ದುಬೈನಿಂದ ಕುಟುಂಬ ಸಮೇತ ಬೆಂಗಳೂರಿಗೆ ಬಂದಿಳಿದ ಎಚ್‌ಡಿಕೆ; ಬರುತ್ತಲೇ ಕಾಂಗ್ರೆಸ್ ವಿರುದ್ಧ ಕಿಡಿ

ಕಳೆದ ಶನಿವಾರ ಕುಟುಂಬದೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಂದು ದುಬೈನಿಂದ ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿಳಿದರು. ಯುಎಇ ಒಕ್ಕಲಿಗರ ಸಂಘ ಅ.29ರಂದು ದುಬೈನಲ್ಲಿ ಆಯೋಜಿಸಿದ್ದ ಕೆಂಪೇಗೌಡ ಉತ್ಸವದಲ್ಲಿ ಭಾಗಿಯಾಗುವುದಕ್ಕಾಗಿ ತೆರಳಿದ್ದರು.

HDK landed in Bangalore with his family from Dubai today rav

ಬೆಂಗಳೂರು (ನ.2): ಕಳೆದ ಶನಿವಾರ ಕುಟುಂಬದೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಂದು ದುಬೈನಿಂದ ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿಳಿದರು. ಯುಎಇ ಒಕ್ಕಲಿಗರ ಸಂಘ ಅ.29ರಂದು ದುಬೈನಲ್ಲಿ ಆಯೋಜಿಸಿದ್ದ ಕೆಂಪೇಗೌಡ ಉತ್ಸವದಲ್ಲಿ ಭಾಗಿಯಾಗುವುದಕ್ಕಾಗಿ ತೆರಳಿದ್ದರು.

ಕೆಂಪೆಗೌಡ ಏರ್‌ಪೋರ್ಟ್‌ಗೆ ಆಗಮಿಸುತ್ತಲೇ ಎದುರಾದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಮೂರು ದಿನಗಳಿಂದ ನಾನು ರಾಜ್ಯದಲ್ಲಿಲ್ಲ. ಇಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು ಸೂಟ್ಕೇಸ್ ತೆಗೆದುಕೊಂಡು ಹೋಗಲು ಬಂದಿದ್ದರೋ ಅಥವಾ ಜಗಳ ಸರಿ ಮಾಡಲು ಬಂದಿದ್ದರು ಗೊತ್ತಿಲ್ಲ. ದೆಹಲಿಯಿಂದ ಬರೋದು ಇಲ್ಲಿ ಕಲೆಕ್ಷನ್ ತೆಗೆದುಕೊಂಡು ಹೋಗೋದಕ್ಕೆ ಅಲ್ಲವೇ? ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ಎಚ್‌ಡಿಕೆಗೆ ದಾಖಲೆ ಕೇಳಿದ್ದಕ್ಕೆ ಜೆಡಿಎಸ್ ಕಾರ್ಯಕರ್ತನಿಂದ ಕಾಂಗ್ರೆಸ್ ವಕ್ತಾರರಿಗೆ ಬೆದರಿಕೆ

ಈ ವೇಳೆ ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಚರ್ಚೆ ನಡುವೆಯೇ ನಾನೇ ಐದು ವರ್ಷ ಸಿಎಂ ಅಂದಿರೋ ಸಿದ್ದರಾಮಯ್ಯರ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಐದು ವರ್ಷಕ್ಕಾಗಿ ಜನ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಅವರೇ ಐದು ವರ್ಷ ಸಿಎಂ ಅಂತ ಹೇಳೋದ್ರಲ್ಲಿ ತಪ್ಪೇನಿದೆ. ಆ ಪಕ್ಷದ ಬೆಳವಣಿಗೆಗಳ ಬಗ್ಗೆ ಅವರನ್ನು ಕೇಳಿ ನನ್ನನ್ನು ಕೇಳಿದರೆ ಏನು ಪ್ರಯೋಜನ. ನಾನು ದುಬೈನಲ್ಲಿದ್ದೆ. ಅಧಿಕಾರದಿಂದ ಕೆಳಗಿಳಿಸುವ ಕಾಂಗ್ರೆಸ್‌ನಿಂದಲೇ ನಡೆಯುತ್ತಿದೆ. ಷಡ್ಯಂತ್ರ ನಮ್ಮಿಂದ ನಡೆಯುತ್ತಿಲ್ಲ ಎಂದರು.

 

ಎಚ್‌ಡಿಕೆ ಮುಂದೆ ಬಿಟ್ಟು ಬಿಜೆಪಿ ನಾಯಕರು ಹೇಡಿಗಳಂತೆ ವರ್ತಿಸುತ್ತಿದ್ದಾರೆ: ಎಂ.ಲಕ್ಷ್ಮಣ್‌

Latest Videos
Follow Us:
Download App:
  • android
  • ios