Asianet Suvarna News Asianet Suvarna News

ಗಡಿಯಲ್ಲೇ ಮಹಾ ಸಚಿವರನ್ನ ಬಂಧಿಸಿ: ವಾಟಾಳ್‌ ಆಗ್ರಹ

ಗಡಿನಾಡಿನ ಸಮಸ್ಯೆ ಬಹಳ ಗಂಭೀರವಾಗಿದ್ದು, ಮಹಾರಾಷ್ಟ್ರ ಸರ್ಕಾರದವರು ಉದ್ದೇಶಪೂರ್ವಕವಾಗಿ ದಾಳಿ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರವು ಗಡಿನಾಡಿನ ವಿಚಾರದಲ್ಲಿ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಕಿಡಿಕಾರಿದ್ದಾರೆ.

Arrest maharashtra Ministers at karnataka border vatala nagaraj demands rav
Author
First Published Nov 29, 2022, 10:14 PM IST

ಬೆಂಗಳೂರು (ನ.29) : ಗಡಿನಾಡಿನ ಸಮಸ್ಯೆ ಬಹಳ ಗಂಭೀರವಾಗಿದ್ದು, ಮಹಾರಾಷ್ಟ್ರ ಸರ್ಕಾರದವರು ಉದ್ದೇಶಪೂರ್ವಕವಾಗಿ ದಾಳಿ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರವು ಗಡಿನಾಡಿನ ವಿಚಾರದಲ್ಲಿ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಕಿಡಿಕಾರಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾರಾಷ್ಟ್ರದವರು ಕರ್ನಾಟಕದ ಮೇಲೆ ಮಾಡುತ್ತಿರುವ ದಾಳಿಯು ರಾಜಕೀಯ ಧೋರಣೆಯಾಗಿದೆ. ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ್‌ ಪಾಟೀಲ್‌, ಶಂಭುರಾಜ್‌ ದೇಸಾಯಿ ಅವರು ಎಂಇಎಸ್‌ನವರು ಮಾತನಾಡಲು ಕರೆದಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರುವುದಾಗಿ ಹೇಳಿದ್ದಾರೆ. ಗಡಿಯಲ್ಲಿ ಪಾಟೀಲ್‌ ಮತ್ತು ದೇಸಾಯಿ ಅವರನ್ನು ಬಂಧನ ಮಾಡಬೇಕು. ಅವರನ್ನು ಕರ್ನಾಟಕಕ್ಕೆ ಬರಲು ಬಿಡಬಾರದು. ಬೆಳಗಾವಿ ಜೈಲಿನಲ್ಲಿ ಅವರನ್ನು ಇಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ ಎಂದರು.

Chamarajanagar: ಸಚಿವ ಸುಧಾಕರ್‌ ರಾಜೀನಾಮೆಗೆ ವಾಟಾಳ್‌ ನಾಗರಾಜ್‌ ಆಗ್ರಹ

ರಾಜ್ಯ ಪುನರ್‌ವಿಂಗಡಣೆ ಕಾಲದಿಂದಲೂ ಬೆಳಗಾವಿ, ಕಾರವಾಡ, ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗ. ವೈ.ವಿ.ಚೌಹಾಣ್‌ ಅವರು ಗೃಹ ಸಚಿವರಾಗಿದ್ದ ಸಮಯದಲ್ಲಿ ಮಹಾಜನ್‌ ವರದಿ ನೇಮಕ ಆಗಿದೆ. ಕರ್ನಾಟಕವು ಯಾವುದೇ ಆಯೋಗಕ್ಕೆ ಒಪ್ಪಿರಲಿಲ್ಲ. ಮಹಾರಾಷ್ಟ್ರದವರೇ ಒತ್ತಾಯಿಸಿದ್ದರು. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಮಹಾಜನ್‌ ಆಯೋಗ ಮಾಡಲಾಗಿತ್ತು. ಮಹಾಜನ್‌ ಆಯೋಗದ ತೀರ್ಪು ಸಹ ಬೆಳಗಾವಿ, ಕಾರವಾರ, ನಿಪ್ಪಾಣಿ, ಕಾಸರಗೋಡು, ಸೊಲ್ಲಾಪುರ ಕರ್ನಾಟಕದ್ದೇ ಎಂದು ಹೇಳಿದೆ. ಮಹಾರಾಷ್ಟ್ರದವರು ಅದನ್ನು ಒಪ್ಪದೇ ಗಲಾಟೆ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನೆ ಮುಖಂಡರು ಅನಗತ್ಯ ಗಲಾಟೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರದವರಿಗೆ ಒಂದಗಲ ಜಾಗ ಬಿಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ಸರ್ಕಾರ ವಿರುದ್ಧ ಕರ್ನಾಟಕ ಉದ್ದಗಲಕ್ಕೂ ಭಾರೀ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು. Bengaluru: ಡಾ.ರಾಜ್‌ ರಸ್ತೆ ದುರಸ್ತಿಗೆ ಬಿಬಿಎಂಪಿ ಆಯುಕ್ತ ತುಷಾರ್‌ ಸೂಚನೆ

Follow Us:
Download App:
  • android
  • ios