'ಅಡಕೆ ಮಾದಕ ವಸ್ತುವೇ ಅಲ್ಲ' : ಡ್ರಗ್ಸ್ ಪಟ್ಟಿಯಿಂದ ಹೊರಕ್ಕೆ

ಕರ್ನಾಟಕ ಸರ್ಕಾರ ಅಡಕೆಯನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿದ್ದು ಇದೀಗ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ. ಅಡಕೆ ಒಂದು ಮಾದಕ ವಸ್ತುವೆ ಅಲ್ಲ. ಶೀಘ್ರ ಪಟ್ಟಿಯಿಂದ ಹೊರಕ್ಕಿಡುವುದಾಗಿ ಸಚಿವರೇ ಸ್ಪಷ್ಟಪಡಿಸಿದ್ದಾರೆ. 

Areca Is Not Drug Minister Sudhakar Clarifies snr

ಶಿರಸಿ (ಫೆ.01):  ಅಡಕೆ ಮಾದಕ ವಸ್ತು ಅಲ್ಲವೇ ಅಲ್ಲ. ಈ ಕುರಿತು ಈಗಾ​ಗಲೇ ಗೃಹ ಸಚಿವರೂ ಸ್ಪಷ್ಟನೆ ನೀಡಿ​ದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಸುಧಾಕರ್‌ ಹೇಳಿದರು.

ಸರ್ಕಾ​ರದ ವೆಬ್‌​ಸೈ​ಟ್‌​ನಲ್ಲೇ ಅಡ​ಕೆಯನ್ನು ಮಾದ​ಕ​ವ​ಸ್ತು​ಗಳ ವಿಭಾ​ಗ​ದಡಿ ಪಟ್ಟಿ​ ಮಾಡಿದ್ದ ವಿಚಾ​ರಕ್ಕೆ ಸಂಬಂಧಿ​ಸಿ ನಗ​ರ​ದಲ್ಲಿ ಭಾನು​ವಾರ ಸುದ್ದಿ​ಗಾ​ರರ ಪ್ರಶ್ನೆ​ಯೊಂದಕ್ಕೆ ಪ್ರತಿ​ಕ್ರಿ​ಯಿ​ಸಿದ ಅವ​ರು, ಅಡಕೆ ಮಾದಕ ವಸ್ತು ಅಲ್ಲ. ಆದರೆ, ಅದರೊಂದಿಗೆ ಬೆರೆಸಿ ತಿನ್ನುವ ವಸ್ತು ಸರಿ​ಯಿ​ರ​ಬೇಕು. ಅಡ​ಕೆಯ ಕುರಿತು ಈಗಾ​ಗಲೇ ಬೊಮ್ಮಾಯಿ ಅವರೇ ಸ್ಪಷ್ಟನೆ ನೀಡಿ​ದ್ದಾರೆ. ಹೀಗಾಗಿ ಅಡ​ಕೆ​ಯನ್ನು ಮಾದ​ಕ​ವ​ಸ್ತು​ಗಳ ಪಟ್ಟಿ​ಯಿಂದ ತೆಗೆ​ಯಲು ಕ್ರಮ ಕೈಗೊ​ಳ್ಳ​ಲಾ​ಗಿದೆ ಎಂದ​ರು.

ಸರ್ಕಾರಿ ವೆಬ್‌ಸೈಟ್‌ನಲ್ಲೇ ಅಡಕೆಗೆ ಡ್ರಗ್ಸ್‌ ಪಟ್ಟ! ...

ಸರ್ಕಾ​ರದ ಕೃಷಿ ಮಾರಾಟ ವಾಹಿನಿ ವೆಬ್‌​ಸೈ​ಟ್‌​ನಲ್ಲಿ ಅಡ​ಕೆ​ಯನ್ನು ಮಾದ​ಕ​ವ​ಸ್ತು​ಗಳ ವಿಭಾ​ಗ​ದಡಿ ಪಟ್ಟಿ​ ಮಾಡ​ಲಾ​ಗಿ​ತ್ತು. ಈ ಕುರಿತು ‘ಸರ್ಕಾರಿ ವೆಬ್‌​ಸೈ​ಟ್‌​ನಲ್ಲೇ ಅಡ​ಕೆಗೆ ಡ್ರಗ್ಸ್‌​ಪಟ್ಟ’ ಎಂಬ ಶೀರ್ಷಿ​ಕೆ​ಯಲ್ಲಿ  ವರದಿ ಪ್ರಕ​ಟಿ​ಸಿ​ತ್ತು. ಸರ್ಕಾ​ರದ ಈ ಕ್ರಮಕ್ಕೆ ಅಡಕೆ ಬೆಳೆ​ಗಾ​ರ​ರಿಂದ ತೀವ್ರ ಆಕ್ರೋ​ಶವೂ ವ್ಯಕ್ತ​ವಾ​ಗಿ​ತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರಾವಳಿ ಮತ್ತು ಮಲೆನಾಡು ಶಾಸಕರು ಸದನದಲ್ಲಿ ಪ್ರಸ್ತಾಪಿಸಿ ಸರಿಪಡಿಸುವಂತೆ ಒತ್ತಾಯಿಸಿದ್ದರು.

Latest Videos
Follow Us:
Download App:
  • android
  • ios