧಿಸಿ, 298 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios