Asianet Suvarna News Asianet Suvarna News

ಕುಡಿಯುವ ನೀರಿಗೆ ಆಧಾರವಾಗಿದ್ದ ಅರ್ಕಾವತಿ ನದಿ‌ ಕಲುಷಿತ; ಡಿಸಿಎಂ ತವರು ಜಿಲ್ಲೆಗೇ ಇದೆಂಥ ದುಸ್ಥಿತಿ!

ರಾಮನಗರ ಟೌನ್ ಹೃದಯ ಭಾಗದಲ್ಲಿ ಹರಿಯುವ ಅರ್ಕಾವತಿ ನದಿ ಸಂಪೂರ್ಣ ಕಲುಷಿತವಾಗಿದ್ದು ನದಿಯ ಅಕ್ಕ ಪಕ್ಕ ಓಡಾಡಲು ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಯ ಎರಡು ದಡಗಳಲ್ಲಿ ಸಾವಿರಾರು ಮನೆಗಳಿದ್ದು ಅಲ್ಲಿ ವಾಸಿಸುವ ಜನರ ಪರಿಸ್ಥಿತಿ ದೇವರಿಗೆ ಪ್ರೀತಿ. 

Arkavati river in Ramnagar is polluted rav
Author
First Published Nov 7, 2023, 11:31 PM IST

ವರದಿ - ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ನ.7): ರಾಮನಗರ ಟೌನ್ ಹೃದಯ ಭಾಗದಲ್ಲಿ ಹರಿಯುವ ಅರ್ಕಾವತಿ ನದಿ ಸಂಪೂರ್ಣ ಕಲುಷಿತವಾಗಿದ್ದು ನದಿಯ ಅಕ್ಕ ಪಕ್ಕ ಓಡಾಡಲು ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಯ ಎರಡು ದಡಗಳಲ್ಲಿ ಸಾವಿರಾರು ಮನೆಗಳಿದ್ದು ಅಲ್ಲಿ ವಾಸಿಸುವ ಜನರ ಪರಿಸ್ಥಿತಿ ದೇವರಿಗೆ ಪ್ರೀತಿ. 

ನದಿ ಕಲುಷಿತವಾಗಲು ಕಾರಣವೇನು?

ರೇಷ್ಮೆ ನಗರಿ ಎಂದೇ ಖ್ಯಾತಿ ಪಡೆದಿದ್ದ ರಾಮನಗರಕ್ಕೆ ಕಳಶದಂತಿದ್ದ ಅರ್ಕಾವತಿ ನದಿ ಈ ನದಿ ನಂದಿ ಬೆಟ್ಟದಿಂದ ಆರಂಭವಾಗಿ ಕನಕಪುರದ ಸಂಗಮದಲ್ಲಿ ಅಂತ್ಯವಾಗುತ್ತೆ. ಇನ್ನೂ ರಾಮನಗರದ ಟೌನ್ ನಲ್ಲಿ ನಾಲ್ಕು ಕಿಲೋಮೀಟರ್ ಹರಿದುಹೋಗುವ ನದಿಯ ನೀರನ್ನು ಜನರು ಕುಡಿಯಲು ಹಾಗೂ ದಿನ ಬಳಕೆಗೆ ಬಳಸುತ್ತಿದ್ದರು, ಆದರೆ ಟೌನ್ ಯುಜಿಡಿ ನೀರನ್ನು ಒಳಗೆ ಬಿಡಲು ನಗರಸಭೆ ಮುಂದಾಯಿತು ಅವತ್ತಿನಿಂದ ಇವತ್ತಿನವರೆಗೆ ನದಿಯ ನೀರು ಸಂಪೂರ್ಣ ಕಲುಷಿತವಾಗಿದ್ದು ಇನ್ನೂ ಕೂಡ ನಗರಸಭೆ ಹಲವಾರು ವಾರ್ಡ್ ಗಳಿಗೆ ಈ ನೀರನ್ನು ಶುದ್ಧೀಕರಣಮಾಡಿ ಕುಡಿಯಲು ನೀಡುತ್ತಿದ್ದಾರೆ.

ಅಬಕಾರಿ ಇಲಾಖೆಯಿಂದ ಭಾರೀ ಮದ್ಯಸಾರ ಬೇಟೆ; ಶಾಸಕ‌ ಸೈಲ್‌ಗೆ ಕಂಟಕವಾಯ್ತಾ ಪ್ರಕರಣದ ಮಧ್ಯ ಪ್ರವೇಶ?

ಡಿಸಿಎಂ ಡಿಕೆಶಿ ತವರು ಜಿಲ್ಲೆಯಲ್ಲಿ ಇಂದೆಂತಾಹಾ ದುಸ್ಥಿತಿ!

ಇನ್ನು ನದಿಯ ಎರಡು ಬದಿಯಲ್ಲಿ ಸಾವಿರಾರು ಮನೆಗಳು ನಿರ್ಮಾಣವಾಗಿದ್ದು, ಮನೆಗಳಲ್ಲಿ ವಾಸಿಸುವ ಜನರ ಪರಿಸ್ಥಿತಿ ಮತ್ಯಾರಿಗೂ ಬೇಡ ಒಂದು ಕಡೆ ದುರ್ವಾಸನೆ ಮತ್ತೊಂದು ಕಡೆ ನದಿಯಲ್ಲಿ ಜಂಡು ಬೆಳೆದುಕೊಂಡು ಹಾವು ಚೇಳುಗಳ ಕಾಟ ಮತ್ತೆ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇದರ ಬಗ್ಗೆ ನಗರ ಸಭೆಗೆ ಎಷ್ಟೇ ಮನವಿ ಮಾಡಿದ್ರು, ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪರಿಸ್ಥಿತಿ ನಗರ ಸಭೆ ಮಾಡುತ್ತಿದೆ ಇದರಿಂದಾಗಿ ಹಲವಾರು ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

 

ಕಲುಷಿತ ನೀರು ಅಥವಾ ಆಹಾರ ಸೇವನೆ ಶಂಕೆ ಒಂದೇ ಗ್ರಾಮದ  28 ಮಂದಿ ಅಸ್ವಸ್ಥ

ನೀರು ಕಲುಷಿತವಾಗಿದ್ದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಅರ್ಕಾವತಿ ನದಿ ತನ್ನ ಸ್ವರೂಪ ಬದಲಾಯಿಸಿದ್ದು ಇದರಿಂದ ರಾಮನಗರ ಜನತೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಈ ನದಿಯ ಸುದ್ದಿಕರಣ ಮಾಡಿ ಇಲ್ಲವಾದರೆ ಇದು ಕೂಡ ರಾಜಕಾಲುವೆ ಆಗುವುದಕ್ಕೆ ಬಿಡಬೇಡಿ ಎಂದು ಜನರ ಒತ್ತಾಯಿಸಿದ್ದಾರೆ.

Follow Us:
Download App:
  • android
  • ios